ಮುದಗಲ್ಲ ವರದಿ..
ಗಮನ ಸೆಳೆದ ‘ಬಸವ ಬುತ್ತಿ’ ಮೆರವಣಿಗೆ…
ವರದಿ : ಮಂಜುನಾಥ ಕುಂಬಾರ
ಮುದಗಲ್ಲ : ಐತಿಹಾಸಿಕ ಮುದಗಲ್ಲ ಪಟ್ಟಣದ ಕುಂಬಾರ ಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದ ರಥೋತ್ಸವ ಹಾಗೂ ವಿಶ್ವ ಗುರು ಬಸವಣ್ಣ ನವರ ಜಯಂತ್ಯೋತ್ಸವ ಅಂಗವಾಗಿ ಜಗನ್ಮಾತೆ ಸಜ್ಜಲಗುಡ್ಡದ ಶ್ರೀ ಶರಣಮ್ಮ ತಾಯಿಯವರ ಒಂಬತ್ತನೇ ದಿನ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ
ನೀಲಕಂಠೇಶ್ವರ ದಿಂದ ಕುಂಬಾರ ಓಣಿಯ ಶ್ರೀ ಬಸವೇಶ್ವರ ದೇವಸ್ಥಾನದ ವರಗೆ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ತಲೆ ಮೇಲೆ ಹೊತ್ತು ತಂದ ಬಸವ ಬುತ್ತಿ ಮೆರವಣಿಗೆ ರವಿವಾರ ಗಮನ ಸೆಳೆಯಿತು.
ಪಟ್ಟಣದ ನೀಲಕಂಠೇಶ್ವರ ದೇವಸ್ಥಾನ ದಲ್ಲಿ ಬುತ್ತಿಗಳಿಗೆ ಅಭಿನವ ಚನ್ನಬಸವ ಮಹಾಸ್ವಾಮಿ ಶಿವಾಚಾಯ೯ರು ಮಹಾತೇಶ್ವರ ಹಿರೇಮಠ ಆಳಂದ ನಂದವಾಡಗಿ ಅವರು ವಿಶೇಷ ಪೂಜೆ ಸಲ್ಲಿಸಿದ್ದರು . ನೀಲಕಂಠೇಶ್ವರ ದೇವಸ್ಥಾನ ದಿಂದ ಆರಂಭಗೊಂಡ ಮೆರವಣಿಗೆ ಪೋಲಿಸ್ ಠಾಣೆಯಲ್ಲಿ ,ಚೌಡಿಕಟ್ಟಿ ,
ಮುಖಾಂತರ ಕುಂಬಾರ ಓಣಿಯ ಬಸವೇಶ್ವರ ದೇವಾಲಯ ತಲುಪಿತು.
ಮೆರವಣಿಗೆಯುದ್ದಕ್ಕೂ ಇಲಕಲ್ ಸೀರೆ, ಹಳೆಯ ಮಾದರಿ ಸೀರೆಯುಟ್ಟು ಬಸವ ಬುತ್ತಿಯನ್ನು ತಲೆ ಮೇಲೆ ಹೊತ್ತು ತಂದ ಮಹಿಳೆಯರು ಗಮನ ಸೆಳೆದರು.
ಎರಡು ಸಾಲಿನಲ್ಲಿ ಮೆರವಣಿಗೆ ಯಲ್ಲಿ ಪಾಲ್ಗೊಂಡ ಮಹಿಳೆಯರು ಜಾತ್ಯತೀತವಾಗಿ ಪಾಲ್ಗೊಂಡರು. ನಂತರ ಕುಂಬಾರ ಓಣಿಯ ಬಸವೇಶ್ವರ ದೇವಾಲಯದ ಬಸವಯೋಗಿ ದಾಸೋಹಕ್ಕೆ ಬುತ್ತಿಗಳನ್ನು ಸಮರ್ಪಿಸಿದ್ದರು
ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಬಸವ ಸಮಿತಿ ಯ ಅಧ್ಯಕ್ಷರಾದ ಮಲ್ಲಪ್ಪ ಮಾಟೂರು, ಗಾಯಕರಾದ ವಿಶ್ವೇಶ್ವರಯ್ಯ ಹಿರೇಮಠ ಲಿಂಗಸೂರು ಆಕಾಶವಾಣಿ ದೂರದಶ೯ನ ಕಲಾವಿದರು, ಹಾಗೂ ಮಲ್ಲಿಕಾರ್ಜುನ ಗೌಡ ಉಮಳಿ ಹೊಸೂರು , ಶಿವನಂದ ಸುಂಕದ ,ಲಿಂಗಪ್ಪ ಹಣಗಿ, ಮಹಾಂತೇಶ್ ಪಾಟೀಲ್, ಶರಣಪ್ಪ ಸಜ್ಜನ್ , ಸಂತು ಸುರಪುರ, ವೀರೇಶ ಕೇಣೇದ್ ,ಮಹಾಂತೇಶ್ ಗದ್ದಿ, ಮಹಾಂತೇಶ ಕುಂಬಾರ, ಮಲೇಶ ಕುಂಬಾರ, ವೆಂಕಣ್ಣ ಕುಂಬಾರ, ವೀರಭದ್ರಯ್ಯ ಸ್ವಾಮಿ, ಬಸವರಾಜ ಮಡಿವಾಳ, ಬಸಣ್ಣ ಚಟ್ಟರ್, ವಿರೇಶ ಸಜ್ಜನ್, ಸಂಗಪ್ಪ ಕೊಡೆಕಲ್, ಶಂಕರ ಮಾಟೂರು, ಉದಯ ಕುಮಾರ್
ಕಂಬಾರ ,ಮಹಿಳೆಯರುರಾದ ಶಶಿಕಲಾ ಬೋವಿ, ಅನುರಾಧ ಸಿದ್ದಯ್ಯ ಸಾಲಿಮಠ,ತೋಟಮ್ಮ , ವಿಜಯಲಕ್ಷ್ಮಿ, ಶಿವಮ್ಮ, ರೇಣುಕಾ ಕುಂಬಾರ, ಇತರರು ಉಪಸ್ಥಿತರಿದ್ದರು
ವರದಿ: ಮಂಜುನಾಥ ಕುಂಬಾರ