You are currently viewing ಮುದಗಲ್ಲ :- ಮೊಹರಂ: ನೆಲ ಬಾಡಿಗೆ, ಜೋಕಾಲಿ ಹರಾಜು

ಮುದಗಲ್ಲ :- ಮೊಹರಂ: ನೆಲ ಬಾಡಿಗೆ, ಜೋಕಾಲಿ ಹರಾಜು

ಮುದಗಲ್ಲ ವರದಿ…

ಮೊಹರಂ: ನೆಲ ಬಾಡಿಗೆ, ಜೋಕಾಲಿ ಹರಾಜು..

ಮುದಗಲ್: ಮೊಹರಂ ಹಬ್ಬದ ನಿಮಿತ್ತ ಅಂಗಡಿಗಳು ಹಾಗೂ ಜೋಕಾಲಿ ನೆಲ ಬಾಡಿಗೆ ಹರಾಜು ಪುರಸಭೆ ಸಭಾಂಗಣದಲ್ಲಿ ಜರುಗಿತು.

ಕಳೆದ ವಾರ ಮುಂದೂಡಿದ ಹರಾಜು ಗುರುವಾರ ಮರು ಹರಾಜು ಪ್ರಕ್ರಿಯೆ ಪ್ರಾರಂಭವಾಯಿತು. ಸರ್ಕಾರಿ ಹವಾಲು ರೂ. 4.26 ಲಕ್ಷ ನಿಗಧಿ ಮಾಡಲಾಗಿದೆ. ಹರಾಜಿನಲ್ಲಿ 9 ಜನ ಭಾಗವಹಿಸಿದ್ದರು. ಇಸ್ಮಾಯಿಲ್ ರೂ.1.96 ಲಕ್ಷಕ್ಕೆ ನೆಲ ಮಾಳಿಗೆ ಹರಾಜು ಕೂಗಿದರು.

ಜೋಕಾಲಿ ಹರಾಜು 6.30 ಲಕ್ಷಕ್ಕೆ ಕೂಗಿದರು. ಜೋಕಾಲಿ ಹರಾಜಿನಲ್ಲಿ ದಸ್ತಗೀರ ಪಾಷಾ ಎಂಬುವರಿಗೆ ರೂ.7 ಲಕ್ಷಕ್ಕೆ ಜೋಕಾಲಿ ಹರಾಜು ಕೂಗಿದರು. ಸರ್ಕಾರ ನಿಗಧಿಪಡಿಸಿದ ದರಕ್ಕೆ ಹರಾಜು ಕೂಗಿಲ್ಲ. ಈ ಹರಾಜು ಪ್ರಕ್ರಿಯೆ ಲಿಂಗಸುಗೂರು ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಅವರು ಅನುಮೋದನೆ ನೀಡಿದರೆ, ಬಿಡ್ದಾರರ ನೀಡುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರವೀಣ ಕುಮಾರ ಬೋಗಾರ್ ತಿಳಿಸಿದರು.

ಪುರಸಭೆ ವ್ಯವಸ್ಥಾಪಕ ಜಗದೀಶ ಎ. ಬಿರಾದಾರ, ಕಂದಾಯ ನಿರೀಕ್ಷಕ ಅಂತೋನಿ ರಾಜ, ಸಂಪತ್ ಕುಮಾರ ಇದ್ದರು.

Prajavikshane

Chandru R Bhanapaur

Leave a Reply

error: Content is protected !!