ಮುದಗಲ್ಲ ವರದಿ…
ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ…
ಮುದುಗಲ:- ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುದಗಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವಶಂಕರ ಗೌಡರು ಮಾತನಾಡಿದ ರು ಮಹರ್ಷಿ ವಾಲ್ಮೀಕಿ ಅವರು ರಚಿಸಿದ ಶ್ರೀರಾಮಾಯಣವು
ಸಾರ್ವಕಾಲಿಕವಾದುದು. ಮಹರ್ಷಿ ವಾಲ್ಮೀಕಿ ಅವರು ರಚಿಸಿದ
ರಾಮಾಯಣವನ್ನು ನಮ್ಮ ದೇಶ ಮಾತ್ರವಲ್ಲ ಜಗತ್ತಿನ ಅನೇಕ
ರಾಷ್ಟ್ರಗಳು ಒಪ್ಪಿವೆ. ಈ ಮಹಾಕಾವ್ಯ ಜಗತ್ತಿನಲ್ಲಿ ಇಂದಿಗೂ ಮಾನವೀಯತೆ, ಧರ್ಮ ಸಂಸ್ಕಾರ ನೆಲೆಸಲು ಕಾರಣವಾಗಿದೆ ಸ್ತ್ರೀ-ಪುರುಷ ಸರಿಸಮಾನತೆ ಯೊಂದಿಗೆ ಕಲ್ಯಾಣ ರಾಜ್ಯದ ಆಶಯ ಹೊಂದಿದ್ದ ವಾಲ್ಮೀಕಿಯು ರಾಮಾಯಣದಲ್ಲಿ ವಿವಿಧ ಪಾತ್ರಗಳ
ಮೂಲಕ ಬದುಕಿನ ಪ್ರತಿ. ಹಂತದಲ್ಲೂ ಅನುಸರಿಸಬೇಕಾದ
ನೀತಿಯನ್ನು ಬೋಧಿಸಿದ್ದಾರೆ ಎಂದು
ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಜಲ್ಲಿ ಮುದಗಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವಶಂಕರ ಗೌಡ, ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ತಮ್ಮಣ್ಣ ಗುತ್ತೇದಾರ, ಪರಿಶಿಷ್ಟ ಜಾತಿ Sc Cell ಮುದುಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣ ಛಲವಾದಿ , ಪದವೀಧರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಹಮ್ಮದ್ ಕೋರಿ, ಸಹ ಕಾರ್ಯದರ್ಶಿ ಶ್ರೀ ರಘುವೀರ್ ಮೆಗಳಮನಿ, ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಬನ್ನಿ ಗೋಳಕರ್, ಕೆಡಿಪಿ ಸದಸ್ಯರಾದ ಪರಮೇಶ್ , ಕನ್ನಾಪುರಹಟ್ಟಿ, ಪುರಸಭೆ ಸದಸ್ಯರಾದ ಹನುಮಂತ ವಾಲ್ಮೀಕಿ, ಪ್ರಚಾರ ಸಮಿತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರುಣ್ ಕುಮಾರ್ ಯರದಿಹಾಳ, ಕಾಂಗ್ರೆಸ್ ಹಿರಿಯ ಮುಖಂಡರಾದ ಮೈಬುಸಾಬ್ ಬಾರಿಗಿಡ, ಶಾಲಂ ಟೈಲರ್, ಚಾಂದ್ ಜಮಾದಾರ್, ಪರಶುರಾಮ್ ವಕೀಲರ, ದೇವೇಂದ್ರ ವಕೀಲರ, ಹಿರಿಯ ಕಾಂಗ್ರೆಸ್ ಮುಖಂಡರಾದ ಸೈಯದ್ ಸಾಬ್ ಹಳೆಪೇಟೆ, ಗ್ಯಾನಪ್ಪ ಮೇಗಳಪೇಟೆ, ಮಾಂತೇಶ್ ಬೋವಿ, ಹುಸೇನ್ ಬಾಷಾ, ಚನ್ನರಡ್ಡಿ ಮುಂತಾದವರು ಇದ್ದಾರೆ.
ವರದಿ:- ಮಂಜುನಾಥ ಕುಂಬಾರ..