ಮುದಗಲ್ಲ :- ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ: ಹಿರಿಯರಿಗೆ ಸನ್ಮಾನ…

ಮುದಗಲ್ಲ ವರದಿ..

ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ: ಹಿರಿಯರಿಗೆ ಸನ್ಮಾನ…

ಮುದಗಲ್ಲ :- ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮುದಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯಲ್ಲಿ ಬರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಗರಿಕರಾದ ಮನವರ್  ಖಾನ್ ,ಎಂ.ಡಿ ರಜಾಕ್ ಹಿರಿಯ ರಾದ ಯಮನಮ್ಮ ಗೌಂಡಿ ಹಾಗೂ ಶ್ರೀ ಹನುಮಂತಪ್ಪ ,ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು,

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಎ.ಪಿ ಎಂ .ಸಿ. ಉಪಾಧ್ಯಕ್ಷ ಎಸ್.ಆರ್.ರಸೂಲ್ ಅವರು
ದೇಶಕ್ಕೆ ಕಾಂಗ್ರೆಸ್‌ ಪಕ್ಷ ಅಪಾರ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ರಾಜೀವಗಾಂಧಿ ಅವರವರೆಗೂ ದೇಶದ ಸಮಗ್ರ ವಿಕಾಸಕ್ಕಾಗಿ ಕಾಲಕ್ಕೆ ತಕ್ಕಂತೆ ಶ್ರಮಿಸಿದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹುತೇಕ ಕಾಂಗ್ರೆಸ್ಸಿಗರು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಆಯಾ ಕಾಲಕ್ಕೆ ತಕ್ಕ ಬೇಡಿಕೆಯಂತೆ ಹೋರಾಟಗಳನ್ನು ಮಾಡಿ ರಾಜಕೀಯ ಮತ್ತು ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಇದು ಕೆಲವೇ ಜನರ ಪಕ್ಷವಲ್ಲ. ಇದೊಂದು ದೇಶದ ಜನರೇ ನಡೆಸುತ್ತಿರುವ ಪಕ್ಷವಾಗಿದೆ.ಎಂದು ಪಕ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ಸಿಗರಿಗೆ ಸನ್ಮಾನ ಮಾಡಿ ಅವರು ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಎಸ್,ಆರ್ ರಸೂಲ್ ಸಾಬ, ಅಜ್ಮೀರ್ ಬೆಳ್ಳಿಕಟ್,ಬಸವರಾಜ ಜಲ್ಲಿ , ರಘವೀರ್ ಚಲುವಾದಿ,
ಖದೀರ್ ಪಾನ್, ಕೃಷ್ಣ ಚಲುವಾದಿ, ಬಸವರಾಜ ಬುಲೆಟ್, ಅರುಣ್ ಕುಮಾರ್, ಕಾಂಗ್ರೆಸ್ ಪಕ್ಷದ ಮುಖಂಡ ಉಪಸ್ಥಿತರಿದ್ದರು..

ವರದಿ;- ಮಂಜುನಾಥ ಕುಂಬಾರ.

Leave a Reply

error: Content is protected !!