You are currently viewing BIG NEWS / JOB ALERT :  ಪ್ರಾಥಮಿಕ, ಪ್ರೌಢಶಾಲೆಗಳಲ್ಲಿನ ನೇರ ನೇಮಕಾತಿ, ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರ ಮಹತ್ವದ ಸೂಚನೆ!   

BIG NEWS / JOB ALERT :  ಪ್ರಾಥಮಿಕ, ಪ್ರೌಢಶಾಲೆಗಳಲ್ಲಿನ ನೇರ ನೇಮಕಾತಿ, ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರ ಮಹತ್ವದ ಸೂಚನೆ!   

BIG NEWS / JOB ALERT :  ಪ್ರಾಥಮಿಕ, ಪ್ರೌಢಶಾಲೆಗಳಲ್ಲಿನ ನೇರ ನೇಮಕಾತಿ, ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರ ಮಹತ್ವದ ಸೂಚನೆ! 

                   

Teacher Recruitment 2026:-

ಪ್ರಜಾವೀಕ್ಷಣೆ ಸುದ್ದಿ : 

ಪ್ರಜಾವೀಕ್ಷಣೆ ಡಿಜಿಟಲ್‌ ಡೆಸ್ಕ್‌ :  ಹಲವು ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಲು ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಒಂದು ಮಹತ್ವದ ಸೂಚನೆ ನೀಡಿದೆ. ರಾಜ್ಯದಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದಶಕಗಳಿಂದ ಭರ್ತಿಯಾಗದೆ ಬಾಕಿ ಇರುವ ‘ಬ್ಯಾಕ್‌ಲಾಗ್’ (Backlog) ಹುದ್ದೆಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಭರ್ತಿ ಮಾಡುವ ಮಹತ್ವದ ಕೆಲಸಕ್ಕೆ ಈಗ ವೇಗ ಸಿಕ್ಕಂತಾಗಿದೆ.

ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗವು ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಖಡಕ್ ಪತ್ರ ಒಂದನ್ನು ಬರೆದಿದ್ದು, ಮಾಹಿತಿ ನೀಡಲು ವಿಳಂಬ ಮಾಡುತ್ತಿರುವ ಜಿಲ್ಲೆಗಳಿಗೆ ಬಿಸಿ ಮುಟ್ಟಿಸಿದೆ.

* ಏನಿದು ಬ್ಯಾಕ್‌ಲಾಗ್ ಹುದ್ದೆಗಳ ಸುದ್ದಿ?

ಸುಮಾರು 1978 ರಿಂದ 2003 ರವರೆಗೆ ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಯಲ್ಲಿ ಕೆಲವು ಹುದ್ದೆಗಳು ಭರ್ತಿಯಾಗದೆ ಬಾಕಿ ಉಳಿದಿವೆ. ಈ ಹುದ್ದೆಗಳನ್ನು ಗುರುತಿಸಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲು ಆಯೋಗವು 35 ಶೈಕ್ಷಣಿಕ ಜಿಲ್ಲೆಗಳಿಂದ ಮಾಹಿತಿ ಕೇಳಿತ್ತು. ಈಗಾಗಲೇ ಶಿರಸಿ, ಉಡುಪಿ, ರಾಮನಗರ ಮತ್ತು ಬೀದರ್ ಜಿಲ್ಲೆಗಳು ಮಾಹಿತಿ ನೀಡಿವೆ. ಉಳಿದ ಜಿಲ್ಲೆಗಳು ತಕ್ಷಣವೇ ಮಾಹಿತಿ ನೀಡಲು ಆದೇಶಿಸಲಾಗಿದೆ ಎಂದು ಆದೇಶ ಪ್ರತಿಯಲ್ಲಿದೆ.

Prajavikshane

Chandru R Bhanapaur

Leave a Reply

error: Content is protected !!