ಮುದಗಲ್ಲ ವರದಿ..
ಮುದಗಲ್ಲ :- ಹಿಂದೂ ಮುಸ್ಲಿಂ ಭಾವೈಕ್ಯತೆ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ :- ಅರುಣಾಂಗ್ಷು ಗಿರಿ ..
ಮುದಗಲ್ ಜೂ 19- ಹಿಂದೂ ಮುಸ್ಲಿಂ ಭಾವೈಕ್ಯತೆ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು
ಸಹಕಾರ ನೀಡಬೇಕು ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಹೇಳಿದರು
ಮೊಹರಂ ಹಬ್ಬದ ನಿಮಿತ್ಯ ರಾಯಚೂರು ಜಿಲ್ಲಾ ಪೊಲೀಸ್ ಲಿಂಗಸುಗೂರು ಉಪವಿಭಾಗ ಮುದಗಲ್ ಪೋಲೀಸ್ ಠಾಣೆ ವತಿಯಿಂದ ಪಟ್ಟಣದ ಭಾರತ್ ಫಂಕ್ಷನ್ ಹಾಲ್ ನಲ್ಲಿ ಶಾಂತಿ ಸಭೆಯ ಉದ್ದೇಶಿಸಿ ಮಾತನಾಡಿದ ಅವರು. ಮೊಹರಂ ಶಾಂತಿ ಸಭೆಯಲ್ಲಿ ಮಾತನಾಡಿದರು. ಮೊಹರಂ ಹಬ್ಬವು ಭಾವೈಕ್ಯತೆಯ ಸಂಕೇತವಾಗಿದ್ದು, ಸರ್ವಧರ್ಮೀ ಯರು ಸೇರಿ ಮೊಹರಂ ಮೊಹರಂ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಿಕವಾಗಿ ಆಚರಿಸಿಕೊಂಡು ಬಂದಿದೆ. ಈ ವರ್ಷವೂ ಕೂಡ ಎಲ್ಲಾ ಧರ್ಮಿಯರು ಸೇರಿಕೊಂಡು ಯಾವುದೇ ಭೇಧ ಭಾವವಿಲ್ಲದೆ ಮೊಹರಂ ಆಚರಿಸಬೇಕು. ಜೊತೆಗೆ ಸಾರ್ವಜನಿಕರೆಲ್ಲರೂ ನಮ್ಮ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು ಹಾಗೂ ತಾಲೂಕು ಆಡಳಿತ ದ ವಿವಿಧ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಹಬ್ಬ ಆಚರಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಇದೆ ರೀತಿ ಕುಡಿಯುವ ನೀರು, ಟ್ರಾಫಿಕ್ ಸಮಸ್ಯೆ, ಸ್ವಚ್ಛತೆ ಸೇರಿದಂತೆ ಪಟ್ಟಣದ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದರು

ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಅವರು ಮುದಗಲ್ ಪಟ್ಟಣದಲ್ಲಿ ಜೂನ್ 22ರಿಂದ 24ರವರೆಗೆ ಪ್ರತಿದಿವಸ ಸುಮಾರು 25 ರಿಂದ 30 ಸಾವಿರ ಜನ ಸೇರುತ್ತಾರೆ. ಜೂನ್ 25 ರಂದು ಖತಲ್ ರಾತ್ರಿ ದಿನ 80 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಜೂನ್ 26ರ ದಫನ್ ಕಾರ್ಯಕ್ರಮದ ಮೆರವಣಿಗೆಯಲ್ಲಿ 1.25 ಲಕ್ಷ ಜನ ಸೇರುವ ಸಾಧ್ಯತೆ ಇದೆ’ ಎಂದು ಸಭೆಗೆ ಮಾಹಿತಿ ನೀಡಿದರು. ಇಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯದಿಂದ ಮೊಹರಂ ಆಚರಿಸುತ್ತಾ ಬಂದಿದ್ದಾರೆ. ಈ ವರ್ಷವು ಕೂಡ ಶಾಂತಿಯುತವಾಗಿ ಹಬ್ಬವನ್ನು ಆಚರಿಸಿ, ಪೊಲೀಸ್ ಇಲಾಖೆಯ ವತಿಯಿಂದ ಅಗತ್ಯವಿರುವ ಭದ್ರತೆ ಒದಗಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಲಿಂಗಸುಗೂರು ಸಹಾಯಕ ಆಯುಕ್ತಾರಾದ ಬಸಣ್ಣೆಪ್ಪ ಕಲ್ಲಶೆಟ್ಟಿ, ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಮಸ್ಕಿ ಸಿಪಿಐ ಆರ್, ವೈ, ಜಲಗೇರಾ, ಮುದಗಲ್ಲ ಪಿಎಸ್‌ಐ ವೆಂಕಟೇಶ ಮಾಡಗೇರಿ, ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ, ಜೆಸ್ಕಾಂ ಶಾಖಾಧಿಕಾರಿ ಬೆನ್ನೆಪ್ಪ, ವಿವಿಧ ಇಲಾಖೆ ಸಿಬ್ಬಂದಿಗಳು
ಸೇರಿದಂತೆ ನೂರಾರು ಹಿಂದೂ ಮುಸ್ಲಿಂ ಸಮುದಾಯದ ಮುಖಂಡರು, ಯುವಕರು ಭಾಗವಹಿಸಿದ್ದರು.

ವರದಿ:- ಮಂಜುನಾಥ ಕುಂಬಾರ