You are currently viewing KOPPAL NEWS : ವೇಗದ ಕಾರು ಹ್ಯಾಂಡ್ ಲಾಕ್ ಆಗಿ ಪಲ್ಟಿ: ಪ್ರಾಣಾಪಾಯದಿಂದ ಪಾರಾದ ಚಾಲಕ!

KOPPAL NEWS : ವೇಗದ ಕಾರು ಹ್ಯಾಂಡ್ ಲಾಕ್ ಆಗಿ ಪಲ್ಟಿ: ಪ್ರಾಣಾಪಾಯದಿಂದ ಪಾರಾದ ಚಾಲಕ!

KOPPAL NEWS : ವೇಗದ ಕಾರು ಹ್ಯಾಂಡ್ ಲಾಕ್ ಆಗಿ ಪಲ್ಟಿ: ಪ್ರಾಣಾಪಾಯದಿಂದ ಪಾರಾದ ಚಾಲಕ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕೊಪ್ಪಳ, ಮಾ.24 : ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಎನ್‌ಎಚ್ ಹೆದ್ದಾರಿಯಲ್ಲಿ ಹಲಗೇರಿ ಸಮೀಪ ಮಂಗಳವಾರ ಬೆಳಗ್ಗೆ ಸುಮಾರು 4 ಗಂಟೆ ಸುಮಾರಿಗೆ ಕಾರು ಅಪಘಾತ ಸಂಭವಿಸಿದೆ.

ಕೆಎ 01 ಎನ್ ಸಿ 6310 ಸಂಖ್ಯೆಯ ಪಂಚ್ ಕಾರು ಆಕಸ್ಮಿಕವಾಗಿ ಆಟೋಮೆಟಿಕ್ ಹ್ಯಾಂಡ್ ಲಾಕ್ ಆಗಿದ ಪರಿಣಾಮ, ಕೊಪ್ಪಳದ ಹೊಸಳ್ಳಿ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿ ರಸ್ತೆ ಬದಿಯಲ್ಲಿ ಬಿದ್ದಿದೆ. ಅದೃಷ್ಟವಶಾತ್ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಘಟನೆಯ ನಂತರವೂ ವಾಹನ ಸ್ಥಳದಲ್ಲೇ ಉಳಿದಿರುವುದಾಗಿ ಮಾಹಿತಿ ಲಭ್ಯವಾಗಿದೆ.

Prajavikshane

Chandru R Bhanapaur

Leave a Reply

error: Content is protected !!