ಬಡವರ ಹಸಿವು ತಣಿಸಲಿದೆ ಇಂದಿರಾ ಕ್ಯಾಂಟೀನ್’..

ಮುದಗಲ್ಲ ವರದಿ..

ಬಡವರ ಹಸಿವು ತಣಿಸಲಿದೆ ಇಂದಿರಾ ಕ್ಯಾಂಟೀನ್’..

ಮುದಗಲ್ಲ :- ಲಿಂಗಸೂರು ತಾಲೂಕಿನ ಐತಿಹಾಸಿಕ ಮುದಗಲ್ಲ ಪಟ್ಟಣದ ಮುಖ್ಯ ಕೇಂದ್ರ ಬಿಂದುವಾದ ಪಶು ವೈದ್ಯಕಿಯ ಆಸ್ಪತ್ರೆ ಮುಂಭಾಗದಲ್ಲಿ ನಿರ್ಮಾಣವಾಗಿರುವ ರಾಜ್ಯ ಸರ್ಕಾರದ ಮಹತ್ವ ಪೂರ್ಣ ಯೋಜನೆಯಲ್ಲಿ ಒಂದು ಆದ ಸ್ಥಳೀಯ ಇಂದಿರಾ ಕ್ಯಾಂಟೀನ್ ಗೆ ದಿನ ನಿತ್ಯ ಸರ್ಕಾರಿ ಕಚೇರಿಗಳಿಗೆ ಕೆಲಸ, ಕಾರ್ಯಗಳಿಗೆ ಬರುವ ಗ್ರಾಮೀಣ ಪ್ರದೇಶದ ಜನರಿಗೂ ಇದರಿಂದ ಅನುಕೂಲವಾಗಿದೆ ಪ್ರತಿದಿನ ಬೆಳಗ್ಗೆ 5 ಕ್ಕೆ ಉಪಾಹಾರ, ಮಧ್ಯಾಹ್ನ, 10 ಕ್ಕೆ ಊಟ ನೀಡುವ ಇಂದಿರಾ ಕ್ಯಾಂಟೀನ್ ಬಡಜನರ ಹೊಟ್ಟೆ ತುಂಬಿಸಲಿದೆ.

ಪ್ರತಿದಿನ ಎಷ್ಟು ಜನ ಬರ್ತಾರೆ ?

ಇಂದಿರಾ ಕ್ಯಾಂಟಿನ್‌ಗೆ ಹೆಚ್ಚಿದ ಬೇಡಿಕೆ ಪಟ್ಟಣದಲ್ಲಿದಲ್ಲಿ ಊಟ ಮಾಡುವವರ ಸಂಖ್ಯೆ ಜಿಗಿತ
ಬಡವರ ಹಸಿವು ನೀಗಿಸಲು ಆರಂಭಗೊಂಡಿರುವ ಇಂದಿರಾ ಕ್ಯಾಂಟಿನ್‌ ಊಟಕ್ಕೆ ಬೇಡಿಕೆ ಹೆಚ್ಚಿದೆ ಇಂದಿರಾ ಕ್ಯಾಂಟಿನ್‌ ಬಡವರ ಪಾಲಿನ ಅಕ್ಷಯ ಪಾತ್ರೆಯಾಗಿದೆ

ಊಟ ಮಾಡುವವರ ಸಂಖ್ಯೆ ಏರಿಕೆ:

ಪಟ್ಟಣದ ಇಂದಿರಾ ಕ್ಯಾಂಟಿನ್‌ ಗಳಲ್ಲಿ ಇ ತಿಂಗಳಿನಿಂದ 100 ದಿಂದ ಊಟ ಮಾಡುವವರ ಸಂಖ್ಯೆ 300 ಕ್ಕೆ ಏರಿಕೆಯಾಗಿದೆ

ಕೂಲಿ ಕಾರ್ಮಿಕರೇ ಹೆಚ್ಚು:

ಇಂದಿರಾ ಕ್ಯಾಂಟಿನ್‌ ಸಿಬ್ಬಂದಿ ಗಳ ಮಾಹಿತಿ ಪ್ರಕಾರ ನಿತ್ಯ ಇಂದಿರಾ ಕ್ಯಾಂಟೀನ್‌ ನಲ್ಲಿ ಊಟ – ತಿಂಡಿ ‌ಸ್ವೀಕರಿಸುತ್ತಿರುವವರ ಪೈಕಿ ಬಡ ಜನರು ಹಾಗೂ ಕೂಲಿ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು, ಕಾಲೇಜು ವಿದ್ಯಾರ್ಥಿಗಳು, ಫುಟ್ಪಾತ್‌ ನಲ್ಲಿರುವ ನಿರ್ಗತಿಕರೇ ಹೆಚ್ಚು ಎಂದು ಮಾಹಿತಿ ನೀಡಿದರು.
ಇನ್ನೂ ಮುಂದೆಯು ದಿನನಿತ್ಯ ಗುಣಮಟ್ಟದ ಆಹಾರ ಹೀಗೆ ನೀಡಲಿ ಸ್ಥಳೀಯ ರ ಆಶಯ.

ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!