LOCAL NEWS : ಗದಗ್ -ವಾಡಿ ರೈಲ್ವೆಗೆ ಮಲ್ಲಿಕಾರ್ಜುನ ಖರ್ಗೆಯವರ ಬಹು ದೊಡ್ಡ ಪಾತ್ರ : ಶಾಸಕ ಬಸವರಾಜ್ ರಾಯರೆಡ್ಡಿ

You are currently viewing LOCAL NEWS : ಗದಗ್ -ವಾಡಿ ರೈಲ್ವೆಗೆ ಮಲ್ಲಿಕಾರ್ಜುನ ಖರ್ಗೆಯವರ ಬಹು ದೊಡ್ಡ ಪಾತ್ರ : ಶಾಸಕ ಬಸವರಾಜ್ ರಾಯರೆಡ್ಡಿ

ಪ್ರಜಾ ವೀಕ್ಷಣೆ ಸುದ್ದಿ :- 

LOCAL NEWS : ಗದಗ್ -ವಾಡಿ ರೈಲ್ವೆಗೆ ಮಲ್ಲಿಕಾರ್ಜುನ ಖರ್ಗೆಯವರ ಬಹು ದೊಡ್ಡ ಪಾತ್ರ : ಶಾಸಕ ಬಸವರಾಜ್ ರಾಯರೆಡ್ಡಿ

ಕುಕನೂರು : ‘ಗದಗ್ -ವಾಡಿ ರೈಲ್ವೆ ಲೈನ್ (ಹುಬ್ಬಳ್ಳಿ ತಳಕಲ್ ಕುಕನೂರ ಯಲಬುರ್ಗಾ ಕುಷ್ಟಗಿ ಪ್ಯಾಸೆಂಜರ್ ರೈಲು ಸಂಚಾರ) ಆಗಬೇಕಾದರೆ, ಮಲ್ಲಿಕಾರ್ಜುನ ಖರ್ಗೆಯವರ ಬಹು ದೊಡ್ಡ ಪಾತ್ರವಿದೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಭಾಗದ ಜನರ ಬಗ್ಗೆ ಇರುವ ವಿಶೇಷ ಕಾಳಜಿ ಹೊಂದಿದ್ದಾರೆ’ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿದರು.

ಕಾರ್ಯಕ್ರಮ ಉದ್ಘಾಟನೆ ವೇಳೆ ಪತ್ರಕರ್ತರ ಜೊತೆಯಲ್ಲಿ ಕುಳಿತುಕೊಂಡ ಶಾಸಕ ಬಸವರಾಜ್ ರಾಯರೆಡ್ಡಿ

ನಿನ್ನೆ ಪಟ್ಟಣದ ತೆರಿನ ಗಡ್ಡಿ ಬಳಿ “ಬೀದಿ ದೀಪಗಳು ಹಾಗೂ ಹೈ ಮಾಸ್ಟ್ ಸ್ತಂಭಗಳ ಉದ್ಘಾಟನೆ ಹಾಗೂ ಹುಬ್ಬಳ್ಳಿ ತಳಕಲ್ ಕುಕನೂರ ಯಲಬುರ್ಗಾ ಕುಷ್ಟಗಿ ಪ್ಯಾಸೆಂಜರ್ ರೈಲು ಸಂಚಾರ ಪ್ರಚ್ಚಾಲೋಚನೆ ಸಭೆ ನಡೆಯಿತು.

ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ರಾಯರೆಡ್ಡಿ ‘1997ರಲ್ಲಿ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗಿದ್ದಾಗ ನಾನು, ಅತ್ಯಂತ ತೀರ ಹಿಂದುಳಿದ ಪ್ರದೇಶವಾಗಿದ್ದ ಹೈದರಾಬಾದ್ ಕರ್ನಾಟಕದ ಬಹು ನಿರೀಕ್ಷಿತ ಹಾಗೂ ದೊಡ್ಡ ಬೇಡಿಕೆ ಆದಂತ “ರೈಲು ಸಂಚಾರ” ಯೋಜನೆ ಕಾರ್ಯವನ್ನು ಮಾಡುವುದಾಗಿತ್ತು. ಆದರೆ ಈ ಕೆಲಸ ಸುಲಭದ ಮಾತಾಗಿರಲಿಲ್ಲ, ಅಂದಿನ ಪರಿಸ್ಥಿತಿಗಳ ಅನುಗುಣವಾಗಿ ನೋಡಿದ್ರೆ, ಬಹಳಷ್ಟು ಕಠಿಣವಾದ ಕೆಲಸವನ್ನು ಆಗಿನ ರೈಲ್ವೆ ಖಾತೆಯ ಕೇಂದ್ರದ ಸಚಿವರಿಗೆ, ಪ್ರಧಾನಮಂತ್ರಿಗಳಿಗೆ, ರೈಲ್ವೆ ಬೋರ್ಡ್ ಗೆ, ಯೋಜನಾ ಆಯೋಗಕ್ಕೆ ಬರೆದಂತಹ ಅದೆಷ್ಟೋ ಪತ್ರಗಳು ಬೆರದು ಖುದ್ದಾಗಿ ಭೇಟಿ ನೀಡಿ ಮನವರಿಕೆ ಮಾಡಿದ್ದಾನೆ. ಈಗಲೂ ಕೂಡ ನನ್ನ ಬಳಿ ನೂರಾರು ಪತ್ರಗಳು ಇವೆ. ಇದರ ಪ್ರತಿಫಲವೇ 2009ರಲ್ಲಿ “ಟ್ರಾಫಿಕ್ ರೈಲ್ವೆ ಸರ್ವೆ” ಮರು ಸಮೀಕ್ಷೆ ಗೊಂಡು ಈ ರೈಲು ಸಂಚಾರಕ್ಕೆ ಮುನ್ನಡಿ ಬರೆಯಲಾಯಿತು.

ಈ ಬಳಿಕ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮಂತ್ರಿ ಮಂಡಲದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ರೈಲ್ವೆ ಸಚಿವರಾಗಿದ್ದಾಗ, 2013ರ ರಲ್ಲಿ ಈ ಯೋಜನೆಗೆ ಅನುಮೋದನೆ ದೊರೆತು, 2014ರಲ್ಲಿ ಅಡಿಗಲ್ಲು ಸಮಾರಂಭ ಮಾಡಲಾಯಿತು. ಈ ಯೋಜನೆಗೆ ಸರಿಸುಮಾರು 10 ಸಾವಿರ ಕೋಟಿ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿತ್ತು. ಇದರಲ್ಲಿ ಶೇಡಾ 65ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡಿ, ಮಹತ್ವದ ಪಾತ್ರವಹಿಸಿದೆ. ಇದೀಗ 6000 ಕೋಟಿ ರೂಪಾಯಿ ಖರ್ಚು ಮಾಡಿ ಗದಗ್ -ವಾಡಿ ರೈಲ್ವೆ ಯನ್ನ ಭಾಗಶಃ 75 ರಷ್ಟು ಪೂರ್ಣ ಗೊಂಡಿದೆ. ಇನ್ನುಳಿದಂತೆ 4-5 ವರ್ಷದಲ್ಲಿ ಮುಕ್ತಾಯವಾಗಲಿದೆ ಎಂದರು. ಕುಕುನೂರು ತಾಲೂಕಿನ ತಳಕಲ್ ನಿಂದ ಕುಕನೂರು ಯಲಬುರ್ಗಾ ಕುಷ್ಟಗಿ, ಲಿಂಗಸುಗೂರು ರಾಯಚೂರು ವಾಡಿ ಮಾರ್ಗವಾಗಿ ಹೈದರಾಬಾದ್ ಗೆ ಸಂಪರ್ಕ ಹೊಂದಲಿದೆ.

ಮುಂದಿನ ದಿನಗಳಲ್ಲಿ ಯಲಬುರ್ಗಾ- ಕುಕನೂರು ಪಟ್ಟಣಗಳಿಂದ ದೇಶ ವಿವಿಧ ನಗರಗಲಿಗೆ ಸಂಚರಿಸಬಹುದು. ಉದಾಹರಣೆಗೆ ಗೋವಾದಿಂದ ಕುಕನೂರು ಮಾರ್ಗವಾಗಿ ಹೈದ್ರಾಬಾದ್, ನವದೆಹಲಿ, ಇನ್ನುಳಿದ ಬೇರೆಬೇರೆ ರಾಜ್ಯಗಳಿಗೆ ಸಂಕರ್ಪ ಕಲ್ಪಿಸುತ್ತದೆ. ಇದರಿಂದ ಈ ಭಾಗದಲ್ಲಿ ವಾಣಿಜ್ಯ ಬೆಳವಣಿಗೆ ಪೂರಕವಾಗಲಿದೆ.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಲಲಿತಮ್ಮ ಯಡೆಯಾಪುರ, ಉಪಾಧ್ಯಕ್ಷ ಪ್ರಶಾಂತ್ ಆರ್ ಬೆಳ್ಳಿನವರ್, ಗ್ರೆಡ್‌ 2 ತಹಶಿಲ್ದಾರ್‌ ಮುರುಳಿದ ರಾವ್, ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿ ನಬಿಸಾಬ್ ಕಂದಗಲ್, ಕಾಂಗ್ರೆಸ್ ನ ಹಿರಿಯ ಮುಖಂಡರು, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ತಾಲೂಕ ಅಧ್ಯಕ್ಷ ಸಂಗಮೇಶ ಗುತ್ತಿ ಹಾಗೂ ಸರ್ವಜನಿಕರು, ಪಟ್ಟಣ ಪಂಚಾಯತ್ ಎಲ್ಲಾ ಸರ್ವ ಸದಸ್ಯರು, ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

error: Content is protected !!