ಮುದಗಲ್ಲ :- ಪುರಸಭೆ ವ್ಯಾಪ್ತಿಯ ವಿಕಲಚೇತನರ ಸಮನ್ವಯ ಸಭೆ…

ಮುದಗಲ್ಲ ವರದಿ..

ಮುದಗಲ್ಲ :- ಪುರಸಭೆ ವ್ಯಾಪ್ತಿಯ ವಿಕಲಚೇತನರ ಸಮನ್ವಯ ಸಭೆ…

ಮುದಗಲ್ಲ :- ವಿಶ್ವ ವಿಶೇಷ ಚೇತನರ ದಿನಾಚರಣೆಯ ಪ್ರಯುಕ್ತ ಮಂಗಳವಾರ ಮುದಗಲ್ಲ ಪುರಸಭೆ ಯಲ್ಲಿ ಅಂಗವಿಕಲರ ಸಮನ್ವಯ ಗ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಸಭೆ ಯನ್ನು ಉದ್ದೇಶಿಸಿ ಮಾತನಾಡಿ, ಅಂಗವಿಕಲ ರ ರಾಜ್ಯಾಧ್ಯಕ್ಷ ಸುರೇಶ್ ಬಂಡಾರಿ ಮಾತನಾಡಿ ಅಂಗವಿಕಲರನ್ನು ಸಮಾನ ದೃಷ್ಟಿಯಿಂದ ನೋಡಬೇಕು. ಕನಿಕರದಿಂದ ನೋಡುವ ಬದಲು ಗೌರವ ಮತ್ತು ಸಮಾನತೆ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಜನ ಪ್ರತಿನಿಧಿಗಳು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅಂಗವಿಕಲರಿಗೆ ಸುಲಭವಾಗಿ ಎಟುಕುವಂತೆ ಕೆಲಸ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಯ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಬೋಗರ್ ಅವರು ಮಾತನಾಡಿ ಸರ್ಕಾರದಿಂದ ಅಂಗವಿಕಲರಿಗೆ ಸ್ವಾವಲಂಬಿಗಳಾಗಿ ಬದುಕಲು ಸಾಕಷ್ಟು ಯೋಜನೆ ಗಳಿವೆ. ಎಲ್ಲರೂ ಅಂತಹ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು, ಅವುಗಳ ಪ್ರಯೋಜನ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುದಗಲ್ ಪುರಸಭೆ ಸಂಘಟನಾಧಿಕಾರಿಗಳಾದ ಚೆನ್ನಮ್ಮ ದಳವಾಯಿ
 ತಾಲೂಕು ಅಧ್ಯಕ್ಷರು ಅಜ್ಮಲ್ ಜಮೀದಾರ ಲಿಂಗಸುಗೂರು  ಸಂಸ್ಥೆಯ ಅಧ್ಯಕ್ಷರಾದ ಹುಸೇನಬಾಷಾ, ಅಸ್ಕಿಹಾಳ ನಾಗರಾಜ್,,ವೀರುಪಾಕ್ಷಯ್ಯ ಹೊಸಮಠ ಹಾಗೂ ನಗರ ಪುನವ೯ಸತಿ ಕಾಯ೯ಕತೆ೯ ರೋಸ್ ಮೇರಿ. ಮಹಾದೇವಿ ಕನ್ನಾಪೂರ ಹಟ್ಟಿ., ಹಸ್ಕಿಯಾಳ ನಾಗರಾಜ್,  ವಿಕಲಚೇತನರು ಹಾಗೂ ಪೋಷಕರು ಭಾಗವಹಿಸಿದ್ದರು,
ಉಪಸ್ಥಿತರಿದ್ದರು

ವರದಿ:- ಮಂಜುನಾಥ ಕುಂಬಾರ..

Leave a Reply

error: Content is protected !!