You are currently viewing K’Budget 2026-27 : ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಧಾಖಲೆಯ ಬಜೆಟ್ ಕುರಿತು ಜನಾಭಿಪ್ರಾಯ ಹೇಗಿದೆ ಗೋತ್ತಾ?

K’Budget 2026-27 : ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಧಾಖಲೆಯ ಬಜೆಟ್ ಕುರಿತು ಜನಾಭಿಪ್ರಾಯ ಹೇಗಿದೆ ಗೋತ್ತಾ?

K’Budget 2026-27 : ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಧಾಖಲೆಯ ಬಜೆಟ್ ಕುರಿತು ಜನಾಭಿಪ್ರಾಯ ಹೇಗಿದೆ ಗೋತ್ತಾ?

 ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ :

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್ : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಪ್ರಸ್ತುತ 2026-27ನೇ ಸಾಲಿನ ಬಜೆಟ್  ಮಂಡಿಸಿದರು. ಈ ಮೂಲಕ 17ನೇ ಬಾರಿಗೆ ಬಜೆಟ್ ಮಂಡಿಸಿದ ಗೌರವಕ್ಕೂ ಸಿಎಂ ಸಿದ್ದರಾಮಯ್ಯ ಭಾಜನರಾದರು. ಈ ಬಜೆಟ್ ಕೊಪ್ಪಳ ಜಿಲ್ಲೆಯ ಹಾಗೂ ಯಲಬುರ್ಗಾ-ಕುಕನೂರು ತಾಲೂಕಿನ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಣೆ ಇಲ್ಲಿದೆ ಓದಿ…

‘ಈ ಬಜೆಟ್‌ನಲ್ಲಿ ಅಭಿವೃದ್ಧಿಗಿಂತ ಹೆಚ್ಚಾಗಿ ಸಾಲ ಮತ್ತು ಬಡ್ಡಿ ಪಾವತಿಗೆ ಹೆಚ್ಚಿನ ಹಣ ವ್ಯಯವಾಗುತ್ತಿದೆ, “ಅತ್ಯಂತ ನಿರಾಶಾದಾಯಕ” ಮತ್ತು “ದೂರದೃಷ್ಟಿ ಇಲ್ಲದ” ಬಜೆಟ್, ರೈತರಿಗೆ ಶಿಕ್ಷಣಕ್ಕೆ ಹಾಗೂ ಉತ್ತರ ಕರ್ನಾಟಕದ ಜನತೆಗೆ ಈ ಬಜೆಟ್‌ನಿಂದ ತೀವ್ರ ನಿರಾಶೆ ಆಗಿದೆ’

-: ಮಾಜಿ ಸಚಿವ,  ಹಾಲಪ್ಪ ಆಚಾರ್‌

    .

“ಬಡವರ ಕಲ್ಯಾಣಕ್ಕಾಗಿ ಅನ್ನಭಾಗ್ಯದಂತಹ ಯೋಜನೆಗಳ ಮುಂದುವರಿಕೆ ಮತ್ತು ವಸತಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಬಡವರ ಜೀವನಮಟ್ಟ ಸುಧಾರಿಸಲು ಪೂರಕವಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಸ್ಥಳೀಯ ಮೂಲಸೌಕರ್ಯ, ರಸ್ತೆಗಳು ಮತ್ತು ನೀರಾವರಿ ಯೋಜನೆಗಳಿಗೆ ಅನುದಾನ ಮೀಸಲಿಟ್ಟಿರುವುದು ನಮ್ಮ ಕ್ಷೇತ್ರದ “ಅಭಿವೃದ್ಧಿ ಪರ್ವ”ಕ್ಕೆ ನಾಂದಿ ಹಾಡಬಹುದು”

ಸಂಗಮೇಶ್‌ ಗುತ್ತಿ, ತಾಲ್ಲೂಕಾ ಅಧ್ಯಕ್ಷ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಕುಕನೂರು.

“ರಾಜ್ಯ ಬಜೆಟ್ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಜನರ ನಿರೀಕ್ಷೆಗಳನ್ನು ಈಡೇರಿಸದ ನಿರಾಶದಾಯಕ ಬಜೆಟ್ ಆಗಿದೆ” 

ಮಲ್ಲನಗೌಡ ಕೋನನಗೌಡ್ರ, ಕೊಪ್ಪಳ ಜಿಲ್ಲಾ ಜೆಡಿಎಸ್ ವಕ್ತಾರ.

“ರಾಜ್ಯ ಬಜೆಟ್‌ನಲ್ಲಿ ಕೊಪ್ಪಳ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಸತತ ಮೂರನೇ ವರ್ಷವೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೊಪ್ಪಳಕ್ಕೆ ‘ಚೊಂಬು’ ಕೊಟ್ಟಂತಾಗಿದೆ’

ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ, ಸಿ.ವಿ. ಚಂದ್ರಶೇಖರ್.

“ರೋಹಿತ್ ವೇಮುಲ ಕಾಯ್ದೆಗೆ ಸ್ವಾಗತ “

“ರಾಜ್ಯ ಸರ್ಕಾರ ‘ರೋಹಿತ್ ವೇಮುಲ ಕಾಯ್ದೆ’ ಜಾರಿಗೆ ತರುವ ನಿರ್ಧಾರವನ್ನು ತಂದಿರುವದು ಸ್ವಾಗತ. ಬಜೆಟ್‌ನಲ್ಲಿ ಶಿಕ್ಷಣಕ್ಕೆ ಕೇವಲ ₹47,224 ಕೋಟಿ (9.5%) ಮೀಸಲಿಟ್ಟಿರುವುದು ವಿದ್ಯಾರ್ಥಿ ವಿರೋಧಿ ಕ್ರಮ. ಖಾಲಿ ಇರುವ 62 ಸಾವಿರ ಶಿಕ್ಷಕ ಹುದ್ದೆಗಳ ಪೈಕಿ ಕೇವಲ 15 ಸಾವಿರ ನೇಮಕಾತಿ ಘೋಷಿಸಿರುವುದು ಅಪರ್ಯಾಯವಾಗಿದೆ”

ಬಾಲಾಜಿ ಚಳ್ಳಾರಿ, ಎಸ್‌ಎಫ್‌ಐನ ಜಿಲ್ಲಾ ಕಾರ್ಯದರ್ಶಿ ಕೊಪ್ಪಳ ಜಿಲ್ಲೆ.

“ಮುಖ್ಯಮಂತ್ರಿ ಸಿದ್ದರಾಮಯ್ಯ 17ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿಕೊಂಡಿದ್ದೇ ಸಾಧನೆ ಹೊರತು ಜನಕಲ್ಯಾಣ ಯೋಜನೆಗಳ ಕೊರತೆ ಇದೆ.ಕೊಪ್ಪಳ ಜಿಲ್ಲೆಗೆ ಗಮನಾರ್ಹ ಯೋಜನೆಗಳಿಲ್ಲ. ಕ್ಯಾನ್ಸರ್ ಆಸ್ಪತ್ರೆ ಘೋಷಣೆ ಶ್ಲಾಘನೀಯವಾದರೂ ಹಿಂದಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಜನಪರ ಯೋಜನೆಗಳು ಇನ್ನೂ ಆರಂಭವಾಗಿಲ್ಲ”

– ಬಸವರಾಜ ಕ್ಯಾವಟರ್, ಬಿಜೆಪಿ ಮುಖಂಡ, ಕೊಪ್ಪಳ

“ಸಾರ್ವಜನಿಕ ಶಿಕ್ಷಣ ನಿರ್ಲಕ್ಷ್ಯ”

“ಶಿಕ್ಷಣಕ್ಕೆ ನೀಡಿದ ಬಜೆಟ್ ಪಾಲು ಸುಮಾರು 10.5%ಕ್ಕೆ ಇಳಿದಿರುವುದು ಆತಂಕಕಾರಿ. ಕೆಪಿಎಸ್ ನೀತಿಯಿಂದ ಗ್ರಾಮೀಣ ಸರ್ಕಾರಿ ಶಾಲೆಗಳು ಹಿಂದುಳಿಯುವ ಸಾಧ್ಯತೆ ಇದ್ದು, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು”

-ಯು. ಉಮಾದೇವಿ, ಜಿಲ್ಲಾ ಕಾರ್ಯದರ್ಶಿ, ಎಐಡಿಎಸ್ಓ

“ತುಂಗಭದ್ರಾ ಡ್ಯಾಮ್ ನಲ್ಲಿ ಟ್ರಸ್ಟ್ ಗೇಟ್ ಕಾಮಗಾರಿ ಹಿನ್ನೆಲೆ ಬೇಸಿಗೆ ಬೆಳೆ ಬೆಳೆಸದಂತೆ ಸೂಚನೆಯಿಂದ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಬಜೆಟ್‌ನಲ್ಲಿ ರೈತರಿಗೆ ಯಾವುದೇ ಪರಿಹಾರ ಪ್ಯಾಕೇಜ್ ಘೋಷಿಸದಿರುವುದು ನಿರಾಶಾದಾಯಕ. ಸರ್ಕಾರ ತಕ್ಷಣ ರೈತರಿಗೆ ಆರ್ಥಿಕ ನೆರವು ಘೋಷಿಸಬೇಕಿತ್ತು”

ಯಮನೂರ ಈಳಿಗನೂರು, ವಕೀಲರು

“ಸರ್ವರಿಗೂ ಅವಕಾಶ ನೀಡಿದ ಬಜೆಟ್”

ಮುಖ್ಯಮಂತ್ರಿ “ಸಿದ್ದರಾಮಯ್ಯ ಮಂಡಿಸಿದ ₹4.48 ಲಕ್ಷ ಕೋಟಿ ಬಜೆಟ್ ಸರ್ವರಿಗೂ ಅವಕಾಶ ನೀಡಿದ ಸಮತೋಲನ ಬಜೆಟ್ ಆಗಿದೆ. ಐದು ಗ್ಯಾರಂಟಿಗಳನ್ನು ಮುಂದುವರಿಸಿ ಹೊಸ ಯೋಜನೆಗಳು ಹಾಗೂ ಉದ್ಯೋಗ ಭರ್ತಿಗೆ ಆದ್ಯತೆ ನೀಡಲಾಗಿದೆ. ಕೊಪ್ಪಳಕ್ಕೆ ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ಕೆಲವು ಯೋಜನೆಗಳಿದ್ದರೂ ಜಿಲ್ಲೆಗೆ ಇನ್ನಷ್ಟು ನಿರೀಕ್ಷೆಗಳು ಇವೆ”.

– ಜ್ಯೋತಿ ಎಂ.ಗೊಂಡಬಾಳ ಕಾಂಗ್ರೆಸ್ ಮುಖಂಡೆ.

Prajavikshane

Chandru R Bhanapaur

Leave a Reply

error: Content is protected !!