LOCAL NEWS : ಕನ್ನಡ ಜ್ಞಾನ ಅರಿವಿಗೆ ದತ್ತಿ ಉಪನ್ಯಾಸಗಳು ಅಗತ್ಯ : ಬಸವಂತಪ್ಪ ದೊಡ್ಮನಿ
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಅಕ್ಷರ ಲೋಕದ ಅನಾವರಣ: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅರ್ಥಪೂರ್ಣ ದತ್ತಿ ಉಪನ್ಯಾಸ
ಕುಕನೂರು , ಮಾರ್ಚ್ 13 : ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ದತ್ತಿ ಉಪನ್ಯಾಸಗಳ ಪಾತ್ರ ಮಹತ್ತರವಾದುದು ಎಂದು ಅಲ್ಪಸಂಖ್ಯಾತರ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಬಸವಂತಪ್ಪ ದೊಡ್ಡಮನಿ ಅಭಿಪ್ರಾಯಪಟ್ಟರು.
ಇಂದು ಪಟ್ಟಣದ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ” ದತ್ತಿ ಉಪನ್ಯಾಸ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಭಾಷೆ ಉಳಿವಿಗೆ ಜ್ಞಾನದ ಹರವು ಅಗತ್ಯವಾಗಿದ್ದು, ನಮ್ಮ ಹಿರಿಯರು ತಮ್ಮ ಕಷ್ಟಾರ್ಜಿತ ಹಣವನ್ನು ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಇಟ್ಟಿರುವುದು ಕೇವಲ ಹೆಸರಿಗಾಗಿ ಅಲ್ಲ, ಬದಲಿಗೆ ಕನ್ನಡದ ಜ್ಞಾನ ನಿರಂತರವಾಗಿ ಹರಿಯಲಿ ಎಂಬ ಆಶಯದಿಂದ. ಇಂತಹ ಉಪನ್ಯಾಸಗಳು ಇಂದಿನ ಯುವ ಪೀಳಿಗೆಯಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುತ್ತವೆ” ಎಂದು ತಿಳಿಸಿದರು.
ವಿಷಯ ಮಂಡನೆ :- ಕಾರ್ಯಕ್ರಮದಲ್ಲಿ ” ಶರಣರ ಸಾಹಿತ್ಯ ಭಾರತೀಯರ ಕೃಷಿ ಮತ್ತು ಸಂಸ್ಕೃತಿ ” ಎಂಬ ವಿಷಯದ ಕುರಿತು ಜ್ಯೋತಿ ವಿಜಯ್ ಕುಮಾರ್ ಮುಧೋಳ್ ಅವರು ಸುದೀರ್ಘವಾಗಿ ಮಾತನಾಡುತ್ತಾ, ಸಾಹಿತ್ಯದ ಇತಿಹಾಸ, ಪ್ರಸ್ತುತ ಸವಾಲುಗಳು ಮತ್ತು ಭವಿಷ್ಯದ ದಾರಿಯ ಕುರಿತು ಅವರು ಮಾರ್ಮಿಕವಾಗಿ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಳಕಪ್ಪ ಕುಂಬಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಪ್ರವೀಣ್ ಕುಮಾರ್ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಇಂದಿನ ದತ್ತಿ ನೀಡಿದ ಧಾನಿಗಳು ಸಿದ್ದಣ್ಣ ಯರಾಶಿ, ಈಶಪ್ಪ ಆರೇರ್, ಶರಣಪ್ಪ ಅಂಗಡಿ, ಹಾಗೂ ಬಸುರಾಜ್ ಉಪ್ಪಿನ, ಬಸವರಾಜ್ ಮೇಟಿ, ಅಶೋಕ್ ಮಾದಿನೂರು, ನಾಗರಾಜ್ ಬೆಣಕಲ್, ಫೀರಸಾಬ್ ದಫೇದಾರ್ ಇನ್ನುಳಿದಂತೆ ಸಾಹಿತ್ಯ ಆಶಕ್ತರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಈ ಕಾರ್ಯಕ್ರಮದ ನಿರೂಪಣೆಯನ್ನು ರಾಣಿ ಹಳ್ಳಿ ಮತ್ತು ಪರಮೇಶ್ ಪತ್ತಾರ ನಡೆಸಿಕೊಟ್ಟರು.