ಮುದಗಲ್ಲ :-ಪುರಸಭೆ ವತಿಯಿಂದ ಆದಿಕವಿ ವಾಲ್ಮೀಕಿ ಜಯಂತಿ ಆಚರಣೆ..

ಮುದಗಲ್ಲ ವರದಿ..

ಪುರಸಭೆ ವತಿಯಿಂದ ಆದಿಕವಿ ವಾಲ್ಮೀಕಿ ಜಯಂತಿ ಆಚರಣೆ..

ಮುದಗಲ್ಲ: ಪ್ರಪಂಚ ದಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಯ ಮೂಲಕ ಪರಿಚಿತರಾಗಿ ರಾಮಾಯಣಕ್ಕೆ ಒಂದು ವಿಶೇಷವಾದ ಸ್ಥಾನವನ್ನು ಒದಗಿಸಿ ಕೊಟ್ಟ ಕೀರ್ತಿ ಆದಿಕವಿ ವಾಲ್ಮೀಕಿ ಜಯಂತಿ ಯನ್ನು ಪುರಸಭೆ ವತಿಯಿಂದ ಸರಳವಾಗಿ ಆಚರಣೆ ಮಾಡಲಾಯಿತು. ಪುರಸಭೆ ಯ ಸದಸ್ಯರಾದ ಹನುಮಂತಪ್ಪ ವಾಲ್ಮೀಕಿ ,ಅವರು ಆದಿಕವಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ನಂತರ ಪುರಸಭೆ ಸದಸ್ಯರು ಹಾಗೂ ಗಣ್ಯರ, ಸಿಬ್ಬಂದಿಗಳ ನಡುವೆ ನಡುವೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಯ ಉಪಾಧ್ಯಕ್ಷ ರಾದ ಅಜ್ಮೀರ್ ಬೆಳ್ಳಿಕಟ್, ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ , ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ಕಾರ್ಯದರ್ಶಿ ಯಾದ ತಮ್ಮಣ್ಣ ಗುತ್ತೇದಾರ್,
ನೈಮಲ್ಯ ಅಧಿಕಾರಿಯಾದ ಆರೀಪ್ ಹುನ್ನಿಸಾ ಬೇಗಂ, ಸದಸ್ಯರಾದ ಹನುಮಂತಪ್ಪ ವಾಲ್ಮೀಕಿ , ಹಾಗೂ ಸಿಬ್ಬಂದಿ ಯಾದ ನಿಸಾರ್ ಅಹಮದ್, ಜಿಲಾನಿಪಶ, ವಾಲ್ಮೀಕಿ ಸಮಾಜ ಶೀಲಪ್ಪ ,ದುರಗಪ್ಪ ಸಮಾಜದ ಹಿರಿಯರು,ಸೇರಿದಂತೆ ಹಾಗೂ ಪೌರ ಕಾರ್ಮಿಕರು ಉಪಸ್ಥಿತ ರಿದ್ದರು.

ವರದಿ:- ಮಂಜುನಾಥ ಕುಂಬಾರ

error: Content is protected !!