ಮೈಲಾರಲಿಂಗೇಶ್ವರ ಕಾರ್ಣಿಕ 2026: ‘ಸಂಪಾದಿತಲೇ ಪರಾಕ್’ ಎಂದು ಭವಿಷ್ಯ ನುಡಿದ ಗೊರವಯ್ಯ

ಮೈಲಾರಲಿಂಗೇಶ್ವರ ಕಾರ್ಣಿಕ 2026: ‘ಸಂಪಾದಿತಲೇ ಪರಾಕ್’ ಎಂದು ಭವಿಷ್ಯ ನುಡಿದ ಗೊರವಯ್ಯ

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಡೆಂಕನಮರಡಿಯಲ್ಲಿ ನಡೆದ ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 2026ನೇ ಸಾಲಿನ ಕಾರ್ಣಿಕ ಹೊರಬಿದ್ದಿದೆ. ಪರಂಪರೆಯಂತೆ ನಡೆದ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಅವರು “ಸಂಪಾಯಿತಲೇ ಪರಾಕ್” ಎಂಬ ದೇವವಾಣಿಯನ್ನು ನುಡಿದರು. ಈ ಮಹತ್ವದ ಕ್ಷಣಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಂದ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾದರು.

ಈ ಕಾರ್ಣಿಕ ನುಡಿಯ ಅರ್ಥದಂತೆ, ಪ್ರಸಕ್ತ ವರ್ಷ ರಾಜ್ಯದಲ್ಲಿ ಮಳೆಯ ಪ್ರಮಾಣ ಉತ್ತಮವಾಗಿರಲಿದೆ, ಉತ್ತಮ ಬೆಳೆಗಳು ಹಾಗೂ ಜನಜೀವನ ಸುಗಮವಾಗಿರಲಿದೆ ಎಂಬ ನಂಬಿಕೆ ವ್ಯಕ್ತವಾಗಿದೆ. ಜೊತೆಗೆ ಯಾವುದೇ ದೊಡ್ಡ ಮಟ್ಟದ ಅಶಾಂತಿ ಅಥವಾ ತಲ್ಲಣಗಳು ಉಂಟಾಗುವ ಸಾಧ್ಯತೆ ಕಡಿಮೆ ಎನ್ನುವ ಸಂದೇಶವೂ ಇದರಲ್ಲಿ ಅಡಗಿದೆ ಎಂದು ಭಕ್ತರು ಹೇಳುತ್ತಾರೆ.

ಪ್ರತಿವರ್ಷ ನಡೆಯುವ ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವವನ್ನು ಭಕ್ತರು ಭವಿಷ್ಯದ ಸೂಚಕವಾಗಿ ಪರಿಗಣಿಸುತ್ತಾರೆ. ಈ ಬಾರಿ ಹೊರಬಿದ್ದ ಕಾರ್ಣಿಕ ನುಡಿ ಜನರಲ್ಲಿ ಆಶಾಭಾವನೆ ಮೂಡಿಸಿದ್ದು, ಕೃಷಿಕರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.

 

ಈ ವರ್ಷದ ಜಾತ್ರಾ ಮಹೋತ್ಸವ ಜನವರಿ 25ರಿಂದ ಫೆಬ್ರವರಿ 5ರವರೆಗೆ ನಡೆದಿದ್ದು,ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಜಾತ್ರೆಯ ಪ್ರಮುಖ ಆಕರ್ಷಣೆಯಾದ ಕಾರ್ಣಿಕೋತ್ಸವ ಬುಧವಾರ ಸಂಜೆ ನಡೆಯಿತು. ಈ ಸಂದರ್ಭದಲ್ಲಿ ಗೊರವಯ್ಯ ರಾಮಜ್ಜನವರು ಪರಂಪರೆಯಂತೆ ಭವಿಷ್ಯವಾಣಿ ನುಡಿದರು.

ಮೈಲಾರ ಜಾತ್ರಾ ಮಹೋತ್ಸವವು ಶತಮಾನಗಳ ಇತಿಹಾಸ ಹೊಂದಿದ್ದು, ಧಾರ್ಮಿಕ ಆಚರಣೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಹೆಸರಾಗಿದೆ. ಪ್ರತಿವರ್ಷದಂತೆ ಈ ಬಾರಿ ಕೂಡ ಜಾತ್ರೆ ಸಂಭ್ರಮದಿಂದ ನಡೆಯಿತು.

 

 

Leave a Reply

error: Content is protected !!