ಕಾಶ್ಮೀರ ಕಣಿವೆಯ ಪೈಶಾಚಿಕ ಕೃತ್ಯ ಖಂಡನೀಯ: ತೆಹ್ರಿಕ-ಇ-ಟಿಪ್ಪು ಸುಲ್ತಾನ್ ಸಂಘಟನೆ ಮೇಣದ ಬತ್ತಿಯ ಮೆರವಣಿಗೆ..
ಮುದಗಲ್ಲ ವರದಿ..
ಕಾಶ್ಮೀರ ಕಣಿವೆಯ ಪೈಶಾಚಿಕ ಕೃತ್ಯ ಖಂಡನೀಯ: ತೆಹ್ರಿಕ-ಇ-ಟಿಪ್ಪು ಸುಲ್ತಾನ್ ಸಂಘಟನೆ ಮೇಣದ ಬತ್ತಿಯ ಮೆರವಣಿಗೆ..
ಕಾಶ್ಮೀರ ಆಕ್ರಮಣ ಖಂಡನೀಯ :- ಕೇಂದ್ರ ಸರ್ಕಾರದ ಭದ್ರತಾ ವೈಪಲ್ಯ ಕಾರಣ :ದಾಳಿಯಲ್ಲಿ ಹುತಾತ್ಮರಾದ ಭಾರತೀಯರಿಗೆ ಮೊಂಬತ್ತಿ ಉರಿಸಿ ಶ್ರದ್ಧಾಂಜಲಿ…
ಮುದಗಲ್ಲ :- ಪೋಲಿಸ್ ಠಾಣೆಯಲ್ಲಿ ಯ ಅಂಬೇಡ್ಕರ್ ವೃತ್ತದ ಮುಂದೆ ದಾಳಿಯಲ್ಲಿ ಹುತಾತ್ಮರಾದ ಭಾರತೀಯರಿಗೆ ಮೊಂಬತ್ತಿ ಉರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಎಂ,ಡಿ ,ರಫಿ ಖಾಜಿ ಅವರು ಕಾಶ್ಮೀರದಲ್ಲಿ ಮಿನಿ ಸ್ವಿಜರ್ಲೆಂಡ್ ಎಂದೇ ಗುರುತಿಸಿಕೊಂಡಿರುವ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ದೇಶ ವಿದೇಶಗಳಿಂದ ವಿವಿಧ ಜಾತಿ ಮತಗಳ ಜನರು ಬಂದು ಪ್ರಕೃತಿ ಸೌಂದರ್ಯವನ್ನು ಸವಿದು ಖುಷಿ ಖುಷಿಯಾಗಿ ಹೋಗುತ್ತಾರೆ. ಅಂತಹ ಯಾತ್ರಿಕರನ್ನು ಕೊಲ್ಲುವ, ರಾಜ್ಯದ ಶಾಂತಿಯನ್ನು ಕದಡುವ ಮತ್ತು ಜನರನ್ನು ಜಾತಿ ಧರ್ಮದ ಹೆಸರಿನಲ್ಲಿ ಕಚ್ಚಾಡಿಸುವ ಹೀನ ಮನಸ್ಥಿತಿ ಈ ದಾಳಿಯ ಹಿಂದೆ ಇದೆ.
28 ಅಮಾಯಕ ಪ್ರವಾಸಿಗರನ್ನು ಕ್ರೂರವಾಗಿ ಹತ್ಯೆ ಮಾಡಿರುವುದು ಅಮಾನವೀಯ ಕೃತ್ಯವಾಗಿದ್ದು, ಇದನ್ನು ಯಾವುದೇ ಧರ್ಮಕ್ಕೆ ಜೋಡಿಸಲು ಸಾಧ್ಯವಿಲ್ಲ
ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಎಲ್ಲಾ ನಾಗರಿಕರಲ್ಲಿ ಪ್ರತಿಯೊಂದು ಸಂದರ್ಭದಲ್ಲೂ ಶಾಂತಿ, ಸಹೋದರತ್ವ,ಭ್ರಾತೃತ್ವ ಮತ್ತು ಸಹಿಷ್ಣುತೆಯನ್ನು ಕಾಪಾಡಿಕೊಳ್ಳಲು ಮನವಿ ಮಾಡುತ್ತದೆ. ಇಂತಹ ಘಟನೆಗಳ ಉದ್ದೇಶ ಭಯ, ದ್ವೇಷ ಮತ್ತು ಕೋಮುವಾದವನ್ನು ಉತ್ತೇಜಿಸುವುದು ಮಾತ್ರ, ಇದನ್ನು ನಿಲ್ಲಿಸಲು ನಾವು ನೀವೆಲ್ಲರೂ ಒಂದಾಗಿ ಪ್ರಯತ್ನಿಸೋಣ
ಇಂತಹ ಘಟನೆಗಳ ಉದ್ದೇಶ ಭಯ, ದ್ವೇಷ ಮತ್ತು ಕೋಮುವಾದವನ್ನು ಉತ್ತೇಜಿಸುವುದು ಮಾತ್ರ,
ಈ ಘಟನೆಗೆ ಕೇಂದ್ರ ಸರಕಾರದ ಭದ್ರತಾ ವೈಫಲ್ಯವೇ ಕಾರಣ
ಘಟನೆಯಲ್ಲಿ 26 ಮಂದಿ ಸಾವನ್ನಪ್ಪಿರುವುದು ಮನಸ್ಸಿಗೆ ಆಘಾತ ನೀಡಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬದವರಿಗೆ ನನ್ನ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಹಾರೈಸೋಣ ಎಂದು ,
ಕೇಂದ್ರ ಸರಕಾರದ ಭದ್ರತಾ ವೈಫಲ್ಯವೇ ಕಾರಣ ಇದು ರಾಜಕೀಯ, ಮತೀಯವಾಗಿ ಮಾತನಾಡುವ ಸಂದರ್ಭ ಅಲ್ಲವೇ ಅಲ್ಲ. ಆಗಬಾರದ ಘಟನೆ ನಡೆದಿದೆ. ಇದನ್ನು ದೇಶವೇ ಸೇರಿ ಖಂಡಿಸಬೇಕು. ಕಾಶ್ಮೀರದ ಜನ ಅವರ ಹೊಟ್ಟೆಗೆ ಹೊಡೆದಂತಾಗಿದೆ. ಸುಂದರ ಪ್ರದೇಶ ನೋಡಲು ಹೋದಾಗ ಅಲ್ಲಿಯಜನ ನಮ್ಮನ್ನು ರಕ್ಷಿಸಬೇಕು. ಆ ಜವಾಬ್ದಾರಿ ಅವರು ನೋಡಿಕೊಳ್ಳಬೇಕು. ಅಖಂಡ ಭಾರತವನ್ನು ಉಳಿಸಿ ಬೆಳೆಸುವಜವಾಬ್ದಾರಿ ಈ ದೇಶದ ಜನರಿಗೆ ಇದೆ ಎಂದು ಹೇಳಿದರು.
ಕಾಶ್ಮೀರದಂತ ಪ್ರದೇಶದಲ್ಲಿ ಸೆಕ್ಯೂರಿಟಿಯೂ ಉತ್ತಮ ರೀತಿಯಲ್ಲಿ ಇರಬೇಕಾಗಿದೆ. ಐದಾರು ಜನ ಉಗ್ರಗಾಮಿಗಳು ಬಂದು ಗುಂಡು ಹೊಡೆಯುತ್ತಾರೆಂದರೆ ಅಲ್ಲಿಯ ಭದ್ರತೆಯನ್ನು ಏನೆಂದು ಹೇಳಬೇಕು.ಅಲ್ಲಿ ಆರ್ಮಿ, ಪೋಲೀಸ್ ಪಡೆ ಇರುತ್ತಿದ್ದರೆ ಉಗ್ರರನ್ನೆ ಹಿಮ್ಮೆಟ್ಟಿಸಬಹುದಿತ್ತು. 4-5 ಸಾವಿರ ಸೇರುವಲ್ಲಿ ಯಾಕೆ ಭದ್ರತೆನೀಡಿಲ್ಲ ಎಂದು ನಾವು ಕೇಂದ್ರ ಸರಕಾರವನ್ನು ಕೇಳಬೇಕಾಗಿದೆ. ಅಲ್ಲಿಭದ್ರತೆ ಇಲ್ಲ ಎಂದು ತಿಳಿದೇ ಉಗ್ರಗಾಮಿಗಳು ಮನ ಬಂದಂತಿದೆ. ಜಮ್ಮುಕಾಶ್ಮೀರದ ಪೋಲೀಸ್ ಇರುವುದೆ ಕೇಂದ್ರ ಸರಕಾರದ ಕೈಯಲ್ಲಿ,ಹೀಗಿರುವಾಗ ಕೇಂದ್ರ ಯಾಕೆ ಭದ್ರತೆ ನೀಡಿಲ್ಲ ಎಂದು ಹೇಳಿದರು
ಈ ಸಂದರ್ಭದಲ್ಲಿ :- ತೆಹ್ರಿಕ-ಇ-ಟಿಪ್ಪು ಸುಲ್ತಾನ್ ಉಪಾಧ್ಯಕ್ಷ ರಾದ ಖಾಸಿಂ ಬುಡಾ, ಕಾಯ೯ಕಶೀ೯ ಮಕುದಮ್ಮ ಬೆಳ್ಳಿಕಟ್, ತಾಲೂಕು ಅಧ್ಯಕ್ಷ ಮುಹಮ್ಮದ್ ರಸೂಲ್ ಜಂಗ್ಲಿ, ಸಮೀರ್,ಎಂ,ಡಿ ,ರಫಿ ಖಾಜಿ, ಪಾಶ ಕಡ್ಡಿಪುಡಿ, ರಹೀಮ್ ಶಾ , ಅಲ್ತಾಪ್ , ಪಸ್ಥಿತರಿದ್ದರು
ವರದಿ:- ಮಂಜುನಾಥ ಕುಂಬಾರ