ಪ್ರಜಾವೀಕ್ಷಣೆ ಸುದ್ದಿಜಾಲ :-
BREAKING : ಹಳ್ಳ ರಸ್ತೆ ಕುಸಿದು ಟಿಪ್ಪರ್ ಪಲ್ಟಿ : ಟಿಪ್ಪರ್ ಚಾಲಕನಿಗೆ ಗಂಭೀರ ಗಾಯ!!
PV NEWS -ಕುಕನೂರು : ಬಳಗೇರಿ ಹಳ್ಳದ ಬ್ರಿಡ್ಜ್ ಮೇಲಿಂದ 12ಟನ್ ಮರಳು ತುಂಬಿದ 6ವಿಲ್ ಟಿಪ್ಪರ್ ಪಾರ್ಟಿಯಾಗಿದ್ದು, ಈ ಪರಿಣಾಮ ಟಿಪ್ಪರ ಚಾಲಕನ ಎಡಗಲು ಮೂಳೆಮುರುತವಾಗಿದೆ ಎಂದು ತಿಳಿದು ಬಂದಿದೆ.
ಇಂದು ಸುಮಾರು 12: 30ಕ್ಕೆ ತಾಲೂಕಿನ ಬಳಗೇರಿ ಗ್ರಾಮದ ಬಳಿಯ ಹಳ್ಳದ ರಸ್ತೆ ಕುಸಿದು ಬ್ರಿಡ್ಜ್ ಮೇಲಿಂದ 6 ವಿಲ್ ಟಿಪ್ಪರ್ ಪಾಲ್ಟಿಯಾಗಿದೆ. ಕುಷ್ಟಗಿ ತಾಲೂಕಿನ ಹುಲಗೇರಿ ಗ್ರಾಮದ ಚಾಲಕ ನೀಲಪ್ಪ ಮಲ್ಲಪ್ಪ ಇರಾಳ ಎಂಬಾತನಿಗೆ ಎಡಗಾಲಿಗೆ ಒಳಪೆಟ್ಟು ಬಿದ್ದದ ಕಾರಣ ಮಂಡಿಯ ಮೊಳೆ ಮುರಿತವಾಗಿದೆ ಎಂದು ತುರ್ತು ಸೇವಾ ವೈದ್ಯರು ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲಾ ತಾಲೂಕು ಇಳಕಲ್, ಮಾಂತೇಶ ಪಾಟೀಲ್ ಎಂಬ ಮಾಲಕರಾಗಿರುವ 6 ವಿಲ್ ಟಿಪ್ಪರ್ ನಂಬರ್ KA 63, A 2382 ಇದಾಗಿದೆ.
ಈ ಟಿಪ್ಪರ್ ಬೆಳಗೆರೆ ಹಳ್ಳದ ಹತ್ತಿರ ಇರುವ ಮರಳು ಪಾಯಿಂಟ್ ನಲ್ಲಿ ಮರಳು ತುಂಬಿಕೊಂಡು ಹಿರೇವಕಲಕುಂಟ ಕಡೆಗೆ ಸಾಗುತ್ತಿರುವಾಗ ಈ ಘಟನೆ ಸಂಭವಿಸಿದೆ ಎಂದು ಚಾಲಕ ನೀಲಪ್ಪ ಇರಾಳ ತಿಳಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಚಾಲಕನಿಗೆ 108 ತುರ್ತು ಸೇವಾ ಆಂಬುಲೆನ್ಸ್ ನಲ್ಲಿ ಕುಕನೂರು ತಾಲೂಕು ಆಸ್ಪತ್ರೆ ಗೆ ದಾಖಲಿಸಿದ್ದಾರೆ.
ಈ ಘಟನೆ ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನೇನು ಕುಕನೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಬೇಕಾಗಿದೆ.