You are currently viewing BREAKING NEWS : ರಾಯಚೂರು | ಪ್ರೀತಿಯ ಬಲೆಗೆ ಬಿದ್ದ ಆಸ್ಪತ್ರೆ ನರ್ಸಿಂಗ್ ಅಧಿಕಾರಿ ಅನುಮಾನಾಸ್ಪದ ಸಾವು…!!

BREAKING NEWS : ರಾಯಚೂರು | ಪ್ರೀತಿಯ ಬಲೆಗೆ ಬಿದ್ದ ಆಸ್ಪತ್ರೆ ನರ್ಸಿಂಗ್ ಅಧಿಕಾರಿ ಅನುಮಾನಾಸ್ಪದ ಸಾವು…!!

BREAKING NEWS : ರಾಯಚೂರು | ಪ್ರೀತಿಯ ಬಲೆಗೆ ಬಿದ್ದ ಆಸ್ಪತ್ರೆ ನರ್ಸಿಂಗ್ ಅಧಿಕಾರಿ ಅನುಮಾನಾಸ್ಪದ ಸಾವು…!!

ಪ್ರಜಾ ವೀಕ್ಷಣೆ ಸುದ್ದಿ : 

ರಾಯಚೂರು : ಜಿಲ್ಲೆಯಲ್ಲಿ ಅಧಿಕಾರಿಯೊಬ್ಬರ ಅಚ್ಚರಿಯಂತೆ ಅನುಮಾನಾಸ್ಪದ ಸಾವು ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ರಸ್ತೆ ಮಧ್ಯದಲ್ಲಿ ರೋಡ್ ರೋಲರ್ ಗೆ ನೇಣು ಬಿಗಿದುಕೊಡು ರಿಮ್ಸ್ ಆಸ್ಪತ್ರೆ ನರ್ಸಿಂಗ್ ಅಧಿಕಾರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸೂಗೂರಿನ ಹಟ್ಟಿ ಪಟ್ಟಣದಲ್ಲಿ 32 ವರ್ಷದ ಜ್ಯೋತಿ ಎಂಬುವರು ರೋಡ್ ರೋಲರ್ ಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹಟ್ಟಿ-ಪಾಮನಕಲ್ಲೂರು ಗ್ರಾಮದ ರಸ್ತೆ ಕಾಮಗಾರಿ ಬಳಿ ಡಿಸೆಂಬರ್ 22 ರಂದು ಶವ ಪತ್ತೆಯಾಗಿದೆ.

ಜ್ಞಾನಮೂರ್ತಿ ಎಂಬುವರನ್ನು ಜ್ಯೋತಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಕೆಲದಿನಗಳಿಂದ ಜ್ಯೋತಿಯನ್ನು ಜ್ಞಾನಮೂರ್ತಿ ನಿರ್ಲಕ್ಷ ಮಾಡಿದ್ದು, ಇದರಿಂದ ಮನನೊಂದು ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಲಿಂಗಸೂಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!