ಕುಕನೂರ : ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ, ನಿರ್ಮಾಣವಾಗಿರುವ ಸರ್ಕಾರವೇ ಪ್ರಜಾ ಸರ್ಕಾರವಾಗಿದೆ. ಪ್ರಜಾಸತ್ತಾತ್ಮಕ ಆಡಳಿತದ ಮೂಲಕ ಗ್ರಾಮೀಣಾಭಿವೃದ್ಧಿಯ ಕನಸನ್ನು ನನಸು ಮಾಡೋಡಣ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗ ಸಂತೋಷ ಬಿರಾದರ್ ಪಾಟೀಲ್
ಪಟ್ಟಣದ ತಾಲೂಕ ಪಂಚಾಯತ ಆವರಣದಲ್ಲಿ ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು ನಮ್ಮ ದೇಶ ೧೯೪೭ ರಂದು ಸ್ವತಂತ್ರಗೊAಡಿತು, ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ದೇಶದ ಅಖಂಡತೆಗೆ ಒಪ್ಪುವಂತೆ ಸಂವಿಧಾನವು ರೂಪಗೊಂಡು. ೧೯೪೯ ಜನೇವರಿ ೨೬ ರಂದು ಜಾರಿಗೊಂಡಿತು. ಪ್ರಜಾಪ್ರಭುತ್ವದ ತಳಹದಿಯ ಮೇಲೆ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸೃಷ್ಠಿಯಾದವು, ಕಾರ್ಯಾಂಗ ವ್ಯವಸ್ಥೆಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯೂ ಸಹ ಕಾರ್ಯ ನಿರ್ವಹಿಸುತ್ತಿದ್ದು, ಹಲವಾರು ಯೋಜನೆಗಳ ಮೂಲಕ ಗ್ರಾಮೀಣಾಭಿವೃದ್ಧಿ ನನಸಾಗುತ್ತಿದೆ. ಮುಖ್ಯವಾಗಿ ಮಹಾತ್ಮಗಾಂಧಿ ನರೇಗಾ ಯೋಜನೆ, ಸ್ವಚ್ಚ ಭಾರತ ಮಿಷನ್ ಯೋಜನೆ, ಸಂಜೀವಿನಿ, ಗ್ರಾಮೀಣ ವಸತಿ ಯೋಜನೆಗಳು ಗ್ರಾಮ ಆಡಳಿತಕ್ಕೆ ಉತ್ತೇಜನ ಆದ್ದರಿಂದ ಪ್ರಜಾಸತ್ತಾತ್ಮಕ ಆಡಳಿತದ ಮೂಲಕ ಗ್ರಾಮೀಣಾಭಿವೃದ್ಧಿಯ ಕನಸನ್ನು ನನಸು ಮಾಡೋಡಣ ಎಂದರು.
ಈ ಸಂದರ್ಭದಲ್ಲಿ ಆನಂದ ಗರೂರ, ತಾಪಂ ಮ್ಯಾನೇಜರ್ ಗಿರಿಧರ್ ಜ್ಯೋಷಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಚೆನ್ನಬಸಪ್ಪ ಸಣ್ಣಕರಡದ್, ನರೇಗಾ ಸಂಯೋಜಕರಾದ ಲಕ್ಷ್ಮಣ ಕೆರಳ್ಳಿ, ತಾಂತ್ರಿಕ ಸಹಾಯಕ ಹುಸೇನ್ ಪಾಷಾ, ಹಾಗೂ ಇತರರಿದ್ದರು.