LOCAL NEWS : ವಿದ್ಯಾನಂದ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ‘ಬೋಳೇಶಂಕರ, ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ..!

You are currently viewing LOCAL NEWS : ವಿದ್ಯಾನಂದ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ‘ಬೋಳೇಶಂಕರ, ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ..!

ಪ್ರಜಾ ವೀಕ್ಷಣೆ ಸುದ್ದಿ : 

LOCAL NEWS : ವಿದ್ಯಾನಂದ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ‘ಬೋಳೇಶಂಕರ, ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ..!

ಕುಕನೂರ : ‘ಪಠ್ಯ ಆಧಾರಿತ ನಾಟಕಗಳು ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಿವೆ’ ಎಂದು ವಿದ್ಯಾನಂದ ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಾದ ಪಾಂಡುರಂಗ ಅವರು ಹೇಳಿದರು.

ಅವರು ಶನಿವಾರ ಕುಕನೂರ ಪಟ್ಟಣದ ವಿದ್ಯಾನಂದ ಗುರುಕುಲ ಪದವಿ ಪೂರ್ವ ಕಾಲೇಜಿನ ಹುತಾತ್ಮ ಸಭಾಂಗಣದಲ್ಲಿ ನಡೆದ ರಂಗಧಾರ ರೆಪರ್ಟ್ ರಿ ಕೊಪ್ಪಳ ಇವರ ವತಿಯಿಂದ ಡಾ. ಚಂದ್ರಶೇಖರ್ ಕಂಬಾರ್ ಸಾಹಿತ್ಯ ದ ಆಧಾರಿತ ರಂಗ ಕಲಾವಿದ ಲಕ್ಷ್ಮಣ್ ಪೀರಗಾರ ರವರ ನಿರ್ದೇಶನದ “ಬೆಪ್ಪು ತಕ್ಕಡಿ ಬೋಳೇಶಂಕರ” ಅಭಿನಯದ ನಾಟಕ ಮತ್ತು ಜಗದೀಶ್ ಜಾನಿ ಅವರ ನಿರ್ದೇಶನದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ‘ಕೃಷ್ಣ ಗೌಡನ ಆನೆ’ ಎಂಬ ನಾಟಕ ಪ್ರದರ್ಶನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾಲ್ಕು ಗೋಡೆಯ ಕೊಠಡಿ ಒಳಗೆ ಒಬ್ಬ ಶಿಕ್ಷಕ ಪಾಠ ಮಾಡುವುದಕ್ಕಿಂತ, ಆ ಪಾಠವನ್ನು ನಾಟಕ ಚಟುವಟಿಕೆಯ ಮೂಲಕ ಹೇಳುವುದರಿಂದ ವಿದ್ಯಾರ್ಥಿಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಇದರಿಂದ ಅವರ ಕಲಿಕೆಯಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು. ಜೊತೆಗೆ ಪಠ್ಯ ಆಧಾರಿತ ವಿಷಯಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬೇರೂರುವಂತೆ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಸಾಹಿತಿ ಚಂದ್ರಶೇಖರ ಕಂಬಾರರು ರಚಿಸಿದ ನಾಟಕ ಬೆಪ್ಪು ತಕ್ಕಡಿ ಬೋಳೇಶಂಕರ” ಇದು ರಷ್ಯಾದ ಲೇಖಕರೊಬ್ಬರ ಕಥೆಯನ್ನು ಆಧರಿಸಿದೆ ಮತ್ತು ಸಮಾಜವಾದ, ಸಮಾನತೆ ಮತ್ತು ಶ್ರಮ ಸಂಸ್ಕೃತಿಯ ಮಹತ್ವವನ್ನು ಪ್ರತಿಪಾದಿಸುತ್ತದೆ. ಬೋಳೇಶಂಕರ ಎಂಬುದು ಶ್ರಮ ಸಂಸ್ಕೃತಿಯ ಮೇಲೆ ನಂಬಿಕೆ ಇಟ್ಟಿರುವ ಸಹಜ ಸಂತನ ಪಾತ್ರವಾಗಿದೆ ಎಂದರು.

ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ ಕೃಷ್ಣಗೌಡನ ಆನೆ ‘ ಎಂಬ ನೀಳತೆಯು ಅವರ ಅತ್ಯಂತ ಮಹತ್ವದ ರಚನೆಗಳಲ್ಲಿ ಒಂದೆನಿಸಿದೆ . ಆನೆಯ ನೆಪದಲ್ಲಿ ಊರಿನಲ್ಲಿ ನಡೆಯುವ ಎಲ್ಲ ದುರಂತ ಘಟನೆಗಳಿಗೆ ವಿಚಿತ್ರವಾದ ಸಂಬಂಧಗಳು ಬೆಳೆದು ನಿಗೂಢವಾಗಿ ಮನುಷ್ಯ ಮತ್ತು ಪರಿಸರದ ನಡುವೆ ವಿಷಮತೆಗೆ ಕಾರಣವಾಗುವ ಸಾಮಾಜಿಕ ಸನ್ನಿವೇಶದ ಮುಖವನ್ನು ಕೃಷ್ಣಗೌಡನ ಆನೆ ‘ ಕಥೆಯು ಚಿತ್ರಿಸುತ್ತದೆ . ಬದುಕಿನ ಗಂಭೀರ ಕಾಳಜಿಗಳನ್ನು ಮತ್ತು ಕಾಣದ ಕುದ ರಹಸ್ಯಗಳನ್ನು ಪತ್ತೆದಾರಿ ರೀತಿಯಲ್ಲಿ ಕಾಣಿಸುವ ನೆಲೆ ಈ ಕಥೆಯಲ್ಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜು ಇಟಗಿ ಪ್ರಭಾರಿ ಪ್ರಾಚಾರ್ಯ ರಾದ ಬೀರಪ್ಪ ಡಿ ಕಾನಕುಡ್ತಿ, ಕೆ. ಎ. ಬೋವುರ್, ಕೆ ಎಲ್ ಇ ಕಾಲೇಜಿನ ಕನ್ನಡ ಉಪನ್ಯಾಸಕ ಕುಂಟಪ್ಪ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ನಾಟಕ ಪ್ರದರ್ಶನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ಕಾಲೇಜಿನಲ್ಲಿ ಸಹ ಇಂಥ ಪಠ್ಯಾಧಾರಿತ ನಾಟಕಗಳ ಪ್ರದರ್ಶನಗಳು ಬೇಕಾದರೆ ಕೊಪ್ಪಳದ ರಂಗಧಾರ ರೆಪೇರ್ಟಿರಿ ನ ರಾಜ್ಯ ಸಂಯೋಜಕರಾದ ಶರಣು ಶೆಟ್ಟರ್ ಮತ್ತು ನಿರ್ದೇಶಕರಾದ ಲಕ್ಷ್ಮಣ್ ಪೀರಗಾರ ಅವರನ್ನು ಸಂಪರ್ಕಿಸಲು ಮೊಬೈಲ್ ಸಂಖ್ಯೆ : 8197808300 ಕೋರಲಾಗಿದೆ.

Leave a Reply

error: Content is protected !!