LOCAL FLASH NEWS : ಬೈಕ್ ಮುಖಾಮುಖಿ; ಹಿಂಬದಿ ಸವಾರನ ಸಾವು..!!
ಕುಕನೂರು ಪೊಲೀಸ್ ಠಾಣೆ
ಕುಕನೂರು : ತಾಲೂಕಿನ ವೀರಾಪುರ ಗ್ರಾಮದ ಹೊರ ವಲಯದಲ್ಲಿ ಗುರುವಾರ ರಾತ್ರಿ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿಯಾಗಿದ್ದು, ಈ ಅಪಘಾತದಲ್ಲಿ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ನಿನ್ನೆ (ಗುರುವಾರ) ರಾತ್ರಿ ಸುಮಾರು 9 ಗಂಟೆಯವರೆಗೆ ನೂತನ ವೀರಾಪುರ ಗ್ರಾಮದ ಹತ್ತಿರ ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿಯಾಗಿ ಅಪಘಾತ ಸಂಭವಿಸಿದ್ದು ಹಿಂಬದಿ ಸವಾರ ವೀರಪುರ ಗ್ರಾಮದ ಮಹಾಂತೇಶ್ ಲಕ್ಷ್ಮೇಶ್ವರ (38) ಎಂಬ ಯುವಕನು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗೆ ಎಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಇನ್ನುಳಿದಂತೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಂತೋಷ, ಮಂಜುನಾಥ, ಭರತ ಎಂಬುವ ಮೂರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿರುವದಾಗಿ ತಿಳಿದು ಬಂದಿದ್ದು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗೊಂಡಿರುತ್ತದೆ.