ಮುದಗಲ್ಲ :-ಇಂದು ಸಂಜೆ ರಂಗ ಚೇತನಾ ಕಲಾ ತಂಡ ಕೋಠಾ ತಂಡದಿಂದ ‘ರಮಾಭಾಯಿ ಅಂಬೇಡ್ಕರ್ ನಾಟಕ ಪ್ರದರ್ಶನ….

ಮುದಗಲ್ಲ ವರದಿ…

ಇಂದು ಸಂಜೆ ರಂಗ ಚೇತನಾ ಕಲಾ ತಂಡ ಕೋಠಾ ತಂಡದಿಂದ ‘ರಮಾಭಾಯಿ ಅಂಬೇಡ್ಕರ್ ನಾಟಕ ಪ್ರದರ್ಶನ....

ಮುದಗಲ್ಲ : ಇಂದು ಸಂಜೆ 6.30ಕ್ಕೆ
ಪುರಸಭೆ ರಂಗಮಂದಿರದಲ್ಲಿ ಇಂದು ಸಂಜೆ ರಂಗ ಚೇತನಾ ಕಲಾ ತಂಡ ಕೋಠಾ ಲಿಂಗಸೂರು ಪ್ರಸ್ತುತ ಪಡಿಸುವ ರಮಾಭಾಯಿ ಅಂಬೇಡ್ಕರ್ ನಾಟಕ ಪ್ರದರ್ಶನ ಎಂಬ ನಾಟಕ ಪ್ರದರ್ಶನ ವಾಗಲಿದ್ದು, ಎಲ್ಲರಿಗೂ ಪ್ರವೇಶ ಉಚಿತವಿರಲಿದೆ.

ಅನೇಕ ಸವಾಲುಗಳು ,ಕಷ್ಟಗಳ ಮದ್ಯೆ ರಂಗಕಲಾವಿದರೆಲ್ಲಾ ಸೇರಿ ಈ ತಂಡವನ್ನ ಕಟ್ಟಿಕೊಂಡು, ಸತತ ಅಭ್ಯಾಸಿಸಿ ಕಡಿಮೆ ಅವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಈ ನಾಟಕ ರೂಪಿಸಿಕೊಂಡಿದ್ದು ಮಾದರಿ. ಡಾ ಬಿ ಆರ್ ಅಂಬೇಡ್ಕರ್ ಸಂವಿಧಾನ ಶಿಲ್ಪಿಯಾಗಲು, ಈದೇಶದ ಮಹಾನಾಯಕನಾಗಲು ಅವರ ಪತ್ನಿ ಅದೆಷ್ಟು ಕಷ್ಟಪಟ್ಟು ತ್ಯಾಗಮಾಡಿ ಅವರಿಗೆ ಬೆನ್ನೆಲುಬಾಗಿ ನಿಂತರು,ಬಡತನ,ಅನಾರೋಗ್ಯ ,
ಅಸ್ಪೃಶ್ಯತೆ ,ಮಗು ಸತ್ತ ನೋವುಗಳಲ್ಲೇ ಬಾಬಾಸಾಹೇಬರನ್ನ ಅದೇಗೆ ನೈತಿಕವಾಗಿ , ಭಾವನಾತ್ಮಕ ವಾಗಿ ಬೆಂಬಲವಿತ್ತು ಮಹಾ ನಾಯಕಿಯಾದರು ಎಂದು ಈ ನಾಟಕ ತುಂಬಾ ಚಂದ ಈ ನಾಟಕದ ಲ್ಲಿ ರಂಗಚೇತನ ಕಲಾ ತಂಡ ಕೋಠಾದ ಸಹೋದರಿ ಪದ್ಮ ಮತ್ತುವರ ಕಲಾವಿದ ಬಳಗವಾದ ಸಾಯಿಚೇತನಾ ( ಮಗು ),ರತ್ನ ಪ್ರಭ ( ಮಗು ),ಮಲ್ಲಿಕಾ ಹುಬ್ಬಳ್ಳಿ ,
ತೇಜಸ್ ಧಾರವಾಡ ,ವೀರೇಶ್ ಶಶಿಕುಮಾರ್ ಮುದುಗಲ್,
ದತ್ತಾತ್ರೇಯ ರಾಯಚೂರು ವೈಶಾಲಿ, ಅನೇಕ’
ತಂಡವು ನಾಟಕದಲ್ಲಿ ಭಾಗ ವಹಿಸಲ್ಲಿದ್ದಾರೆ, ಹಲವು ಗಣ್ಯರ
ಸಮ್ಮುಖದಲ್ಲಿ ಪ್ರದರ್ಶನಗೊಳ್ಳಲಿದೆ.

ಈಗಾಗಲೇ ಈ ನಾಟಕವನ್ನು
ನೋಡಿದವರು ಅತ್ಯುತ್ತಮ ನಾಟಕಗಳಲ್ಲಿ ಒಂದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರಿಯಾದ ಸಮಯಕ್ಕೆ ಎಲ್ಲರು ಬಂದು ನಾಟಕವನ್ನು
ಕಣ್ಣುಂಬಿಕೊಂಡು, ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು
ತಿಳಿಸುವಂತೆ ರಮಾಭಾಯಿ ಅಂಬೇಡ್ಕರ್ ನಾಟಕ ಪ್ರದರ್ಶನ
ಮನವಿ ಮಾಡಿಕೊಂಡಿದ್ದಾರೆ.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!