Post Views: 629
ಪ್ರಜಾವೀಕ್ಷಣೆ ಸುದ್ದಿ : –
FLASH NEWS : ಗೌರಿಗಣೇಶ ಹಬ್ಬದ ಶುಭಾಶಯ ಕೋರಿದ ಮುಖ್ಯಮಂತ್ರಿ ಸಿದ್ಧರಾಮಯ್ಯ..!

ಬೆಂಗಳೂರು : ನಾಡಿನ ಸಮಸ್ತೆ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಭ ಕೋರಿದ್ದಾರೆ.
ಇಂದು ಎಕ್ಸ್ ನಲ್ಲಿ ಬರೆದಿರುವ ಅವರು, “ನಾಡಬಂಧುಗಳಿಗೆ ಗೌರಿ – ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಜಲಚರಗಳಿಗೆ, ಪರಿಸರಕ್ಕೆ ಹಾನಿಕಾರಕವಾದ ರಾಸಾಯನಿಕಯುಕ್ತ ಗಣೇಶ ಮೂರ್ತಿಯ ಬದಲಿಗೆ ಮಣ್ಣಿನಿಂದಷ್ಟೇ ಮಾಡಿದ ಪರಿಸರಸ್ನೇಹಿ ಗಣೇಶನನ್ನು ಪೂಜಿಸೋಣ” ಎಂದಿದ್ದಾರೆ.
“ಹಬ್ಬವನ್ನು ಸಂಭ್ರಮ – ಸಡಗರದೊಂದಿಗೆ ಆಚರಿಸುವ ಜೊತೆಗೆ ಪರಿಸರ ಕಾಳಜಿಯನ್ನು ಮರೆಯದಿರೋಣ. ವಿಘ್ನನಿವಾರಕನಾದ ಗಣೇಶನು ನಿಮ್ಮೆಲ್ಲಾ ಕಷ್ಟಗಳನ್ನು ಕಳೆದು ಸುಖ – ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
https://x.com/siddaramaiah/status/1959969518698352810
https://x.com/siddaramaiah/status/1959969518698352810