ಮುದಗಲ್ಲ ವರದಿ..
ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಿನ್ನೆಲೆ ಪೊಲೀಸರಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ..ಮುದಗಲ್ಲ :- ಗೌರಿ-ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ ಮುದಗಲ್ಲ ಪೊಲೀಸ್ ಕಟ್ಟೆಚ್ಚರ ವಹಿಸಲು ಆರಂಭಿಸಿದ್ದಾರೆ. ಹಬ್ಬಗಳು ಹತ್ತಿರ ಬರುತ್ತಿರುವ ಬೆನ್ನಲ್ಲೆ ರಾಗಿಗುಡ್ಡ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಾದ ಇಲಕಲ್ ರಸ್ತೆಯ ಸಜ್ಜಲ ಶ್ರೀ ಶಾಲೆ ಮುಂಭಾಗದಿಂದ ಪ್ರಾರಂಭಗೊಂಡು ಕಿಲ್ಲಾ, ಚೌಡಿ ಕಟ್ಟೆ, ದೇವಿಕಾ ಆಸ್ಪತ್ರೆ ಕ್ರಾಸ್, ಹೂಗಾರ ಓಣಿ, ಗಣೇಶ್ ಕೆಫೆ ಮುಂಭಾಗ, ನೀಲಕಂಠೇಶ್ವರ ದೇವಸ್ಥಾನದ ಮುಂಭಾಗದ ಮುಖ್ಯರಸ್ತೆ ಮುಖಾಂತರ ಪೊಲೀಸ್ ಠಾಣೆಗೆ ಬಂದು ಮುಕ್ತಾಯ ಮಾಡಲಾಗುತ್ತದೆ.
ಮುದಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಿಪಿಐ
ಶ್ರೀ ಬಾಲಚಂದ್ರ ಲಕ್ಕಮ್ ಮಸ್ಕಿ,ಪಿಐ ಶ್ರೀ ಪುಂಡಲಿಕ ಪಟ್ಟಾಥರ್ ಲಿಂಗಸ್ಗೂರು ,ಪಿಐ ಹೊಸಕೆರಪ್ಪ ಹಟ್ಟಿ ಠಾಣೆ, ಮುದಗಲ್ಲ ಪಿಎಸ್ಐ ವೆಂಕಟೇಶ್ ಹಾಗೂ ಪೋಲಿಸ್ ಸಿಬ್ಬಂದಿಗಳು ಪ್ರಮುಖ ರಸ್ತೆಗಳು, ಬೀದಿಯಲ್ಲಿ ಮತ್ತು ರೂಟ್ ಮಾರ್ಚ್ ನಡೆಸಲಾಯಿತು.
ವರದಿ:- ಮಂಜುನಾಥ ಕುಂಬಾರ