ಮುದಗಲ್ ಬಂದ್ ಸಂಪೂರ್ಣ ಯಶಸ್ವಿ…
ಮುದಗಲ್ಲ :- ಪಟ್ಟಣವನ್ನು ತಾಲೂಕು ಕೇಂದ್ರ ಹಾಗೂ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಘೋಷಣೆ ಮಾಡಬೇಕು ಎನ್ನುವ ಬೇಡಿಕೆಯನ್ನಿಟ್ಟುಕೊಂಡು ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಬುಧುವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಇದಕ್ಕೂ ಮುಂಚೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಸ್ಥಗಿತಮಾಡಿ,ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ನಂತರ ಹೋರಾಟ ಸಮಿತಿಯ ಸದಸ್ಯ ಅಶೋಕಗೌಡ ಪಾಟೀಲ್ ಮಾತನಾಡಿ ಪಟ್ಟಣ ಸುತ್ತ ಮುತ್ತಲಿನ 60 ಗ್ರಾಮಗಳು, 18 ತಾಂಡಾಗಳಿಗೆ ಕೇಂದ್ರ ಬಿಂದುವಾಗಿದ್ದು, ಎರಡು ರಾಜ್ಯ ಹೆದ್ದಾರಿ ಹೊಂದಿದೆ.

ತಾಲೂಕು ಕೇಂದ್ರವಾಗಲು ಬೇಕಾದ ಮೂಲ ಸೌಲಭ್ಯಗಳಾದ ಪುರಸಭೆ, ಕಷಿ ಉತ್ಪನ್ನ ಮಾರುಕಟ್ಟೆ, ವಿದ್ಯುತ್ ಪ್ರಸಾರಣಾ ಕೇಂದ್ರ, ಪದವಿ ಕಾಲೇಜು, ಬಸ್ ನಿಲ್ದಾಣ, ಟ್ರಜರಿ ಆಫೀಸ್, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ನಾಡ ತಹಸಿಲ್ ಕಚೇರಿ ಸೇರಿದಂತೆ ರಾಷ್ಟ್ರೀಕತ ಬ್ಯಾಂಕ್ಗಳು ಇಲ್ಲಿವೆ.ಪಟ್ಟಣ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಈ ಹಿಂದೆ ಹುಂಡೆಕಾರ್, ಗದ್ದಿಗೌಡರ್, ವಾಸುದೇವ ಸಮಿತಿಗಳು ಪಟ್ಟಣ ತಾಲೂಕು ಕೇಂದ್ರವಾಗಲು ಯೋಗ್ಯವಾಗಿದ್ದು,ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಮಾಜಿ ಶಾಸಕ ದಿ.ಎಂ.ಗಂಗಣ್ಣನವರ ನೇತತ್ವದಲ್ಲಿ ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು,ಪ್ರಯೋಜನವಾಗಿಲ್ಲ ಎಂದು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು.

ಕನಾ೯ಟಕ ಸ್ವಾಭಿಮಾನಿ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ವ್ಯಾಪಾರಸ್ಥರ ಸಂಘ,ಕಟ್ಟಡ ಕಾಮಗಾರಿ ಸಂಘಟನೆ,ಕಾಂಗ್ರೇಸ್,ಜೆಡಿಎಸ್,ಬಿಜೆಪಿ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಬಂದ್ಗೆ ಬೆಂಬಲಿಸಿ ಸರಕಾರಕ್ಕೆ ಒತ್ತಾಯಿಸಿ ಶಾಸಕ ಮಾನಪ್ಪ ವಜ್ಜಲ್,ತಹಸೀಲ್ದಾರ್ ಪುರುರಾಜಸಿಂಗ್ ಸೊಲಂಕಿ ಅವರಿಗೆಗೆ ಮನವಿ ಸಲ್ಲಿಸಿದರು.
ಈ ಧರಣಿಯಲ್ಲಿ ಕರವೇ ಮುದಗಲ್ ಘಟಕದ ಅಧ್ಯಕ್ಷ ಎಸ್.ಎ.ನಹಿಂ,ಸಂಜೀವ್ ಚಲುವಾದಿ,ಗುರುಬಸಪ್ಪ ಸಜ್ಜನ್,ಎಸ್.ಆರ್.ರಸೂಲ್,ಅಶೋಕಗೌಡ ಪಾಟೀಲ್ ,
ಶಿವಶಂಕರಗೌಡ ಉಪ್ಪಾರ ನಂದಿಹಾಳ,ನ್ಯಾಮತ್ ಖಾದ್ರಿ,ಮಹಾಂತೇಶ ಪಾಟೀಲ್,ದಲಿತ ಸಂಘದ ಮುಖಂಡರಾದ ಬಸವರಾಜ ಬಂಕದ ಮನಿ, ರಘೂವೀರ ಕಟ್ಟಿಮನಿ,ಮಂಜುನಾಥ ಬನ್ನಿಗೋಳಕರ,ಗುಂಡಪ್ಪ ಗಂಗಾವತಿ,ದೇವೆಂದ್ರ ವಕೀಲರು,ಉದಕುಮಾರ ಕಮ್ಮಾರ,ಕೃಷ್ಣಾ ಚಲುವಾದಿ,ಮೈಬೂಬಸಾಬ ಕಡ್ಡಿಪುಡಿ,ಶರಣಪ್ಪ ಕಟ್ಟಿಮನಿ,ಮೌನೇಶ ಶಿವನಗುತ್ತಿ,ರಹೀಮ್ ಷಾ,ಸೇರಿದಂತೆ ಇತರರು ಇದ್ದರು.

ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಅಂಗಡಿ, ಹೋಟೆಲ್, ಮಾರುಕಟ್ಟೆ ಬಂದ್ ಆಗಿದ್ದರಿಂದ ಸಾರ್ವಜನಿಕರು ಕುಡಿವ ನೀರಿಗಾಗಿ ಪರದಾಡಿದರು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮಸ್ಕಿ ಸಿಪಿಐ ರಾಮಣ್ಣ ಜಲಗಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.

ತಾಲೂಕಿಗೆ ನಮ್ಮ ಬೆಂಬಲ ಇದೆ
ಕಾಂಗ್ರೆಸ್ ಸರಕಾರ ಮುದಗಲ್ನ್ನು ಹೊಸ ತಾಲೂಕು ಕೇಂದ್ರವೆಂದು ಘೋಷಣೆ ಮಾಡಬೇಕು ಹಾಗೂ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಅನುಧಾನ ಮೀಸಲಿಡಬೇಕು ಎಂದು ಈಗಾಗಲೇ ಅಧಿವೇಶನದಲ್ಲಿ ನಾನಾ ಭಾರಿ ಪ್ರಸ್ತಾಪಿಸಿದರೂ ಸರಕಾರ ಕಿಂಚಿತ್ತೂ ಗಮನಹರಿಸಿಲ್ಲ.ಬಜೆಟ್ ಅಧೀವೇಶನಕ್ಕೂ ಮುಂಚೆ ಹೋರಾಟಗಾರ ಜತೆ ನಾನು ಕೂಡಾ ಭಾಗವಹಿಸಿ ಮುಖ್ಯಮಂತ್ರಿಗಳಲ್ಲಿ ಹಾಗೂ ಕಂದಾಯ ಸಚಿವರಲ್ಲಿ ಮನವಿಗೂ ಸಿದ್ದ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಪ್ರಗತಿಪರ ಸಂಘಟನೆಗಳು ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದರು.

ಮುದಗಲ್: ಪಟ್ಟಣದ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಮುದಗಲ್ ತಾಲೂಕಾ ಘೋಷಣೆ ಹಾಗೂ ಶಾಶ್ವತ ಕುಡಿಯುವ ನೀರಿಗಾಗಿ ಒತ್ತಾಯಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು.
ಮುದಗಲ್: ಪಟ್ಟಣದ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಮುದಗಲ್ ತಾಲೂಕಾ ಘೋಷಣೆ ಹಾಗೂ ಶಾಶ್ವತ ಕುಡಿಯುವ ನೀರಿಗಾಗಿ ಒತ್ತಾಯಿಸಿ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಗೆ ಮನವಿ ಸಲ್ಲಿಸಿದರು.

ಮುದಗಲ್: ಪಟ್ಟಣದ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಮುದಗಲ್ ತಾಲೂಕಾ ಘೋಷಣೆ ಹಾಗೂ ಶಾಶ್ವತ ಕುಡಿಯುವ ನೀರಿಗಾಗಿ ಒತ್ತಾಯಿಸಿ ಬಂದ್ ಗೆ ಕರೆ ನೀಡಿರುವ ಹಿನ್ಲೆಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಲಿಂಗಸ್ಗೂರು ತಹಶೀಲ್ದಾರ್ ಪುರುರಾಜಸಿಂಗ್ ಸೋಲಂಕಿ ಅವರಿಗೆ ಗೆ ಮನವಿ ಸಲ್ಲಿಸಿದರು.

ವರದಿ:- ಮಂಜುನಾಥ ಕುಂಬಾರ..