LOCAL NEWS : ಸಕ್ರಮ ಗಣಿಗಾರಿಕೆಗೆ ಪ್ರೋತ್ಸಾಹ : ರಾಜಶೇಖರ ಹಿಟ್ನಾಳ

You are currently viewing LOCAL NEWS : ಸಕ್ರಮ ಗಣಿಗಾರಿಕೆಗೆ ಪ್ರೋತ್ಸಾಹ : ರಾಜಶೇಖರ ಹಿಟ್ನಾಳ

LOCAL NEWS : ಸಕ್ರಮ ಗಣಿಗಾರಿಕೆಗೆ ಪ್ರೋತ್ಸಾಹ : ರಾಜಶೇಖರ ಹಿಟ್ನಾಳ

ಕೊಪ್ಪಳ : ಕ್ಷೇತ್ರದಲ್ಲಿ ಸಕ್ರಮವಾದ ಗಣಿಗಾರಿಕೆಗೆ ಸದಾ ಪ್ರೋತ್ಸಾಹ ನೀಡುವುದಾಗಿ ಹಾಗೂ ಅಕ್ರಮ ಗಣಿಗಾರಿಕೆ ಕಾರ್ಯದಲ್ಲಿ ತೊಡಗಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಸದಾ ಸಿದ್ಧವಿರುವುದಾಗಿ ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ರಾಜಶೇಖರ ಹಿಟ್ನಾಳ ಮಾತನಾಡುತ್ತ ಕ್ಷೇತ್ರದಲ್ಲಿ 90%ರಷ್ಟು ಸಕ್ರಮ ಗಣಿಗಾರಿಕೆ ಜರುಗುತ್ತಿದ್ದು ಉಳಿದಂತೆ 10% ರಷ್ಟು ಅಕ್ರಮ ಗಣಿಗಾರಿಕೆ ಜರುಗುತ್ತಿದ್ದು ಅದರ ವಿರುದ್ಧ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದು ಮುಂದೆಯೂ ಸಹ ಅಕ್ರಮವಾಗಿ ಗಣಿಗಾರಿಕೆ ಮಾಡುವವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಸರ್ಕಾರದ ಪರವಾನಿಗೆ ಪಡೆದು ಸಕ್ರಮವಾಗಿ ಗಣಿಗಾರಿಕಾ ವಹಿವಾಟು ನಡೆಸುವವರಿಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಹೇಳಿದರು.

ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತ ರಾಜ್ಯ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಭಾರತೀಯ ಜನತಾ ಪಕ್ಷ ಟೆಂಡರ್ ಕರೆದು ಕಾಮಗಾರಿ ಮುಗಿಸಿ ಹಣ ನೀಡದೆ ಹೋಗಿದ್ದರಿಂದ ಎಲ್ಲಾ ಬಿಲ್ ಗಳನ್ನು ಮಂಜೂರು ಮಾಡುವ ಉದ್ದೇಶದಿಂದ ಅಭಿವೃದ್ಧಿ ಅಲ್ಪ ಪ್ರಮಾಣದಲ್ಲಿ ಕುಂಠಿತಗೊಂಡಿದ್ದು ನಿಜ ಆದರೆ ಅದಕ್ಕು ಗ್ಯಾರಂಟಿ ಯೋಜನೆಗಳಿಗೂ ಯಾವುದೇ ಸಂಬಂಧವಿಲ್ಲ ವರ್ಷಗಳ ಅವಧಿಯಲ್ಲಿ ಹಳೆಯ ಬಿಲ್ ಗಳನ್ನೆಲ್ಲ ಮಂಜೂರು ಮಾಡಿ ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿ ಕಾರ್ಯಗಳು ಸಹ ಪ್ರಾರಂಭಗೊಂಡಿದ್ದು ತಾವೆಲ್ಲ ಕಾಣಬಹುದಾಗಿದೆ ಎಂದರು. ಜೊತೆಗೆ ಸರ್ಕಾರ ಸುಭದ್ರವಾಗಿದ್ದು ಕೇವಲ ಉಹಾಪೋಹಗಳಿಗೆ ಯಾರು ಕಿವಿ ಕೊಡಬಾರದು ಎಂದು ಹೇಳಿದರು.

ತಾಲೂಕಿನ ಮುದ್ದಾಬಳ್ಳಿ ಹಾಗೂ ಗೊಂಡಬಾಳ ಗ್ರಾಮಗಳ ಬಳಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಶಾಸಕರ ಹಾಗೂ ತಮ್ಮ ಸಂಪೂರ್ಣ ವಿರೋಧವಿದ್ದು ಯಾವುದೇ ಕಾರಣಕ್ಕೂ ಇಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣವಾಗಲು ಬಿಡುವುದಿಲ್ಲ ಎಂದು ಹೇಳಿದರು.

Leave a Reply

error: Content is protected !!