ಬೀದಿ ನಾಟಕದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ರಾಮಣ್ಣ ದೊಡ್ಮನಿ ಚಾಲನೆ

You are currently viewing ಬೀದಿ ನಾಟಕದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ರಾಮಣ್ಣ ದೊಡ್ಮನಿ ಚಾಲನೆ


ಕುಕನೂರು :ತಾಲೂಕಿನ ಕುಕನೂರು ಪಟ್ಟಣ ಮತ್ತು ದ್ಯಾಂಪೂರ ಗ್ರಾಮಗಳಲ್ಲಿ ಮತದಾನದ ಮಹತ್ವದ ಕುರಿತು ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಕುಕನೂರ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಮಣ್ಣ ದೊಡ್ಮನಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಮತದಾನದಮಹತ್ವದ ಕುರಿತು ಕುರಿತು ಅರಿವು ಮೂಡಿಸಲು ಹಾಗೂ ಮತದಾನವನ್ನು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮಾಡಲು ಹಲವಾರು ಸ್ವೀಪ್ ಕಾರ್ಯಕ್ರಮ ಮಾಡಲಾಗುತ್ತಿದೆ. ಅದರಂತೆ ಬೀದಿ ನಾಟಕಗಳು ಮಾಹಿತಿ ಪ್ರಸಾರ ಮಾಡುವಲ್ಲಿ ಅದರದ್ದೇ ಆದ ಮಹತ್ವ ಹೊಂದಿದೆ. ಅದಕ್ಕಾಗಿ ಇಂದು ತಾಲೂಕಿನ ಕುಕನೂರು ಮತ್ತು ದ್ಯಾಂಪೂರ ಗ್ರಾಮದಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಸಮರ್ಥ ನಾಯಕರನ್ನು ಆಯ್ಕೆ ಮಾಡಲು ಸಂವಿಧಾನ ನೀಡಿರುವ ಒಂದು ಅಸ್ತ್ರ ಮತ್ತು ಹಕ್ಕು ಎಲ್ಲರೂ ಕೂಡಾ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಮೇ-10 ರಂದು ಜರಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಲು ಕರೆ ನೀಡಿದರು.

ಕಲಾ ತಂಡದಿಂದ ಕುಕನೂರು ಪಟ್ಟಣದ ವೀರಭದ್ರಪ್ಪ ಸರ್ಕಲ್, ಬಸ್ಟ್ಯಾಂಡ್, ಅಂಬೇಡ್ಕರ್ ಸರ್ಕಲ್, ಕೋಳಿಪೇಟೆ ಮಹಾಮಾಯ ಸರ್ಕಲ್ ಇತರ ಕಡೆಗಳಲ್ಲಿ ಬೀದಿ ನಾಟಕದ ಮೂಲಕ ಮತದಾನ ಜಾಗೃತಿ ಮೂಡಿಸಿದರು.

ಜಾನಪದ ಕಲಾತಂಡದವರು ಸಾರ್ವಜನಿಕರಿಗೆ ಅರಿವು ಮೂಡಿಸಲು ಮತದಾನದ ಮಹತ್ವದ ಕುರಿತ ಕಿರು ನಾಟಕ, ಹಾಗೂ ಜಾಗೃತಿ ಗೀತೆ ಮೂಲಕ ಜನರಿಗೆ ಮತದಾನದ ಮಹತ್ವವನ್ನು ಸಾರಿದರು.

ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತಿ ಸಿಬ್ಬಂದಿಗಳಾದ ಹನಮಂತಪ್ಪ ನಾಯಕ, ಚೆನ್ನಬಸಪ್ಪ ಸಣ್ಣಕರದ್, ಮನು ಚೆಟ್ಟಿ, ಮಾರುತಿ ಗೊಂಡಬಾಳ, ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ,‌ಪಟ್ಟಣ ಪಂಚಾಯತಿ ಸಿಬದಬಂದಿಗಳಾದ ರಮೇಶ್ ಅಕ್ಕಿ, ಬಸವರಾಜ ಆರಬೆರಳಿನ್ ಬಿ.ಎಲ್.ಓ ಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ರಾಜೂರು ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಲಾವಿದರು ಹಾಗೂ ಇತರರಿದ್ದರು.

Leave a Reply

error: Content is protected !!