ಮುದಗಲ್ ಮೊಹರಂ ಅಂಗವಾಗಿ ನೆಲ ಮಳಿಗೆ ಮತ್ತು ಜೋಕಾಲಿ ಹರಾಜು ಪ್ರಕ್ರಿಯೆ…

ಮುದಗಲ್ಲ ವರದಿ..

ಮುದಗಲ್ ಮೊಹರಂ ಅಂಗವಾಗಿ ನೆಲ ಮಳಿಗೆ ಮತ್ತು ಜೋಕಾಲಿ ಹರಾಜು ಪ್ರಕ್ರಿಯೆ…

ಮೊಹರಂ ನೆಲ ಬಾಡಿಗೆ ಹಾಗೂ ಜೋಕಾಲಿ ಹರಾಜು ..

ಮುದಗಲ್ : ಪುರಸಭೆಯ ಸಭಾಂಗಣದಲ್ಲಿ ಮೊಹರಂ ಹಬ್ಬದ ನಿಮಿತ್ಯ ಚೌಡಿ ಕಟ್ಟಿ ಹತ್ತಿರವಿರುವ ನೆಲಬಾಡಿಗೆ ಹಾಗೂ ಜೋಕಾಲಿ ಹರಾಜು ಪ್ರಕ್ರಿಯೆ ಶನಿವಾರ ಜರುಗಿತು.

2025-26ನೇ ಸಾಲಿನ ಸಾರ್ವಜನಿಕರ ಹರಾಜು ಪ್ರಕ್ರಿಯೆ ಪ್ರಾರಂಭಗೊಂಡ ಮೊದಲ ಹಂತದಲ್ಲಿ ಮುಖ್ಯಾಧಿಕಾರಿ ಪ್ರವೀಣ್ ಭೋಗಾರ
ಆದೇಶದಂತೆ ನೆಲ ಬಾಡಿಗೆಗಳ ವಸುಲಾತಿ ಶುಲ್ಕ ರೂ. 1,90,300ರೂ ನಿಗದಿ ಪಡಿಸಲಾಗಿತ್ತು.

17 ಜನ ಬಿಡ್ದ್ ದಾರರು ಹರಾಜಿನಲ್ಲಿ ಭಾಗವಹಿಸಿದ್ದರು. ಶುರುವಾದ ಹರಾಜು ಪ್ರಕ್ರಿಯೆಯಲ್ಲಿ ಮುರ್ತುಜಸಾಬ್ ಎಂಬುವರಿಗೆ ರೂ.4,26,000 ರೂ. ನೆಲ ಮಾಳಿಗೆ ಹರಾಜು ಮಾಡಲಾಯಿತು.

ಅದರಂತೆ ಜೋಕಾಲಿ ಠೇವಣಿ 16,56,600ರೂ. ಆದೇಶದಂತೆ ನಿಗದಿಪಡಿಸಲಾಗಿತ್ತು ಜೋಕಾಲಿ ಹರಾಜಿನಲ್ಲಿ ಒಬ್ಬರೇ ಭಾಗವಹಿಸಿದ್ದರು ದಾಖಲಾತಿಗಳು ಸರಿಯಿಲ್ಲದ ಕಾರಣ ಅಧಿಕಾರಿಗಳು ಪರಿಗಣನೆ ತೆಗೆದುಕೊಳ್ಳಲಿಲ್ಲ.
ಆದ್ದರಿಂದ ಜೋಕಾಲಿ ಟೆಂಡರ್ ಮುಂದೂಡಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಎಸ್ ಕೆ ಅಜಮೀರ್ ಬೆಳ್ಳಿಕಟ್, ಸದಸ್ಯರಾದ ದುರಗಪ್ಪ ಕಟ್ಟಿಮನಿ, ತಸಲೀಮ್ ಮುಲ್ಲಾ, ಬಾಬು ಉಪ್ಪಾರ, ಮಹೇಬೂಬ್ ಕಡ್ಡಿಪುಡಿ, ಆರ್ ಓ ದೇವರಾಜ, ಕಂದಾಯ ವಿಭಾಗದ ಅಂತೋಣಿ,ಹಾಗೂ ಮ್ಯಾನೇಜರ್ ಸುರೇಶ,ನಿಸ್ಸಾರ ಅಹ್ಮದ, ಸಂಪತ್ ಕುಮಾರ, ಬಾಬಾ , ಮುಖಂಡರು ಸಯ್ಯದ್ ಸಾಬ್ ಹಳೇಪೇಟೆ, ಹಸನಸಾಬ್ ಕವ್ವಾ, ಮುಜ್ಜು ಕಿಲ್ಲಾ, ಕರಿಯಪ್ಪ ಯಾದವ್, ನಾಗರಾಜ ತಳವಾರ, ಖದಿರ ಪಾನ್ವಾಲೆ ಸೇರಿದಂತೆ ಬಿಡ್ಡದಾರರಿದ್ದರು.

ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!