ಮುದಗಲ್ಲ ವರದಿ..
ಅಚಾನಕ್ಕಾಗಿ, ಮನವಿ ಸಲ್ಲಿಸಿದ ಪತ್ರದಲ್ಲಿ ಬಳಸಿದ ಪದಗಳಿಗೆ ಯಾರಿಗಾದರೂ ನೋವಾದಲ್ಲಿ ಕ್ಷಮೆ ಇರಲಿ:- ಸಯ್ಯದ್ ಮುಜಾಹಿದ್..
ಮುದಗಲ್ಲ :- ಸಯ್ಯದ್ ಮುಜಾಹಿದ್ ಅಧ್ಯಕ್ಷರು( ಎಫ್ ಐ ಟಿ ಯು) ಬೀದಿ ವ್ಯಾಪಾರಸ್ಥರ ಸಂಘ ಮುದಗಲ್ ನಾನು ಸುಮಾರು ವರ್ಷಗಳಿಂದ ಮೊಹರಂ ನಲ್ಲಿ ಆಗುವ ಟೆಂಡರ್ ಪಡೆದು ಮೊಹರಂ ಹಬ್ಬದಲ್ಲಿ ಹಚ್ಚುವ ಅಂಗಡಿ ಮಾಲೀಕರು ನನಗೆ ತುಂಬ ಪರಿಚಯ ಇರುವ ಕಾರಣದಿಂದ ಇನ್ನೂ ಮುಂದೆ ಯು ಬಹಳ ಜನ ನಿಮಗೆ ಟೆಂಡರ್ ನೀಡಿದರೆ ಒಳ್ಳೆಯದು ಎಂದು ವ್ಯಾಪರಸ್ಥರ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ದಿನಾಂಕ :- 19-06-2025 ರಂದು ಪುರಸಭೆ ಮುಖ್ಯಾಧಿಕಾರಿ ಗೆ ಬೀದಿ ವ್ಯಾಪಾರಸ್ಥರ ಸಂಘವತಿಯಿಂದ
ಮನವಿ ಸಲ್ಲಿಸಿರುತ್ತೇನೆ
ಈ ಮನವಿಗೆ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಿಕೆಯಲ್ಲಿ ಬಂದ ನಂತರ ಕೆಲ ಆತ್ಮೀಯ ಬಾಂಧವರು ವಿರೋಧ ವ್ಯಕ್ತಪಡಿಸಿರುತ್ತಾರೆ ನಾನು ಸಯ್ಯದ್ ಮುಜಾಹಿದ್ ವಿನಂತಿ ಸುವುದೇನೆಂದರೆ ನಾನು ಯಾರಿಗೂ ವಯಕ್ತಿಕವಾಗಿ ನೋವುಂಟು ಮಾಡುವ ಉದ್ದೇಶ ದಿಂದ ಹೇಳಿಕೆ ನೀಡಿರುವುದಿಲ್ಲ ಅನಿರೀಕ್ಷಿತವಾಗಿ
ಯಾರಿಗಾದರೂ ನೋವಾದಲ್ಲಿ ಕ್ಷಮೆ ಇರಲೆಂದು ಬಾಂಧವರಲ್ಲಿ ಕೇಳಿಕೊಳ್ಳುತ್ತೇನೆ.
ವರದಿ:- ಮಂಜುನಾಥ ಕುಂಬಾರ