ಮುದಗಲ್ಲ :- ಸಂಚಾರ ನಿಯಮ ಪಾಲಿಸಲು ಜಾಗೃತಿ…

ಮುದಗಲ್ಲ ವರದಿ..

ಮುದಗಲ್ಲ :- ಸಂಚಾರ ನಿಯಮ ಪಾಲಿಸಲು ಜಾಗೃತಿ…

ಮುದಗಲ್ಲ:- ಎಸ್ ಬಿ ಭಮಸಾಗರ ಪಬ್ಲಿಕ್ ಶಾಲೆಯ
ಮಕ್ಕಳಿಂದ ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ನಡೆಯಿತು ಪ್ರಮುಖ  ರಸ್ತೆಯಲ್ಲಿ ಹೆಲ್ಮಟ್ ಇಲ್ಲದೇ ತೆರಳುತ್ತಿರುವವರನ್ನು ಶಾಲೆ ಮಕ್ಕಳು ಅಡ್ಡಗಟ್ಟಿ ನಿಂತು ಕೊಂಡು ಸಾರ್ವಜನಿಕರಿಗೆ ಹಾಗೂ ಬೈಕ್ ಸವಾರರಿಗೆ ಹೆಲ್ಮಟ್ ಇಲ್ಲದೇ ಚಲಾಯಿಸಬೇಡಿ. ಹೆಲ್ಮಟ್ ಇಲ್ಲದೇ ಅಪಘಾತ ಸಂಭವಿಸಿದರೆ ಸಾವು ಸಂಭವಿಸುತ್ತದೆ. ಆದ್ದರಿಂದ ಹೆಲ್ಮಟ್ ಧರಿಸಿ, ಸಣ್ಣ ಮಕ್ಕಳಿಗೆ ಬೈಕ್ಗಳನ್ನು ಕೊಡಬೇಡಿ, ಲೈಸೆನ್ಸ್
ಹಾಗೂ ಇನ್ಸೂರೆನ್ಸ್ ಇರಲಿ ಎಂದು ಜಾಗೃತಿ ಮೂಡಿಸಿದರು.

ಮನುಷ್ಯನಿಗೆ ಪ್ರಾಣ ಅತ್ಯಂತ ಅಮೂಲ್ಯ. ಒಮ್ಮೆ ಜೀವ ಕಳೆದುಕೊಂಡರೆ ಹೋದ ಜೀವ ಮತ್ತೊಮ್ಮೆ ವಾಪಸು ಬರುವುದಿಲ್ಲ ಎಂದು ಮುದಗಲ್ಲ ಪೋಲಿಸ್ ಠಾಣೆಯ ಪಿಎಸ್ ಐ ವೆಂಕಟೇಶ್ ಮಾಡಗೇರಿ ಹೇಳಿದರು.ಮೋಟಾರು ಕಾಯ್ದೆಯಡಿ ಹಲವು ಸುರಕ್ಷತಾ ಕಾನೂನುಗಳಿವೆ. ಅವುಗಳನ್ನು ಜನರಿಗೆ ತೊಂದರೆ ಕೊಡುವ ಉದ್ದೇಶದಿಂದ ಮಾಡಿಲ್ಲ. ಬದಲಾಗಿ ಸಾರ್ವಜನಿಕರ ಅನುಕೂಲಕ್ಕೆ ಹಾಗೂ ಸುರಕ್ಷತಾ ಸಂಚಾರಕ್ಕಾಗಿ ಕಾನೂನು ಮಾಡಲಾಗಿದೆ ಎಂದರು

ನಮ್ಮ ದೇಶದಲ್ಲಿ ವಾಹನ ಚಲಾಯಿಸುವಾಗ ಜಾಗ್ರತೆ ಇಲ್ಲದ ಕಾರಣ ಅನೇಕ ಅಪಘಾತಗಳು ಆಗುತ್ತವೆ. ಪ್ರತಿ 4 ನಿಮಿಷಕ್ಕೆ ಒಬ್ಬರು, ಅಂದರೆ ವರ್ಷಕ್ಕೆ ಸುಮಾರು 1.5 ಲಕ್ಷ ಜನರು ಇಂತಹ ಅಪಘಾತಗಳಲ್ಲಿ ಸಾಯುತ್ತಾರೆ. ಇದು ತುಂಬಾ ದುಃಖದ ಸಂಗತಿ. ಅಜಾಗರೂಕತೆಯಿಂದ ವಾಹನ ಚಲಾಯಿಸುವವರು ತಮ್ಮ ಪ್ರಾಣವನ್ನು ಮಾತ್ರ ಅಪಾಯಕ್ಕೆ ತಳ್ಳುವುದಿಲ್ಲ, ಬದಲಿಗೆ ಇತರರ ಪ್ರಾಣಕ್ಕೂ ಸಹ ಅಪಾಯ ತರುತ್ತಾರೆ.

ಹೆಲ್ಮೆಟ್ ಧರಿಸದಿರುವುದು ಮತ್ತು ಕೆಲವು ಸಂದರ್ಭಗಳಲ್ಲಿ ಸೀಟ್ ಬೆಲ್ಟ್ ಬಳಸದಿರುವುದು ಮುಂತಾದ ತಪ್ಪುಗಳಿಂದ ಪ್ರತಿದಿನ ಅನೇಕ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇದರೊಂದಿಗೆ ಸಾವಿರಾರು ಕುಟುಂಬಗಳು ರಸ್ತೆಗೆ ಬೀಳುತ್ತಿವೆ. ಆದರೆ, ಈ ಅಪಘಾತಗಳೊಂದಿಗೆ ಯಾವುದೇ ಸಂಬಂಧವಿಲ್ಲದ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಾರೆ.

ಸ್ಥಳಿಯ ಠಾಣೆಯ ಪಿಎಸ್‌ಐ ವೆಂಕಟೇಶ್ ಮಾಡಗೇರಿ, ಸರ್ಕಾರಿ ಆಸ್ಪತ್ರೆಯ ವೈದ್ಯರಾದ ವಿನೋದ್ ಕುಮಾರ್,.ಶಾಲೆಯ ಅಧ್ಯಕ್ಷ ಡಾ.ಎಸ್ ಬಿ ಭಮಸಾಗರ ಸೇರಿದಂತೆ ಶಾಲೆ ಶಿಕ್ಷಕರು ಮಕ್ಕಳು ಇದ್ದರು.

ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!