ಮುದಗಲ್ಲ :ಕಲ್ಯಾಣ ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಡಕ್ಕಲಿಗರ ಸಂಘದ ಉದ್ಘಾಟನಾ ಸಮಾರಂಭ …

ಮುದಗಲ್ಲ ವರದಿ..

ಕಲ್ಯಾಣ ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಡಕ್ಕಲಿಗರ ಸಂಘದ ಉದ್ಘಾಟನಾ ಸಮಾರಂಭ …

ಮುದಗಲ್ಲ :-ಕಲ್ಯಾಣ ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಡಕ್ಕಲಿಗರ ಸಂಘ(ರಿ) ಮುದಗಲ್ ಉದ್ಘಾಟನಾ ಸಮಾಂಭವನ್ನು ಮುದಗಲ್ ಪುರಸಭೆಯ ರಂಗ ಮಂದಿರ ಆವರಣದಲ್ಲಿ ನಡೆಯಿತು..

ಜ್ಯೋತಿ ಬೆಳಗಿಸುವ ಮೂಲಕ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಅವರ ಭಾವ ಚಿತ್ರ ಕ್ಕೆ ಪುಷ್ಪ ನಮನ ಸಲ್ಲಿಸುವ ಮುಖಾಂತರ ಸಂಘದ ಉದ್ಘಾಟನೆ ಮಾಡಲಾಯಿತು

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಶರಣಪ್ಪ ಕಟ್ಟಿಮನಿ ಮಾತನಾಡಿದರು ಪರಿಶಿಷ್ಟ ಜಾತಿ, ಪರಿಶಿಷ್ಟ ಅಲೆಮಾರಿ, ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ಎಲ್ಲ ಯೋಜನೆಗಳು ಪಾರದರ್ಶಕವಾಗಿ ಜನರಿಗೆ ತಲುಪಿಸಬೇಕು ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹಂಚಿಕೆಯಲ್ಲಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ

”ನ್ಯಾ.ನಾಗಮೋಹನ್‌ ದಾಸ್‌ ಆಯೋಗವು ಅಲೆಮಾರಿ ಜಾತಿಗಳಿಗೆ ಪ್ರತ್ಯೇಕವಾಗಿ ಶೇ.1ರಷ್ಟು ಮೀಸಲಾತಿ ನಿಗದಿ ಮಾಡಿ ಶಿಫಾರಸು ಮಾಡಿತ್ತು.

ಆ.19ರಂದು ರಾಜ್ಯ ಸರಕಾರ ಸಧಿಚಿವ ಸಂಪುಧಿಟ ಸಭೆಯಲ್ಲಿ ಬಲ ಮತ್ತು ಎಡಗೈ ತಲಾ ಶೇ.6ರಷ್ಟು ಹಂಚಿಕೆ ಮಾಡಿ, ಬಂಜಾರ, ಬೋವಿಯಂತಹ ಸ್ಪೃಶ್ಯ ಸಮುದಾಯಗಳ ಗುಂಪಿಗೆ ಅಲೆಮಾರಿಗಳನ್ನು ಸೇರಿಸಿ, ಶೇ.5ರಷ್ಟು ಮೀಸಲಾತಿ ಹಂಚಿಕೆ ಮಾಡಿದೆ. ಈ ಮೂಲಕ ದನಿ ಇಲ್ಲದ, ತಬ್ಬಲಿ ಅಲೆಮಾರಿ ಸಮುದಾಯಗಳನ್ನು ಶಾಶ್ವತವಾಗಿ ಮೂಲೆಗುಂಪು ಮಾಡಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂದರ್ಭದಲ್ಲಿ ವಿನೋದ್ ಗುಡಿಮನಿ , ಸಿದ್ದಯ್ಯ ಸ್ವಾಮಿ ಮೇಗಳಪೇಟೆ ಹಾಗೂ ಬಸವರಾಜ ಬಂಕದಮನೆ ಮಾತನಾಡಿದ್ದರು.

ನಿರೂಪಣೆಯನ್ನು ಮಾಹಾಂತೇಶ ಚಲುವಾದಿ ಅವರು ಮಾಡಿದ್ದರು ವಂದನಾರ್ಪಣೆ ಮಾರುತಿ ಡಕ್ಕಲಿಗರ ಮಾಡಿದರು

ಈ ಸಂದರ್ಭದಲ್ಲಿ ಡಕ್ಕಲಿಗರ ಸಮಾಜದ ಭೀಮಣ್ಣ ಅಶೋಕ್ , ಮಾರುತಿ, ಹನುಮಂತ, ಚನ್ನಪ್ಪ, ಬವರಾಜ ,ಸಿದ್ದಲಿಂಗ , ಪಂಪಣ್ಣ,ಹಾಗೂ ರಾಜಪ್ಪ , ಪತ್ತಾರ ಇತರರು ಉಪಸ್ಥಿತರಿದ್ದರು..

ವರದಿ:ಮಂಜುನಾಥ ಕುಂಬಾರ

Leave a Reply

error: Content is protected !!