ಮುದಗಲ್ಲ ವರದಿ…
ಮುದಗಲ್ಲ ನಲ್ಲಿ ದಸರಾ ಮಹೋತ್ಸವದ ಅಂಗವಾಗಿ ನಡೆದ ನಗೆಹಬ್ಬ ತ್ರಿಮೂರ್ತಿಗಳ ಹಾಸ್ಯ ಸುನಾಮಿ…

ಮುದಗಲ್ಲ ದಸರಾ ಮಹೋತ್ಸವದ ಅಂಗವಾಗಿ ನಡೆದ ನಗೆಹಬ್ಬ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಮುದಗಲ್ಲ :- ಮಂಗಳವಾರ ಪಟ್ಟಣದ ಚೌಡಿ ಕಟ್ಟೆ ಕೋಟೆ ಮುಂಭಾಗದಲ್ಲಿ ಸಂಜೆ ಜ್ಯೂ.
ಬೀchi ಎಂದೇ ಖ್ಯಾತರಾಗಿರುವ ಗಂಗಾವತಿ ಪ್ರಾಣೇಶ್,ಬಸವರಾಜ ಮಹಾಮನಿ, ನರಸಿಂಹ ಜೋಶಿ ತಂಡದಿಂದ ಹಾಸ್ಯಸಂಜೆ, ‘ನಗೆ ಹಬ್ಬ’ ಕಾರ್ಯಕ್ರಮ ಅವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಆಯೋಜಿಸಿತ್ತು.
ನಗೆಹಬ್ಬ ಕಾರ್ಯಕ್ರಮವನ್ನು ಪುರಸಭೆ ಯ ಅಧ್ಯಕ್ಷರಾದ ಮಹಾದೇವಮ್ಮ ಗುತ್ತೆದಾರ ಹಾಗೂ ಉಪಾಧ್ಯಕ್ಷ ರಾದ ಅಜ್ಮೀರ್ ಬೆಳ್ಳಿಕಟ್ ,ಪರಶುರಾಮ ಕಟ್ಟಿಮನಿ ,ಅಶೋಕ್ ಗೌಡ ಪಾಟೀಲ್ , ಮಹಾಂತೇಶ ಪಾಟೀಲ್ ,ರಾಘವೇಂದ್ರ ಗುಮಾಸ್ತೆ ,ಪಿ ಎಸ್ ಐ ವೆಂಕಟೇಶ್ ಹಾಗೂ ಊರಿನ ಗಣ್ಯರು ಹಾಗೂ ಗಂಗಾವತಿ ಪ್ರಾಣೇಶ್,ಬಸವರಾಜ ಮಹಾಮನಿ, ನರಸಿಂಹ ಜೋಶಿ ಸೇರಿ ಉದ್ಘಾಟಿಸಿದರು

ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ ಮಹಾಮನಿ ಹಾಗೂ ಅವರ ತಂಡವು ಪ್ರೇಕ್ಷಕರನ್ನು ನಗಿಸಿದ ಕೆಲವು ಝಲಕ್‌ಗಳಿವು.ನರಸಿಂಹ ಜೋಶಿಯವರ ರಾಜಕೀಯ ನಾಯಕರು ಹಾಗೂ ಚಿತ್ರನಟರ ಅನುಕರಣೆ ಮಾಡಿದಾಗ ಪ್ರೇಕ್ಷಕರ ಜನರು ಬಿದ್ದು ಬಿದ್ದು ನಕ್ಕರು.
ಬಸವರಾಜ ಮಾಮನಿ ಮಾತನಾಡಿ, ತಮ್ಮ ಶರೀರವೇ ಹಾಸ್ಯಕ್ಕೆ ಉದಾಹರಣೆ ಎಂದು ತಮ್ಮನ್ನು ವಿಡಂಬಣೆ ಮಾಡಿಕೊಂಡರು. ಮನೆಯಲ್ಲಿಯೇ ನಡೆಯುವ ಹಾಸ್ಯ ಪ್ರಸಂಗ ಹಾಗೂ ಮಕ್ಕಳ ಮಾತುಗಳು ದೊಡ್ಡವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಸಂಗಗಳನ್ನು ಹೇಳಿದಾಗ ಜನರು ಹೌದಲ್ಲ ಎಂದು ನಗತೊಡಗಿದರು.

ಗಂಗಾವತಿ ಪ್ರಾಣೇಶ ಮಾತನಾಡಿ, ಮನುಷ್ಯನಿಗೆ ನಗುವೇ ಆಭರಣ. ನಕ್ಕರೇ ಅದೇ ಸ್ವರ್ಗ ಎಂದರು. ಆಕಾಶವಾಣಿಯಲ್ಲಿ ನಗುವಿನ ಕಾರ್ಯಕ್ರಮ ಹೇಗೆ ಕೊಡುವುದು ನಮ್ಮ ಮುಂದೆ ಜನಾನೂ ಇರುದಿಲ್ಲ. ಜನ ಇಲ್ಲಂದ್ರ ಮಾತು ಬರೂದಿಲ್ಲ ಎಂದು ಅನೀಲ ದೇಸಾಯಿ ಅವರನ್ನು ಕೆಣಕಿದರು.

ಬಸವರಾಜ ಮಾಮನಿ ಮಾತನಾಡಿ, ತಮ್ಮ ಶರೀರವೇ ಹಾಸ್ಯಕ್ಕೆ ಉದಾಹರಣೆ ಎಂದು ತಮ್ಮನ್ನು ವಿಡಂಬಣೆ ಮಾಡಿಕೊಂಡರು. ಮನೆಯಲ್ಲಿಯೇ ನಡೆಯುವ ಹಾಸ್ಯ ಪ್ರಸಂಗ ಹಾಗೂ ಮಕ್ಕಳ ಮಾತುಗಳು ದೊಡ್ಡವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಸಂಗಗಳನ್ನು ಹೇಳಿದಾಗ ಜನರು ಹೌದಲ್ಲ ಎಂದು ನಗತೊಡಗಿದರು.
ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ದೇವಸ್ಥಾನಕ್ಕೆ ಹೋಗುವುದು ಹೆಚ್ಚಾಗಿದೆ. ಭಕ್ತಿ ಎಂದು ಭಾವಿಸದಿರಿ. ಅರ್ಚನಾ, ದೀಪಾ, ಗೀತಾ, ಶಾಂತಿ, ಅಭಿಷೇಕ, ತೀರ್ಥ, ಪ್ರಜ್ವಲ, ದರ್ಶನ ಸಿಗತಾರ ಎಂಬುದನ್ನು ಹೇಳಿ ದೇವಸ್ಥಾನವೂ ಹಾಸ್ಯಕ್ಕೆ ಬಳಕೆ ಮಾಡಿಕೊಂಡು ನಗಿಸಿದರು.
ಧಾರಾವಾಹಿಗಳ ಬೆಳೆಸುವ ಪರಿಯನ್ನು ವಿಧಾನಸೌಧದಲ್ಲಿ ಒಂದು ಫೈಲ್ ಇನ್ನೊಂದು ಟೇಬಲ್ಲಿಗೆ ಹೋಗಲು ವಾರಗಳ ಕಾಲ ತೆಗೆದುಕೊಳ್ಳುವಂತೆ ಎಂದು ಉದಾಹರಿಸಿದರು. ನನ್ನ ಕೈಲಿ ನಡೆಯಲು ಆಗದು…ಎಂದಾಗ ಕೈಲೆ ನಡಿತಾರಾ.. ಕಾಲಲ್ಲಿ ಅಲ್ಲೇನು…ಮಕ್ಕಳನ್ನು ಬೆಳೆಸುವ ಪರಿಯನ್ನು ಎಳೆ ಎಳೆಯಾಗಿ ಬಿಡಿಸಿದಾಗ ಸಿಳ್ಳು ಕೇಕೆ ಮುಗಿಲು ಮುಟ್ಟಿತು. ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳಿಗೆ ಕಾನ್ವೆಂಟ್‌ನಲ್ಲಿ ಕಲಿತ ಮಕ್ಕಳಿಗೆ ಇರುವ ವ್ಯತ್ಯಾಸವನ್ನು ಹೇಳಿದಾಗ ಜನರು ಬಿದ್ದು ಬಿದ್ದು ನಕ್ಕರು. ತಂಬಗಿ ತಮ್ಮನ್ನನ ವಿಷಯ ಹೇಳಿ ಸಂವಹನ ಕೊರತೆಯಿಂದ ಆದ ಘಟನೆ, ದುಬಾಯಿ ಪ್ರವಾಸ, ಟಾಯ್ಲೆಟ್ ಬರಹ ಹೇಳಿ ವಿಡಂಬನೆ ಮಾಡಿದರು.
ಚೌಡಿ ಕಟ್ಟೆಯ ಕೋಟೆಯ ಮುಂಭಾಗದಲ್ಲಿ ಹಾಕಿದ
ದೀಪಾಲಂಕಾರ ಪಟ್ಟಣದಲ್ಲಿ ಮೆರುಗನ್ನು ಹೆಚ್ಚಿಸಲಿದೆ.
ಈ ಸಂದರ್ಭದಲ್ಲಿ ಮುದಗಲ್ಲ ದಸರಾ ಉತ್ಸವ ಸಮಿತಿ ಸದಸ್ಯರು ಹಾಗೂ ಮುದಗಲ್ಲ ಸಹಸ್ರಾರು ಸವ೯ಜನಿಕರು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ