ಕರ್ನಾಟಕ ದಲಿತ ಸಂಘರ್ಷ ಸಮಿತಿ, (ಪ್ರೋ!! ಬಿ ಕೃಷ್ಣಪ್ಪ ) ಸ್ಥಾಪಿತ ಸಂಘಟನೆ ವತಿಯಿಂದ ಡಾ!! ಬಾಬ ಜಗಜೀವನರಾಮ್ ಡಾ!! ಅಂಬೇಡ್ಕರ್ ಅವರ ಜಯಂತ್ಯೋತ್ಸವ ಸ್ವಾಭಿಮಾನ ಸಮಾರಂಭ..
ಮುದಗಲ್ಲ ವರದಿ..
28 ರಂದು ಡಾ!! ಬಾಬ ಜಗಜೀವನರಾಮ್ ಹಾಗೂ ಡಾ!! ಅಂಬೇಡ್ಕರ್ ಅವರ ಜಯಂತ್ಯೋತ್ಸವ ಸ್ವಾಭಿಮಾನ ಸಮಾರಂಭ….
ಮುದಗಲ್ಲ :- ಡಾ!! ಬಾಬು ಜಗಜೀವನರಾಮ್,ಹಾಗೂ
ಡಾ!! ಬಿ.ಆರ್ ಅಂಬೇಡ್ಕರ್ ಅವರ ಜಯಂತ್ಯೋತ್ಸವ ದ
ಸ್ವಾಭಿಮಾನ ಕಾರ್ಯಕ್ರಮ ..
ಮುದಗಲ್ : ಇಲ್ಲಿನ ಪುರಸಭೆಯ ರಂಗಮಂದಿರದಲ್ಲಿ ಏಪ್ರಿಲ್ 28 ರಂದು ಡಾ. ಬಾಬು ಜಗಜೀವನ್ ರಾಮ್ 118ನೇ ಜಯಂತಿ ಹಾಗೂ ಡಾ. ಬಿ. ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವದ ಸ್ವಾಭಿಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, (ಪ್ರೊಫೆಸರ್ ಬಿ ಕೃಷ್ಣಪ್ಪ ) ಸ್ಥಾಪಿತ ಸಂಘಟನೆ ವತಿಯಿಂದ 28 ರಂದು ಡಾ!! ಬಾಬ ಜಗಜೀವನರಾಮ್ ಹಾಗೂ ಡಾ!! ಅಂಬೇಡ್ಕರ್ ಅವರ ಜಯಂತ್ಯೋತ್ಸವ ವನ್ನು ಸ್ವಾಭಿಮಾನ ಸಮಾರಂಭದ ಅಧ್ಯಕ್ಷ ರಾದ ಆನಂದ ಪೆಂಟರ್ ಅವರು ಗುರುವಾರ ತಿಳಿಸಿದರು.
ಪಟ್ಟಣದ ಪತ್ರಿಕೆ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಾರಂಭದ ಬಗ್ಗೆ ಮಾಹಿತಿ ನೀಡಿದರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾವ್ ಅವರ ಭಾವಚಿತ್ರ ಮೆರವಣಿಗೆ ಉದ್ಘಾಟನೆಯನ್ನು ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ ನೆರವೇರಿಸುವರು.
ಜಯಂತೋತ್ಸವದ ಮೆರವಣಿಗೆ ವೆಂಕಟರಾಯನ ಪೇಟೆ ಆಂಜನೇಯ ದೇವಸ್ಥಾನದಿಂದ ಪ್ರಾರಂಭಗೊಂಡು, ಮಹನೀಯರ ಭಾವಚಿತ್ರದೊಂದಿಗೆ, ಕಳಸ ಹೊತ್ತ ಮಹಿಳೆಯರು, ವಿವಿಧ ವಾದ್ಯ ಮೇಳಗಳ ಸಮೇತ ವಿವಿಧ ಮಾರುಕಟ್ಟೆ ಹಾಗೂ ವಿವಿಧ ಬೀದಿಗಳಲ್ಲಿ ಹಾಯ್ದು ರಂಗಮಂದಿರಕ್ಕೆ ಮೆರವಣಿಗೆ ತಲುಪುವದು. ಸಾಯಂಕಾಲ ರಂಗಮಂದಿರದಲ್ಲಿ ಆಯೋಜಿಸಲಾದ ಸ್ವಾಭಿಮಾನ ಸಮಾರಂಭದ ಕಾರ್ಯಕ್ರಮದ ಉದ್ಘಾಟನೆ ವಿಧಾನ ಪರಿಷತ್ ಸದಸ್ಯ ಹಾಗೂ ಕಾರ್ಯಧ್ಯಕ್ಷ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರು ಎ. ವಸಂತ ಕುಮಾರ ವಹಿಸಲಿದ್ದಾರೆ. ಕಾಯ೯ಕ್ರಮದ ಅಧ್ಯಕ್ಷತೆ ಶ್ರೀ ಪಾಮಯ್ಯ ಮುರಾರಿ , ಹಾಗೂ ಮುಖ್ಯ ಅತಿಥಿಗಳಾಗಿ ಲಿಂಗಸೂರು ಶಾಸಕರಾದ ಮಾನಪ್ಪ ಡಿ. ವಜ್ಜಲ್ , ದೊಡ್ಡನಗೌಡ ಎಚ್ ಪಾಟೀಲ್, ಅಮರೇಗೌಡ ಪಾಟೀಲ್ ಬಯ್ಯಾಪೂರ , ಡಿ.ಎಸ್ ಹೂಲಗೇರಿ ಮಾಜಿ ಶಾಸಕರು, ಮಹಾದೇವಮ್ಮ ಪುರಸಭೆ ಅಧ್ಯಕ್ಷರು, ಹಾಗೂ ವಿಶೇಷ ಉಪನ್ಯಾಸ ಕರಾಗಿ ಪ್ರೋ , ಸಿ. ಕೆ ಮಹೇಶ ಚಿತ್ರದುರ್ಗ, ಹಾಗೂ
ಕಾಯ೯ಕ್ರಮ ನಿರೂಪಣೆ ರಾಘವೇಂದ್ರ ಎನ್ ಕುದರಿ ,
ಅತಿಥಿಗಳಾಗಿ ಎಚ್ ಮುರಾರಿ ,ಬಾಲಸ್ವಾಮಿ ಕೊಡ್ಲಿ ,ಅಂಬಣ್ಣ ಅರೋಲಿ, ಡಿ.ಎಚ್ ಕಟ್ಟಿಮನಿ, ಸಂಗಣ್ಣ ಹಿರೇಮನಿ,ಹನುಮಂತ , ವೆಂಕಟಾಪೂರ ,ಪರಶುರಾಮ ಕಟ್ಟಿಮನಿ, ಷಣ್ಮುಖಪ್ಪ ಚಲುವಾದಿ, ಸುರೇಶ್ ಬಂಡಾರಿ, ರುದ್ರಪ್ಪ, ಬ್ಯಾಗಿ, ಚನ್ನವೀರಪ್ಪ ಬಾಲಗಾವಿ, ಅವರು ಸ್ವಾಭಿಮಾನ ಸಮಾರಂಭದಲ್ಲಿ ಗಣ್ಯರು ಭಾಗವಹಿಸಲ್ಲಿದ್ದಾರೆ ಎಂದು ಕಾಯ೯ಕ್ರಮದ ಬಗ್ಗೆ ಮಾಹಿತಿ ನೀಡಿದರು
ಹೀಗಾಗಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮೀಣ ಭಾಗದ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿ ಮಾಡಿಕೊಂಡರು.
ಈ ವೇಳೆ ಪುರಸಭೆ ಸದಸ್ಯ ದುರಗಪ್ಪ ಕಟ್ಟಿಮನಿ, ದಲಿತ ಸಂಘರ್ಷ ಸಮಿತಿ ಯ ತಾಲೂಕು ಸಂಚಾಲಕ ಶರಣಪ್ಪ ಕಟ್ಟಿಮನಿ, ತಾ.ಪಂ.ಕೆ.ಡಿ.ಪಿ ಸದಸ್ಯ ರಾಘವೇಂದ್ರ ಎನ್ ಕುದುರಿ, ಸಂಗಪ್ಪ ಹಿರೇಮನಿ,
ವೆಂಕಟೇಶ ಹಿರೇಮನಿ, ದಲಿತ ಸಂಘರ್ಷ ಸಮಿತಿ ಯ ಸಂಚಾಲಕ ಬಸವರಾಜ ಬಂಕದ ಮನಿ, ರವಿ ಕಟ್ಟಿಮನಿ, ಮಲ್ಲೇಶ ದಾಂಡೇಲಿ , ಸಂತೋಷ ಕಟ್ಟಿಮನಿ, ಮೋಹನ್ ಬಂಡಾರಿ, ಹನುಮಂತ ಬಡಿಗೇರ್ ,ಪರಶುರಾಮ, ಸೇರಿದಂತೆ ಇತರರು ಉಪಸ್ಥಿತರಿದ್ದರು
ವರದಿ:- ಮಂಜುನಾಥ ಕುಂಬಾರ