You are currently viewing Karnataka Budget 2026-27 : ಇಂದಿನ ಬಜೆಟ್‌ನಲ್ಲಿ ಇಲಾಖಾವಾರು ಹಂಚಿಕೆ & ಪ್ರಮುಖ ಯೋಜನೆಗಳ ಪೂರ್ಣ ವಿವರ..!

Karnataka Budget 2026-27 : ಇಂದಿನ ಬಜೆಟ್‌ನಲ್ಲಿ ಇಲಾಖಾವಾರು ಹಂಚಿಕೆ & ಪ್ರಮುಖ ಯೋಜನೆಗಳ ಪೂರ್ಣ ವಿವರ..!

Karnataka Budget 2026-27 : ಇಂದಿನ ಬಜೆಟ್‌ನಲ್ಲಿ ಇಲಾಖಾವಾರು ಹಂಚಿಕೆ & ಪ್ರಮುಖ ಯೋಜನೆಗಳ ಪೂರ್ಣ ವಿವರ..!

ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ :

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್ : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು 17ನೇ ಬಾರಿಗೆ ಬಜೆಟ್ ಮಂಡಿಸಿದ್ದು, ಈ ಬಜೆಟ್‌ನಲ್ಲಿ ಜನಸಾಮಾನ್ಯರ ನಿರೀಕ್ಷೆಯಂತೆ ವಸತಿ, ಕೃಷಿ, ನೀರಾವರಿ ಮತ್ತು ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಹಲವಾರು ಬಂಪರ್ ಕೊಡುಗೆಗಳನ್ನು ಘೋಷಿಸಲಾಗಿದೆ.

*ಇಂದಿನ ಬಜೆಟ್‌ನ ಪ್ರತಿಯೊಂದು ಇಲಾಖಾವಾರು ಹಂಚಿಕೆ ಮತ್ತು ಪ್ರಮುಖ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ…*

1. ವಸತಿ ಮತ್ತು ಮೂಲಸೌಕರ್ಯ (Housing & Infrastructure)

ಬಡವರ ಮನೆ ಕನಸನ್ನು ನನಸು ಮಾಡಲು ಸರ್ಕಾರ ಮುಂದಾಗಿದೆ. ಈ ಮೂಲಕ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿಲಾಗಿದೆ.

  1. ಮನೆಗಳ ನಿರ್ಮಾಣ : ಪ್ರಸಕ್ತ ಸಾಲಿನಲ್ಲಿ ಒಟ್ಟು 3,00,000 ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದಲ್ಲದೆ, ಹಿಂದಿನ ಸರ್ಕಾರವು ಅನುದಾನವಿಲ್ಲದೆ ಮಂಜೂರು ಮಾಡಿದ್ದ 4,90,000 ಮನೆಗಳನ್ನು ಪೂರ್ಣಗೊಳಿಸಲು ವಿಶೇಷ ಕ್ರಮ ಕೈಗೊಳ್ಳಲಾಗುವುದು.

  2. ಅಂತಾರಾಷ್ಟ್ರೀಯ ಕ್ರೀಡಾಂಗಣ : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ‘ಕೆ.ಹೆಚ್.ಬಿ ಸೂರ್ಯ ಕ್ರೀಡಾ ಗ್ರಾಮ’ ನಿರ್ಮಾಣವಾಗಲಿದೆ. ಇಲ್ಲಿ 80,000 ಆಸನ ಸಾಮರ್ಥ್ಯದ ಬೃಹತ್ ಕ್ರಿಕೆಟ್ ಕ್ರೀಡಾಂಗಣ ತಲೆಎತ್ತಲಿದೆ.

  3. ನಿವೇಶನಗಳ ವಿತರಣೆ : ‘ನಮ್ಮ ಮನೆ’ ಯೋಜನೆಯ ಮೂಲಕ ಮುಂದಿನ 2 ವರ್ಷಗಳಲ್ಲಿ ಅರ್ಹ ಫಲಾನುಭವಿಗಳಿಗೆ 50,000 ನಿವೇಶನಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು.

2. ರೈತರು ಮತ್ತು ಸಹಕಾರ (Cooperation & Farmers)

ಕೃಷಿ ಕ್ಷೇತ್ರಕ್ಕೆ ಬಲ ತುಂಬಲು ಸರ್ಕಾರ ಸಾಲ ಸೌಲಭ್ಯ ಮತ್ತು ಡಿಜಿಟಲೀಕರಣಕ್ಕೆ ಒತ್ತು ನೀಡಿದೆ.

  1. ಶೂನ್ಯ ಬಡ್ಡಿ ಸಾಲ : ರಾಜ್ಯದ 38,00,000 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಒಟ್ಟು 30,000 ಕೋಟಿ ರೂಪಾಯಿಗಳ ಕೃಷಿ ಸಾಲ ನೀಡುವ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ.

  2. ಎಪಿಎಂಸಿ ಡಿಜಿಟಲೀಕರಣ : ಕೃಷಿ ಮಾರುಕಟ್ಟೆಗಳಲ್ಲಿ ಪಾರದರ್ಶಕತೆ ತರಲು 10 ಕೋಟಿ ರೂಪಾಯಿ ವೆಚ್ಚದಲ್ಲಿ ಇಆರ್‌ಪಿ (ERP) ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.

3.  ಜಲಸಂಪನ್ಮೂಲ (Water Resources)

ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಬಜೆಟ್‌ನಲ್ಲಿ ಸ್ಪಷ್ಟ ಹಾದಿ ರೂಪಿಸಲಾಗಿದೆ.

 1. ಮೇಕೆದಾಟು ಯೋಜನೆ : ಯೋಜನೆಯ ಪರಿಷ್ಕೃತ ಡಿಪಿಆರ್ (DPR) ಸಿದ್ಧಪಡಿಸಲಾಗಿದ್ದು, ಕೇಂದ್ರ ಅರಣ್ಯ ಇಲಾಖೆಯ ಅನುಮೋದನೆ ಪಡೆಯಲು ಸರ್ಕಾರ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಿದೆ.

2.ಎತ್ತಿನಹೊಳೆ ಯೋಜನೆ : 2ನೇ ಹಂತದ 18.73 ಕಿ.ಮೀ ಉದ್ದದ ಕಾಲುವೆ ಕಾಮಗಾರಿಗಳನ್ನು ಅತಿ ಶೀಘ್ರದಲ್ಲಿ ಮುಕ್ತಾಯಗೊಳಿಸಲು ಸೂಚಿಸಲಾಗಿದೆ.

3. ಹೊಸ ಜಲಾಶಯ : ಕೊರಟಗೆರೆ ತಾಲೂಕಿನ ವಡೇರಹಳ್ಳಿ ಬಳಿ 1.2 ಟಿ.ಎಂ.ಸಿ ಸಾಮರ್ಥ್ಯದ ಸಮತೋಲನಾ ಜಲಾಶಯ ನಿರ್ಮಿಸಿ ಹೆಚ್ಚುವರಿ ನೀರು ಸಂಗ್ರಹಣೆಗೆ ಕ್ರಮ ಕೈಗೊಳ್ಳಲಾಗುವುದು.

4. ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ (Social & ST Welfare)

ಹಿಂದುಳಿದ ಮತ್ತು ಪರಿಶಿಷ್ಟ ವರ್ಗಗಳ ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ಒತ್ತು ನೀಡಲಾಗಿದೆ.

1. ವಸತಿ ಶಾಲೆಗಳು : 30 ಕ್ರೈಸ್ (CREIS) ವಸತಿ ಶಾಲೆಗಳಿಗೆ 660 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗುವುದು.

2. ಹೊಸ ನಿಗಮ : ಬೌದ್ಧ ಧರ್ಮೀಯರ ಏಳಿಗೆಗಾಗಿ ‘ಬೌದ್ಧ ಅಭಿವೃದ್ಧಿ ನಿಗಮ’ ಸ್ಥಾಪಿಸಲಾಗುವುದು. ವಿವಿಧ ಅಭಿವೃದ್ಧಿ ನಿಗಮಗಳಿಗೆ ಒಟ್ಟು 1,500 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

3. ಗಂಗಾ ಕಲ್ಯಾಣ ಯೋಜನೆ : ಕೊಳವೆಬಾವಿ ವಿದ್ಯುದ್ದೀಕರಣದ ಸಹಾಯಧನವನ್ನು 75,000 ರೂಪಾಯಿಗಳಿಂದ 1,50,000 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.

4. ಪರಿಶಿಷ್ಟ ಪಂಗಡಗಳ (ST) ಕಲ್ಯಾಣ : ಪ್ರತ್ಯೇಕ ‘ಪರಿಶಿಷ್ಟ ಪಂಗಡಗಳ ಆಯೋಗ’ ಸ್ಥಾಪನೆ ಮಾಡಲಾಗುವುದು. ಅಲ್ಲದೆ, 50 ಹೊಸ ವಿದ್ಯಾರ್ಥಿನಿಲಯಗಳ ಆರಂಭ ಹಾಗೂ ನಿರುದ್ಯೋಗಿ ಯುವಕರಿಗೆ ಫಾಸ್ಟ್ ಫುಡ್ ಟ್ರಕ್ ಆರಂಭಿಸಲು ಶೇ. 75 ರಷ್ಟು (ಗರಿಷ್ಠ 4,00,000 ರೂಪಾಯಿ) ಸಹಾಯಧನ ಘೋಷಿಸಲಾಗಿದೆ.

5. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (Women & Child Development)

1. ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡುಗೆ : ರಾಜ್ಯದ 1,39,844 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಹೆಚ್ಚುವರಿ 1 ಜೊತೆ ಸಮವಸ್ತ್ರ ನೀಡಲಾಗುವುದು.

2. ಪ್ರೋತ್ಸಾಹಧನ ಹೆಚ್ಚಳ : ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರ ಆದಾಯೋತ್ಪನ್ನ ಚಟುವಟಿಕೆಗಳಿಗೆ ನೀಡುವ ಪ್ರೋತ್ಸಾಹಧನವನ್ನು 45,000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

3. ಮಾದಕ ವ್ಯಸನ ಮುಕ್ತ ಕೇಂದ್ರ : ನಿಮ್ಹಾನ್ಸ್ ಮತ್ತು ಡಿಮ್ಹಾನ್ಸ್ ಸಹಯೋಗದಲ್ಲಿ 18 ವರ್ಷದೊಳಗಿನ ಮಕ್ಕಳಿಗಾಗಿ ವಿಶೇಷ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲಾಗುವುದು.

6. ಕಾರ್ಮಿಕ ಕಲ್ಯಾಣ (Labour Welfare)

1. ಕೌಶಲ್ಯ ತರಬೇತಿ ಅಕಾಡೆಮಿ : ಹುಬ್ಬಳ್ಳಿ-ಧಾರವಾಡದಲ್ಲಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಅತ್ಯಾಧುನಿಕ ತರಬೇತಿ ಕೇಂದ್ರ ಸ್ಥಾಪನೆಯಾಗಲಿದೆ.

2. ಶಿಕ್ಷಣಕ್ಕೆ ಆದ್ಯತೆ : ಕಾರ್ಮಿಕರ ಮಕ್ಕಳಿಗಾಗಿ 600 ಕೋಟಿ ರೂಪಾಯಿ ವೆಚ್ಚದಲ್ಲಿ 10 ಜಿಟಿಟಿಸಿ (GTTC) ಕೇಂದ್ರಗಳು ಮತ್ತು 62 ಹೊಸ ‘ಶ್ರಮಿಕ ವಸತಿ ಶಾಲೆ’ಗಳನ್ನು ತೆರೆಯಲಾಗುವುದು.

3. ಕಾಯಕ ಭಾಗ್ಯ :  ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಮಾಹಿತಿ ನೀಡಲು 5 ಕೋಟಿ ರೂಪಾಯಿ ವೆಚ್ಚದಲ್ಲಿ ಆನ್‌ಲೈನ್ ಉದ್ಯೋಗ ವಿನಿಮಯ ಕೇಂದ್ರ ಆರಂಭಿಸಲಾಗುವುದು.

7. ಮೀನುಗಾರಿಕೆ ಮತ್ತು ರೇಷ್ಮೆ (Fisheries & Sericulture)

1. ಮೀನುಗಾರಿಕೆ ಕ್ಷೇತ್ರ  : ಉಚಿತ ಮೀನುಗಾರಿಕೆ ಕಿಟ್‌ಗಳ ಮೌಲ್ಯವನ್ನು 10,000 ರೂಪಾಯಿಗಳಿಂದ 20,000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಮಂಗಳೂರಿನಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪನೆಗೆ ನಿರ್ಧರಿಸಲಾಗಿದೆ.

2. ರೇಷ್ಮೆ ಬೆಳೆಗಾರರಿಗೆ ಬೋನಸ್ : ಉತ್ತರ ಕರ್ನಾಟಕದ ರೇಷ್ಮೆ ಗೂಡು ಸಾಗಾಣಿಕಾ ಸಹಾಯಧನವನ್ನು ಪ್ರತಿ ಕೆ.ಜಿ.ಗೆ 10 ರೂಪಾಯಿಯಿಂದ 20 ರೂಪಾಯಿಗೆ ಏರಿಸಲಾಗಿದೆ. ರಾಮನಗರ, ಹಾವೇರಿ ಸೇರಿದಂತೆ ಐದು ಜಿಲ್ಲೆಗಳಲ್ಲಿ ‘ಸಿಲ್ಕ್ ಪಾರ್ಕ್’ಗಳನ್ನು ಸ್ಥಾಪಿಸಲಾಗುವುದು.

Leave a Reply

error: Content is protected !!