ಮುದಗಲ್ಲ ಪುರಸಭೆ ವತಿಯಿಂದ ಬುದ್ಧ ಜಯಂತಿ ಆಚರಣೆ..

ಮುದಗಲ್ಲ ವರದಿ.‌

ಮುದಗಲ್ಲ ಪುರಸಭೆ ವತಿಯಿಂದ ಬುದ್ಧ ಜಯಂತಿ ಆಚರಣೆ..

ಮುದಗಲ್ಲ :- ಪುರಸಭೆ ವತಿಯಿಂದ ಬುದ್ಧಿ ಜಯಂತಿಯನ್ನು ಆಚರಣೆ ಮಾಡಲಾಯಿತು ಬುದ್ದನ ಭಾವಚಿತ್ರ ಕ್ಕೆ ಸಿಬ್ಬಂದಿ ಚನ್ನಮ್ಮ ದಳವಾಯಿ ಮಠ ಅವರು ಪೂಜೆ ಸಲ್ಲಿಸಿ ದ್ದರು ನಂತರ ಮಾತನಾಡಿದ ಮುಖ್ಯಾಧಿಕಾರಿ ನರಸರಡ್ಡಿ ಅವರು ಬುದ್ಧನ ಅಷ್ಟ ಮಾರ್ಗಗಳನ್ನು ಪಾಲಿಸಿದಾಗ ಮಾತ್ರ ಮನುಷ್ಯನಾಗಲು ಸಾಧ್ಯ ಎಂದು ಹೇಳಿದರು.
ನಂತರ ಮಾತನಾಡಿದ ಪುರಸಭೆ ಸದಸ್ಯ ರಾದ ಗುಂಡಪ್ಪ ಗಂಗಾವತಿ ಅವರು‘ನಮ್ಮ ಮಾತು ಅರ್ಥಪೂರ್ಣತೆ ಯಿಂದ ಕೂಡಿರಬೇಕು. ಯುವಕರು ತಮ್ಮ ಬುದ್ಧಿ ಹಾಳು ಮಾಡುವಂತಹ ಮಾದಕ ದ್ರವ್ಯಗಳನ್ನು ಬಳಕೆ ಮಾಡಬಾರದು. ಸುಳ್ಳು ಹೇಳುವುದು, ಮತ್ತೊಬ್ಬರನ್ನು ನಿಂದಿಸುವುದರಲ್ಲಿ ಅರ್ಥವಿಲ್ಲ. ಮನುಷ್ಯನಿಗೆ ಜೀವನದಲ್ಲಿ ತೃಪ್ತಿ ಬಹಳ ಮುಖ್ಯ’ ಎಂದು ಹೇಳಿದರು

ನಂತರ ಮಾತನಾಡಿದ ಪುರಸಭೆ ಉಪಾಧ್ಯಕ್ಷರಾದ ಅಜ್ಮೀರ್ ಬೆಳ್ಳಿಕಟ್ಟ್ ಅವರು ಬಳ ‘ದೇಹಕ್ಕೂ, ಮನಸ್ಸಿಗೂ ಮತ್ತು ಉಸಿರಾಟಕ್ಕೂ ಸಂಬಂಧವಿದೆ. ಮನಸ್ಸಿನ ಮೇಲೆ ಗಮನವಿಟ್ಟಾಗ ಪ್ರಾಮಾಣಿಕವಾಗಿ ಇರಲು ಸಾಧ್ಯ. ಉಸಿರಾಟ ನಮ್ಮ ದೇಹದಲ್ಲಾಗುವ ವೇದನೆಯನ್ನು ನೀಗುತ್ತದೆ’ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿಗಳಾದ ಮ್ಯಾನೇಜರ್ ಸುರೇಶ್ , ನಿಸಾರ್ ಅಹಮದ್,ಜಿಲಾನಿ ಪಾಶ ,ಪವನ್ ಕುಮಾರ್ , ಮುಖಂಡರಾದ ಬಸವರಾಜ ಬಂಕದಮನಿ, ಶಿವರಾಜ್ ತಳವಾರ ,ನಾಗರಾಜ್ ತಳವಾರ, ಚನ್ನಪ್ಪ ಯಂಕಣ್ಣ ದೇಶಪಾಂಡೆ , ಇತರರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!