ಮುದಗಲ್ಲ ವರದಿ..
ಮುದಗಲ್ಲ :-ನಾಡ ಕಾರ್ಯಾಲಯ ವತಿಯಿಂದ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ…

ಮುದಗಲ್ಲ :- ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಸಮಾನತೆಯ ಹರಿಕಾರರಾದ ಭಾರತ ರತ್ನ ಬಾಬಾಸಾಹೇಬ್ ಡಾ ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ಆಚರಣೆಯನ್ನು ನಾಡ ಕಾರ್ಯಾಲಯ ವತಿಯಿಂದ ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಶನಿವಾರ ಆಚರಿಸಲಾಯಿತು.
ನಾಡ ಕಾರ್ಯಾಲಯ ಉಪ ತಹಸಿಲ್ದಾರ ತುಳಜಾ ರಾಮ್ ಸಿಂಗ್,ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಕ್ಯಾಡಲ್ ಹಚ್ಚುವ ಮೂಲಕ ನಮನ ಸಲ್ಲಿಸಿದರು.
ನಾಡ ಕಛೇರಿಯ ಉಪ ತಹಸಿಲ್ದಾರ ತುಳಜಾ ರಾಮ್ ಸಿಂಗ್,ಮಾತನಾಡಿ ಅಂಬೇಡ್ಕರ್ ಎಂದರೆ ಬರೀ ವ್ಯಕ್ತಿಯಲ್ಲ. ಅವರು ಮಹಾನ್ ಶಕ್ತಿ. ಧ್ಯೇಯ, ತತ್ವವೇ ಅಂಬೇಡ್ಕರ್ ಆಗಿದ್ದಾರೆ. ದೇಶದ ಅಖಂಡತೆಗೆ ಅವರ ಸೇವೆ ಅನನ್ಯವಾದುದು. ಅವರನ್ನು ಕೇವಲ ಶೋಷಿತ ವರ್ಗದ ನಾಯಕರು ಎಂದು ಭಾವಿಸುವಂತಿಲ್ಲ. ಅವರು ಸಮಾಜದ ಎಲ್ಲ ವರ್ಗಗಳ ನಾಯಕರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಡ ಕಾರ್ಯಾಲಯ ಉಪ ತಹಸಿಲ್ದಾರ ತುಳಜಾ ರಾಮ್ ಸಿಂಗ್, ಕಂದಾಯ ವಿಭಾಗದ ಶಂಕ್ರಪ್ಪ ಪಟ್ಟಣಶೆಟ್ಟಿ, ಸಿಬ್ಬಂದಿ ಮುನಿರ್, ಶಿವರಾಜ , ದುರಗಪ್ಪ ಗುಣಸಾಗರ ,ಹಾಗೂ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನೆ, ಪುರಸಭೆಯ ಮಾಜಿ ಉಪಾಧ್ಯಕ್ಷರಾದ ಮೈಬುಸಾಬ,ಕಾಂಗ್ರೆಸ್ ಪಕ್ಷದ ಮುಖಂಡ ರಾದ ಶಾಲo ಟೇಲರ್,ರುದ್ರಪ್ಪ,ಹುಸೇನಿ ಬಸವರಾಜ ಮುದಗಲ್ಲ, ಇತರರು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ