LOCAL NEWS : ತಾಲೂಕಿನ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ಮಾಡಿದ ಶಾಸಕ ರಾಯರೆಡ್ಡಿ..!

You are currently viewing LOCAL NEWS : ತಾಲೂಕಿನ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ಮಾಡಿದ ಶಾಸಕ ರಾಯರೆಡ್ಡಿ..!

LOCAL NEWS : ತಾಲೂಕಿನ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ಮಾಡಿದ ಶಾಸಕ ರಾಯರೆಡ್ಡಿ…!

ಕುಕನೂರು : ಶಾಸಕ ಬಸವರಾಜ ರಾಯರೆಡ್ಡಿ ಅವರು ತಾಲೂಕಿನಲ್ಲಿ ವಿವಿಧ ಕಟ್ಟಡ ನಿರ್ಮಾಣಕ್ಕೆ ಜಮೀನು ಹಾಗೂ ಕಾಮಗಾರಿಗಳ ಪರಿಶೀಲನೆ ಮಾಡಿದರು.

ಇಂದು ಕುಕನೂರು ಪಟ್ಟಣದಲ್ಲಿ ಹಾಗೂ ತಾಲೂಕಿನ ವ್ಯಾಪ್ತಿಯಲ್ಲಿ ಸರ್ಕಾರಿ ಬಸ್ ನಿಲ್ದಾಣ ಅಂಬೇಡ್ಕರ್ ಭವನ ನಿರ್ಮಾಣ, ಇದರ ಜೊತೆಗೆ ವಿವಿಧ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಜಮೀನು ಹಾಗೂ ಕಾಮಗಾರಿಗಳ ಪರಿಶೀಲನೆ ಮಾಡಿ ಬಳಿಕ ಮಾತನಾಡಿದ ಶಾಸಕ ರಾಯರೆಡ್ಡಿ, ” ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಪ್ರಾರಂಭಗೊಂಡಿದ್ದು ನಿಗದಿತ ಕಾಲಮಿತಿ ಒಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಹಾಗೂ ಕಾಮಗಾರಿ ಗುಣಮಟ್ಟದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಲ ಮುಂದಾಗಬೇಕು ಎಂದರು.

ತಾಲೂಕಿನಲ್ಲಿ ಅಪೂರ್ಣಗೊಂಡ ಕಾಮಗಾರಿಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಅನುದಾನವನ್ನು ಬಿಡುಗಡೆ ಮಾಡುತ್ತೇನೆ. ಕುಕನೂರು ಪಟ್ಟಣದಲ್ಲಿ ಅಪೂರ್ಣಗೊಂಡ ಕಾಮಗಾರಿಗಳಾದ ಬಾಲ ಭವನಕ್ಕೆ 60 ಲಕ್ಷ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಾಗೂ ಮೂಲಭೂತ ಸೌಲಭ್ಯಕ್ಕೆ ಸೇರಿ ಒಂದು ಕೋಟಿ ರೂಪಾಯಿ ಹಾಗೂ ಕುಕನೂರು ಪಟ್ಟಣದ ಹಳೆಯ ಕಲ್ಯಾಣ ಮಂಟಪದ ಉನ್ನತೀಕರಣಕ್ಕಾಗಿ 50 ಲಕ್ಷ ರೂಪಾಯಿ ಹಾಗೂ ಡಾಂಪೂರು ಕ್ರಾಸ್ ನಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕುಕನೂರು ತಹಸೀಲ್ದಾರ್ ಹೆಚ್ ಪ್ರಾಣೇಶ್, ಕುಕನೂರು ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟೆ, ಸತ್ಯನಾರಾಯಣಪ್ಪ ಹರಪನಹಳ್ಳಿ, ಸಂಗಮೇಶ್ ಗುತ್ತಿ, ರಾಮಣ್ಣ ಬಂಕದಮನೆ, ವೀರಯ್ಯ ತೋಂಟದಾರ್ ಮಠ, ಪಟ್ಟಣ ಪಂಚಾಯತ್ ಸದಸ್ಯರ ನೂರುದ್ದೀನ್, ಸಿರಾಜುದ್ದೀನ್ ಕರ್ಮುಡಿ, ಪ್ರಶಾಂತ್ ಆರ್ ಬೆರಳಿನ್, ಯಲಪ್ಪ ಕಲ್ಮನಿ, ರೆಹಮಾನ್ ಸಾಬ್ ಮಕಪ್ಪನವರ್ ರೆಹಮಾನ್ ಎಲಿಗಾರ್ ಇದ್ದರು.

Leave a Reply

error: Content is protected !!