ಮುದಗಲ್ಲ ವರದಿ
ಮೂಲಸೌಕರ್ಯಗಳಿಗೆ ಒತ್ತಾಯಿಸಿ ಕರವೇ ನೀಡಿದ್ದ ಮುದಗಲ್ ಬಂದ್ ಮಂಗಳವಾರ ಶಾಂತಿಯುತವಾಗಿ ನಡೆಯಿತು.
ಮುದಗಲ್: ಪಟ್ಟಣದ ಪುರಸಭೆ ಅಧಿಕಾರಿಗಳು,ಜನಪ್ರತಿನಿಧಿಗಳು ಜನತೆಗೆ ಸಮರ್ಪಕ ಕುಡಿಯುವ ನೀರು ಕೊಡಿ,ಇಲ್ಲವಾದಲ್ಲಿ ರಾಜೀನಾಮೆ ನೀಡಿ ಎಂದು ಹಾಲಬಾವಿ ವೀರಭದ್ರೇಶ್ವರ ಮಠದ ಸಿದ್ದಯ್ಯ ಸಾಲಿಮಠ ಸ್ವಾಮೀಜಿ ಹೇಳಿದರು. ಪುರಸಭೆ ಆವರಣದಲ್ಲಿ ಕರವೇಯಿಂದ ಮೂಲ ಸೌಕರ್ಯಗಳಿಗೆ ಪ್ರತಿಭಟನಾ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಸಾರ್ವಜನಿಕರಿಗೆ ಕಳೆದ ಒಂದು ವರ್ಷದಿಂದ 15 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜುಗುತ್ತಿದೆ.
ಜನತೆಗೆ ನಿತ್ಯ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಮತ ಪಡೆದ ಜನಪ್ರತಿನಿಧಿಗಳು ಸಾರ್ವಜನಿಕರ ಅಹವಾಲು ಸ್ವೀಕರಿಸಿದೇ ಇರುವುದು ನಾಚಿಗೇಡಿನ ಸಂಗತಿ. ಮುಂದಿನ ದಿನಗಳಲ್ಲಿ ಕುಡಿಯುವ ನೀರು, ಮೂಲಸೌಲಭ್ಯ ಕಲ್ಪಿಸಲು ಅಧಿಕಾರಿಗಳು,ಜನಪ್ರತಿನಿಧಿಗಳು
ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ಬೀದಿಗಳಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ನಡೆಸಿದರು.
ನೀರು ಕೊಡಿ,ಇಲ್ಲ ರಾಜೀನಾಮೆ ಕೊಡಿ.
ಸಾರ್ವಜನಿಕರು ಖಾಲಿ ಕೊಡಗಳನ್ನು ಹಿಡಿದು ಪ್ರಮುಖ ಬೀದಿಗಳಲ್ಲಿ ಸಾಗಿ ಜನ ಜನಪ್ರತಿ ನಿಧಿಗಳು,ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿದರು.
ನಂತರ ಅಂಬೇಡ್ಕ ರ್ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಕರವೇ ಅಧ್ಯಕ್ಷ ಎಸ್.ಎ ನಯೀಮ್, ಪಟ್ಟಣಕ್ಕೆ ಕುಡಿಯುವ ನೀರು,ಬಸ್ ಡಿಪೊ ನಿರ್ಮಾಣ,ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು. ಜತೆಗೆ ತಾಲೂಕು ಕೇಂದ್ರ ರಚನೆ ಮಾಡಬೇಕು ಎಂದು ಒತ್ತಾಯಿಸಿದರು. ಲಿಂಗಸೂರು ತಹಶೀಲ್ದಾರ್ ಶಂಶಾಲಂ ಅವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂಧರ್ಮಗುರು ಜಮೀರ್ ಅಹ್ಮದ್ ಖಾಜಿ,ಪುರಸಭೆ ಮಾಜಿ ಸದಸ್ಯ ಸೈಯದ್ಫಕ್ರುದ್ದೀನ್ ಸಾಬ್, ಸುರೇಶ ಭಂಡಾರಿ,ಶರಣಪ್ಪ ಕಟ್ಟಿಮನಿ,ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ವ್ಯವಸ್ಥಾಪಕ ಸುರೇಶ ಹೊನ್ನಳ್ಳಿ ಗ್ರಾಮಲೆಕ್ಕಾಧಿಕಾರಿ ದೀಪಿಕಾ ರಾಠೋಡ,ಗುರುಬಸಪ್ಪ ಸಜ್ಜನ, ಪುರಸಭೆ ಸದಸ್ಯ ಮೈಬೂಬ್ಸಾಬ್ ಕಡ್ಡಿಪುಡಿ, ಕರವೇ ಮುಖಂಡರಾದ ಎಸ್.ಎನ್. ಖಾದ್ರಿ, ಸಾಬು ಹುಸೇನ್,ಮಹಾಂತೇಶ ಚಟ್ಟರ್ ಮಹ್ಮದ್ ಜಿಲಾನಿ,ಎಸ್.ಎ.ನಯೀಮ್ಬಸವರಾಜಬಂಕದಮನಿ, ರಫಿಖಾಜಿ, ಕೃಷ್ಣಾಚಲುವಾದಿ, ಸರೋಜಮ್ಮ, ಕಾಸಿಂಬೀ,ಬಸಮ್ಮ ಇತರರಿದ್ದರು.
ವರದಿ:- ಮಂಜುನಾಥ ಕುಂಬಾರ