ಮುದಗಲ್ : ಮನೆಗಳ್ಳರ ಬಂಧನ…

ಮುದಗಲ್ : ಮನೆಗಳ್ಳರ ಬಂಧನ..

ಮುದಗಲ್ : ಪಟ್ಟಣ ಸಮೀಪದ ನಾಗರಹಾಳ ಗ್ರಾಮದಲ್ಲಿ ಪೆಬ್ರುವರಿ ೨೦೨೫ ರಂದು ೧೦ ಗ್ರಾ.ಪಂ. ಬಂಗಾರ ಹಾಗೂ ೨ ಲಕ್ಷ ರೂಗಳ ಕಳ್ಳತನ ಮಾಡಲಾಗಿದೆ ಎಂದು ಶಂಕ್ರಮ್ಮ ಹಾಗೂ ಅಶೋಕ ಅವರುಗಳು ಮುದಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಕಳ್ಳತನ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ ಅಧೀಕ್ಷಕರು ರಾಯಚೂರು ಮುದಗಲ್ ಪಿಎಸೈ ವೆಂಕಟೇಶ್ ಮಾಡಗೇರಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.ಪ್ರಕರಣ ಬೆನ್ನತ್ತಿದ ಮುದಗಲ್ ಪೋಲಿಸರು ಆರೋಪಿತನಾದ ಶಿವಪ್ಪ ತಂದೆ ಶೇಖರಪ್ಪ (೨೦) ನಾಗರಹಾಳ ಇತನು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಿಚಾರಣೆಗೆ ಒಳಪಡಿಸಿ,ಪ್ರಕರಣಗಳಲ್ಲಿ ಕಳುವು ಮಾಡಿದ ೧೦ ಗ್ರಾಂ ಬಂಗಾರ ಮತ್ತು ೨ ಲಕ್ಷ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ಈ ಪ್ರಕರಣ ಬೇಧಿಸಿದ ವಿಶೇಷ ತಂಡದ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್‌ಐ ವೆಂಕಟೇಶ್ ಮಾಡಗೇರಿ, ಎಎಸ್‌ಐ ಮಲ್ಲಯ್ಯ ಸಿಬ್ಬಂದಿ ವೆಂಕಟೇಶ್, ಅಮರೇಶ್, ಅನಿಲ್ ಕುಮಾರ , ರಾಮಪ್ಪ, ಸತ್ತಾರ ಪಾಶಾ, ರುದ್ರಗೌಡ ಸೇರಿದಂತೆ ಮುಂತಾದವರು ಇದ್ದರು

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!