ಮುದಗಲ್ಲ ವರದಿ..
ತತ್ವಾದರ್ಶ ಪಾಲಿಸಿದರೆ ವಾಲ್ಮೀಕಿ ಜಯಂತಿ ಸಾರ್ಥಕ : ಚಂದ್ರಶೇಖರ್ ಕಚಾಪೂರ..
ಮುದಗಲ್ಲ ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ನಾಮಫಲಕ್ಕೆ ಮಹರ್ಷಿ ವಾಲ್ಮೀಕಿ ಸಮಾಜ ವತಿಯಿಂದ ಹೂಮಾಲೆ ಹಾಕಿ ಜಯಂತಿ ಆಚರಣೆ ಮಾಡಲಾಯಿತು
ಈ ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಹೋಬಳಿ ಘಟಕದ ಅಧ್ಯಕ್ಷರಾದ ಚಂದ್ರಶೇಖರ್ ಕಚಾಪೂರ ಅವರು ಮಾತನಾಡಿ
ಶ್ರೀರಾಮನನ್ನು ರಾಮಾಯಣ ಮಹಾಕಾವ್ಯದ ಮೂಲಕ ಜಗತ್ತಿಗೆ ದರ್ಶನ ಮಾಡಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ. ಇಂತಹ ಮಹಾನ್ ಕವಿಯ ಆಚಾರ ವಿಚಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುದಗಲ್ಲ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯದವರು ಸಭೆ-ಸಮಾರಂಭಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.
ಪುರಸಭೆ ವತಿಯಿಂದ ಆದಿಕವಿ ವಾಲ್ಮೀಕಿ ಜಯಂತಿ ಆಚರಣೆ..

ಮುದಗಲ್ಲ: ಪ್ರಪಂಚ ದಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಯ ಮೂಲಕ ಪರಿಚಿತರಾಗಿ ರಾಮಾಯಣಕ್ಕೆ ಒಂದು ವಿಶೇಷವಾದ ಸ್ಥಾನವನ್ನು ಒದಗಿಸಿ ಕೊಟ್ಟ ಕೀರ್ತಿ ಆದಿಕವಿ ವಾಲ್ಮೀಕಿ ಜಯಂತಿ ಯನ್ನು ಪುರಸಭೆ ವತಿಯಿಂದ ಸರಳವಾಗಿ ಆಚರಣೆ ಮಾಡಲಾಯಿತು.
ಪುರಸಭೆ ಯ ವಾಲ್ಮೀಕಿ ಸಮಾಜದ ಅವರಪ್ಪ ,ಅವರು ಆದಿಕವಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿದ್ದರು
ನಂತರ ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್, ಗಣ್ಯರ, ಸಿಬ್ಬಂದಿಗಳ ನಡುವೆ ನಡುವೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ :ಅಮರಪ್ಪ ವಾಲ್ಮೀಕಿ,ಶೀಲಪ್ಪ ವಾಲ್ಮೀಕಿ,ರಂಗಪ್ಪ ವಾಲ್ಮೀಕಿ, ದುರುಗಪ್ಪ,ವಾಲ್ಮೀಕಿ ಹನುಮಂತ ವಾಲ್ಮೀಕಿ,ಚಂದ್ರಶೇಖರ ಕಾಚಾಪುರ, ದುರುಗಪ್ಪ ಕಾಚಾಪುರ,ಮಹೇಶ ವಾಲ್ಮೀಕಿ ಹನುಮೇಶ ವಾಲ್ಮೀಕಿ, ಮಲ್ಲಪ್ಪ ಮಾಟೂರು, ವೆಂಕಟೇಶ್ಸಿ ಹಿರೇಮನಿ, ಸಂಜು ಚಲುವಾದಿ, ಪುರಸಭೆ ಬ್ಬಂದಿಗಳು ಉಪಸ್ಥಿತರಿದ್ದರು
ವರದಿ :-ಮಂಜುನಾಥ ಕುಂಬಾರ