ಮುದುಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಟಿಪ್ಪು ಸುಲ್ತಾನ್ ಅವರ 276 ನೇ ಜಯಂತಿ ಆಚರಣೆ..

ಮುದಗಲ್ಲ :-ಸ್ಥಳೀಯ ಕಾಂಗ್ರೆಸ್ ಕಛೇರಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಿದರು
ಟಿಪ್ಪು ಸುಲ್ತಾನ್ ಅವರ ಭಾವಚಿತ್ರ ಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರಿಂದ ಪೂಜೆ ಹಾಗೂ ಪುಷ್ಪ ನವನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಜ್ಮೀರ್ ಬೆಳ್ಳಿ ಕಟ್ , ಟಿಪ್ಪು ಸುಲ್ತಾನ್ ಕೇವಲ ಒಂದು ಧರ್ಮಕ್ಕೆ ಸೀಮಿತರಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬ್ರಿಟಿಷರನ್ನು ನಡುಗಿಸಿದ್ದರು. ಅವರ ವಿಚಾರಗಳನ್ನು ಸಮಾಜದಲ್ಲಿ ಪ್ರಚಾರಪಡಿಸಬೇಕಿದೆ ಎಂದು ಹೇಳಿದರು.
ಇನ್ನೋರ್ವ ಕಾಂಗ್ರೆಸ್ಮುಖಂಡರಾದ SR ರಸೂಲ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಟಿಪ್ಪು ಸುಲ್ತಾನ್ ಜಾತ್ಯತೀತ ವ್ಯಕ್ತಿ, ಸ್ವಾತಂತ್ರ್ಯಕ್ಕೆ ಹೋರಾಡಿ ಮೈಸೂರಿನ ಹುಲಿ ಎಂದು ಖ್ಯಾತಿ ಪಡೆದಿದ್ದಾರೆ. ಅವರನ್ನು ಒಂದು ಧರ್ಮದ ಆಧಾರದ ಮೇಲೆ ನೋಡಿ ತಾರತಮ್ಯ ಮಾಡಬಾರದು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ವ್ಯಕ್ತಿತ್ವ, ಅವರ ತ್ಯಾಗ ಬಲಿದಾನ ವನ್ನು ಸ್ಮರಿಸಬೇಕಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಜ್ಮೀರ್ ಬೆಳ್ಳಿ ಕಟ್ , SR ರಸೂಲ್ ಬಸವರಾಜ್ ಜಿಲ್ಲೆ, ರಘುವೀರ್ , ಕೃಷ್ಣ ಛಲವಾದಿ, ಮೊಹಮ್ಮದ್ ಕೋರಿ,ನ್ಯಾಮತ ಖಾದ್ರಿ, ಬಂದೇನವಾಜ್ ಬಡಿಗೇರ್ ,ಪರಮೇಶ ಘೋರ. ರಾಘವೇಂದ್ರ ಕುದುರಿ, ಸಂಗಪ್ಪ ಹಿರೇಮನಿ ಉಮೇಶ್ ನಾಯಕ ಆಸಿಹಾಳ ತಾಂಡ, ಮಾಂತೇಶ್ ಭೋವಿ ಬಸವರಾಜ್ ಹಿರೇಮನಿ.. ಗ್ಯಾನಪ್ಪ. ಹೊಳ್ಯಾಚಿ, ಮಂಜುನಾಥ್ ಬನ್ನಿಗೋಳಕರ್ , ಶಾಲo ಟೇಲರ್, ನಂದಪ್ಪ ಕತ್ತಿ, ಹಾಜಿ ಮಲಂಗ ಬಾಬಾ ಶಿಕ್ಷಕರ, ಸಂಗಮೇಶ ಹಸನ್ ಕವ್ವ ಗುಡ್ನೆಸಾಬ್ ಹಳೇಪೇಟೆ. ಬಾಬು, ಶಿವನಾಗಪ್ಪ ಬಡಕುರಿ ಹುಸೇನ್ ಭಾಷ್ (ಡರಿ ) ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ