You are currently viewing ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕವಾಗಿವೆ : ಮಂಜುನಾಥ ಕಡೇಮನಿ

ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕವಾಗಿವೆ : ಮಂಜುನಾಥ ಕಡೇಮನಿ

ಕುಕನೂರು : ಸಾಮೂಹಿಕ ವಿವಾಹಗಳನ್ನು ಮಾಡುವುದರಿಂದ ದುಂದು ವೆಚ್ಚಕ್ಕೆ ಕಡಿವಾಣವನ್ನು ಹಾಕಬಹುದು ಹಾಗೂ ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕವಾಗಿವೆ ಎಂದು ಮಂಜುನಾಥ ಕಡೇಮನಿ ಹೇಳಿದರು.
ತಾಲೂಕಿನ ನಿಂಗಾಪೂರ ಗ್ರಾಮದಲ್ಲಿ ಶ್ರೀ ಭೀಮಾಂಭಿಕಾ ದೇವಿಯ 23ನೇ ವರ್ಷದ ಪುರಾಣ ಮಹಾಮಂಗಲೋತ್ಸವ ಹಾಗೂ 5 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನೆಡೆದವು. ಪುರಾಣ ಮಹಾಮಂಗಲೋತ್ಸವದ ಪ್ರಯುಕ್ತ ಬೆಳ್ಳಿಗ್ಗೆ ಗ್ರಾಮದಲ್ಲಿ ಕುಂಭಮೇಳ ಹಾಗೂ ಪಲ್ಲಕ್ಕಿ ಉತ್ಸವ ನೆಡೆಯಿತು. ಹಾಗೂ ಶ್ರೀ ಭೀಮಾಂಭಿಕಾ ದೇವಿಯ ಮೂರ್ತಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆಡೆದವು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಮಂಜುನಾಥ ಕಡೇಮನಿ ಮಾತನಾಡಿ ಗ್ರಾಮದಲ್ಲಿ ಸುಮಾರು 23 ವರ್ಷಗಳನ್ನು ಪುರಾಣ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಗ್ರಾಮಸ್ಥರ ಸಹಕಾರದೊಂದಿಗೆ ಮಾಡುತ್ತಾ ಬಂದಿದ್ದೇವೆ. ಸಾಮೂಹಿಕ ವಿವಾಹಗಳನ್ನು ಮಾಡುವುದರಿಂದ ದುಂದು ವೆಚ್ಚಕ್ಕೆ ಕಡಿವಾಣವನ್ನು ಹಾಕಬಹುದು ಅಲ್ಲದೇ ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀನಿವಾಸ ಕಡೇಮನಿ, ಜಗನ್ನಾಥ ಗಡ್ಡದ, ನಿಂಗಪ್ಪ ನಡವಲಮನಿ, ಶಿವಯೋಗಿ ಹಿರೇಮಠ, ಮೈಲಾರಪ್ಪ ಆಲೂರ, ಗುಡದಪ್ಪ ಅಗಸಿಮನಿ, ಹನುಮಪ್ಪ ಆಲೂರ, ಶಿವು ಕಡೆಮನಿ, ರವಿ ಲಮಾಣಿ ಹಾಗೂ ದೇವಸ್ಥಾನದ ಕಮೀಟಿಯ ಸರ್ವ ಸದಸ್ಯರು ಹಾಗೂ ಇತರರಿದ್ದರು.

Prajavikshane

Chandru R Bhanapaur

Leave a Reply

error: Content is protected !!