ಮುದಗಲ್ಲ:ನಿಕಟಪೂರ್ವವಾಗಿ ನಿಯೋಜನೆ ಮಾಡಿದ ಸ್ಥಳದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಮಫಲಕ ಅಳವಡಿಸಲು ಸೂಕ್ತ ಅನುಮತಿ ನೀಡಿ ಎಂದು ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಕೆ..

ಮುದಗಲ್ಲ ಪುರಸಭೆ ವ್ಯಾಪ್ತಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಮಫಲಕ ಅಳವಡಿಸಲು ಸೂಕ್ತ
ಅನುಮತಿ ನೀಡಿ ಎಂದು ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು. ಮುದಗಲ್ ಪಟ್ಟಣದ ಪ್ರಮುಖ ವೃತ್ತ/ರಸ್ತೆಯಲ್ಲಿ ಆದಿಕವಿ, ರಾಮಾಯಣ ಮಹಾಕಾವ್ಯದ ರಚನೆಕಾರರಾದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಹೆಸರಿನ ನಾಮಫಲಕವನ್ನು ಅಳವಡಿಸಲು ನಿಕಟಪೂರ್ವವಾಗಿ ತೀರ್ಮಾನಿಸಲಾಗಿದೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ನಾಮಫಲಕ ಸ್ಥಾಪನೆಯು ಸಾರ್ವಜನಿಕರಿಗೆ ಮತ್ತು ಯುವಜನತೆಗೆ ಪ್ರೇರಣೆ ಯಾಗಲಿದೆ. ಆದ್ದರಿಂದ, ಪುರಸಭೆಯ ನಿಯಮಾನುಸಾರ ನಾಮಫಲಕ ಅಳವಡಿಸಲು ಗುರುತಿಸಲಾದ ಸ್ಥಳಕ್ಕೆ ಸೂಕ್ತ ಅನುಮತಿಯನ್ನು ಶೀಘ್ರವಾಗಿ ಮಂಜೂರು ಮಾಡಿ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಬೋಗರ್ ಅವರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಮುದಗಲ್ಲ ಹೋಬಳಿ ಘಟಕ ಅಧ್ಯಕ್ಷರಾದ ಚಂದ್ರಶೇಖರ್ ಕಚಾಪೂರ,ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಚಂದ್ರಶೇಖರ್ ಕಚಾಪೂರ,ಶ್ರೀ ಮಹರ್ಷಿ ವಾಲ್ಮೀಕಿ ಹೋಬಳಿ ಘಟಕದ ಅಧ್ಯಕ್ಷರಾದ ಚಂದ್ರಶೇಖರ್ ಕಚಾಪೂರ,ನಾಗರಾಜ, ಹುನಮಂತ ,ಕನಕಪ್ಪ, ಹನುಮೇಶ ,ಮಹೇಶ ವಾಲ್ಮೀಕಿ, ಸಾಗರ, ಶಿವು,ರಾಮಣ್ಣ ಇತರರು ಉಪಸ್ಥಿತರಿದ್ದರು.
ವರದಿ :-ಮಂಜುನಾಥ ಕುಂಬಾರ