ಶಿರಹಟ್ಟಿ : ಸ್ಥಳೀಯ ಕುಂದು ಕೊರತೆ ಹೊರಾಟ ನಿವಾರಣೆ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಶಿರಹಟ್ಟಿ ಪಟ್ಟಣದಲ್ಲಿ ಶಿರಹಟ್ಟಿ ತಾಲೂಕ ಹೆಸ್ಕಾಂ ಉಪ ವಿಭಾಗ ಕಚೇರಿ ಪ್ರಾರಂಭಿಸಲು ಸನ್ಮಾನ್ಯ ಶ್ರೀ ಅಜ್ಜಂಪೀರ ಖಾದ್ರಿ ಅಧ್ಯಕ್ಷರು ಹೆಸ್ಕಾಂ ಕೇಂದ್ರ ಕಚೇರಿ ಹುಬ್ಬಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು ಶಿರಹಟ್ಟಿ ಪಟ್ಟಣದಲ್ಲಿ ಆದಷ್ಟು ಬೇಗನೆ ಹೆಸ್ಕಾಂ ಉಪ ವಿಭಾಗ ಕಚೇರಿ ಪ್ರಾರಂಭಿಸಲು ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು ಇದಕ್ಕೆ ಹೆಸ್ಕಾಂ ಕೇಂದ್ರ ಕಚೇರಿ ಅಧ್ಯಕ್ಷರು ಶ್ರೀ ಅಜ್ಜಂಪೀರ್ ಖಾದ್ರಿ ಸಾಹೇಬರು ಸಕಾರಾತ್ಮಕವಾಗಿ ಸ್ಪಂದಿಸಿ ಆದಷ್ಟು ಬೇಗನೆ ಶಿರಹಟ್ಟಿ ಪಟ್ಟಣದಲ್ಲಿ ಹೆಸ್ಕಾಂ ಉಪ ವಿಭಾಗ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಅಕ್ಬರ್ ಸಾಬ್ ಯಾದಗಿರಿ, ಎನ್ ಆರ್ ಕುಲಕರ್ಣಿ , ಅಪ್ಪಣ್ಣ ಕುಬೇರ್ ಮುನ್ನಾ ಡಲಾಯತ, ಜಗನ್ನಾಥ್ ಕುಲಕರ್ಣಿ , ಎಚ್ ಆರ್ ಧನ್ನೂರ್, ಶರಣು ಸುರಣಗಿ, ಪವನ್ ಹೇರಲಗಿ, ಶ್ರೀನಿವಾಸ್ ಬಾರ್ಬರ್, ಶ್ರೀನಿವಾಸ್ ಕಪಟ್ ಕರ್, ಗಪಾರ ಕುದುರಿ ಹಾಗೂ ಎಲ್ಲ ವಿದ್ಯುತ್ ಗುತ್ತಿಗೆದಾರರು ಹಾಜರಿದ್ದರು.
ವರದಿ: ವೀರೇಶ್ ಗುಗ್ಗರಿ