ಮುದಗಲ್ಲ ವರದಿ
ಇಂದು ಮುದಗಲ್ ಬಂದ್ ಗೆ ಕರೆ …
ಮುದಗಲ್: ಪಟ್ಟಣದಲ್ಲಿ ತಲೆ ದೂರಿರುವ ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಇಂದು ಮಂಗಳವಾರ ಪಟ್ಟಣದ ಬಂದ್ ಕರೆ ನೀಡಲಾಗಿದೆ ಎಂದು ಎಸ್.ಎ.ನಯೀಮ್ ತಿಳಿಸಿದರು
ಶಾಶ್ವತ ಕುಡಿವ ನೀರು ಸರಬರಾಜು ಮಾಡಲು ಒತ್ತಾಯಿಸಿ ಬಂದ್ ಕರೆ ನೀಡಲಾಗಿದೆ. ಅಲ್ಲದೆ ಬಸ್ ಡಿಪೋ ಮಂಜೂರು, ಮುದಗಲ್ ಕೋಟೆ ಉತ್ಸವ ಆಚರಣೆ ಹಾಗೂ ಮುದಗಲ್ ತಾಲೂಕು ಘೋಷಣೆ ಒತ್ತಾಯಿಸಲಾಗುವುದು.ಕರವೇ ನೇತೃತ್ವದಲ್ಲಿ ದಲಿತಪರ ಸಂಘಟನೆಗಳು, ಎಪಿಎಂಸಿ, ಹಮಾಲರ ಸಂಘ ಮತ್ತು ನಾನಾ ಸಂಘಟನೆಗಳು, ಪ್ರಗತಿಪರ
ಚಿಂತಕರು, ಮಹಿಳೆಯರು ಬಂದ್ ಗೆ ಬೆಂಬಲ ನೀಡಿದ್ದಾರೆ.
ಅಗತ್ಯ ಸೇವೆ ಹೊರತುಪಡಿಸಿ ಪಟ್ಟಣದ ಅಂಗಡಿ ಮುಂಗಟ್ಟುಗಳು, ಬೀದಿ ಬದಿವ್ಯಾಪಾರ, ಎಪಿಎಂಸಿ ಕಾರ್ಯ ಸ್ಥಗಿತಗೊಳಿಸಲಿವೆ.
ಸಂಚಾರಕ್ಕೆ ತೊಂದರೆ ಮಾಡದೆ ಶಾಂತಿಯುತವಾಗಿ ಬಂದ್ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ವರದಿ:- ಮಂಜುನಾಥ ಕುಂಬಾರ