ಮುದಗಲ್ಲ :-ಮಳಿಗೆಗಳ ಹಾರಜಿಗೆ ಪುರಸಭೆ ನಿಲಕ್ಷ್ಯ…

ಮುದಗಲ್ಲ :-ಮಳಿಗೆಗಳ ಹಾರಜಿಗೆ ಪುರಸಭೆ ನಿಲಕ್ಷ್ಯ…

ಮುದಗಲ್ಲ :- ಪುರಸಭೆಗೆ ಆದಾಯ ತಂದುಕೊಡುವ ಬಸ್ ನಿಲ್ದಾಣದ ಮುಂದಿನ ಎರಡನೇ ಅಂತಸ್ತಿನ 10 ಮಳಿಗೆಗಳು ಹಾಗೂ ಮಟನ್
ಮಾರುಕಟ್ಟೆಯ 18 ಮಳಿಗೆಗಳನ್ನು ಹರಾಜು ಮಾಡುವ ಗೋಜಿಗೆ
ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಹೋಗಿಲ್ಲ. ಈ ಮಳಿಗೆಗಳು ಉದ್ಘಾಟನೆ ಗೊಂಡು ಅನೇಕ ವರ್ಷ ಕಳೆದರು ಹರಾಜು ಮಾಡುತ್ತಿಲ್ಲ. ಪುರಸಭೆಗೆ ಜಮಾ ಆಗುವ ಲಕ್ಷಾಂತರ
ರೂಪಾಯಿ ಆದಾಯಕ್ಕೆ ಕತ್ತರಿ ಬಿದ್ದಿದೆ.ಪಟ್ಟಣದ ಯುವಜನತೆ ಉದ್ಯೋಗವಿಲ್ಲದೇ ಸಮಸ್ಯೆಯ
ಸೂಳಿಯಲ್ಲಿದ್ದಾರೆ. ಮಳಿಗೆ ತೆರೆದರೆ ಕೆಲ ಜನರು ವ್ಯಾಪಾರ
ವ್ಯವಹಾರದತ್ತ ಮುಖ ಮಾಡುತ್ತಾರೆ. ಪುರಸಭೆಗೂ ಆದಾಯ ಸಿಗುತ್ತದೆ.

ಆದಾಯ ತಂದುಕೊಡುವ ಈ ಮಳಿಗೆಗಳ ಹರಾಜು
ಹಾಕುವ ಪ್ರಕ್ರಿಯೆಗೆ ಮೀನಮೇಷ ಎಣಿಸುತ್ತಿದ್ದಾರೆ. ಮಳಿಗೆಗಾಗಿ
ಅರ್ಜಿ ಸಲ್ಲಿಸಿದವರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರೆ’ ಎಂದು
ಡಿ.ಎಸ್.ಎಸ್. ಮುಖಂಡ ಶರಣಪ್ಪ ಕಟ್ಟಿಮನಿ ಆರೋಪಿಸಿದರು.

ಚುನಾಯಿತಿ ಪ್ರತಿನಿಧಿಗಳು ಈ ಮಳಿಗೆ ಹರಾಜು ಪ್ರಕ್ರಿಯೆ ನಡೆಸಲು ಮನಸ್ಸು ಮಾಡುತ್ತಿಲ್ಲ.ಮಟನ್ ಮಾರುಕಟ್ಟೆ ಹರಾಜು ಮಾಡಬೇಡಿ. ಇದ್ದ ವ್ಯಾಪಾರಸ್ಥರಿಗೆ ಮಳಿಗೆ ನೀಡಿ ಎಂದು ಹಿಂದಿನ ಮುಖ್ಯಾಧಿಕಾರಿ ವ್ಯಾಪಾರಸ್ಥರು ಮನವಿ ಮಾಡಿದ್ದರು. ಮಳಿಗೆಗಳು ಹರಾಜು ಮಾಡದೇ ಬಾಡಿಗೆಗೆ ಕೊಡುವುದಕ್ಕೆ ಬರುವುದಿಲ್ಲ. ಹರಾಜಿನಲ್ಲಿ ಭಾಗವಹಿಸಿ ಪಡೆದುಕೊಳ್ಳಿ ಎಂದು ಹೇಳಿದ್ದರು. ಆದರೆ, ಹರಾಜು ಪ್ರಕ್ರಿಯೆ ನಡೆಯಲಿಲ್ಲ. ಮಳಿಗೆ ಮುಂದೆ ಮೆಟ್ಟಿಲು ಸ್ಥಳದಲ್ಲಿಯೇ ಮಟನ್, ಚಿಕನ್ ಮಾರಾಟ ಮಾಡುತ್ತಿದ್ದಾರೆ. ಇಂದರಿಂದ ನೂತನ ಮಳಿಗೆಗಳು ಹಳೆ ಮಳಿಗೆಯಂತೆ ಕಾಣುತ್ತಿವೆ.

ಪುರಸಭೆ ಆದಾಯ ನೀಡುವ ಮಳಿಗೆ ಹರಾಜು ಹಾಕಬೇಕು.
ಹರಾಜು ಪ್ರಕ್ರಿಯೆಗೆ ಪುರಸಭೆ ಅಧ್ಯಕ್ಷರು ದಿನಾಂಕ ನಿಗದಿ
ಪಡಿಸಬೇಕು ಎಂದು ಭಾರತೀಯ
ದಲಿತ ಪ್ಯಾಂತರ ಮುದಗಲ್ ಘಟಕ ಅಧ್ಯಕ್ಷ ಕೃಷ್ಣ ಚಲುವಾದಿ ಹಾಗೂ ಸಾರ್ವಜನಿಕರು ಒತ್ತಾಯಿ ಸುತ್ತಿದ್ದಾರೆ.

ಪುರಸಭೆ ಆದಾಯ ತಂದುಕೊಡುವ ಮಳಿಗೆಗಳ ಹರಾಜು ತುರ್ತಾಗಿ ಆಗಬೇಕಿದೆ. ಈ ಪ್ರಕ್ರಿಯೆ ನಡೆಸಲು ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಮುಂದಾಗಬೇಕು ಎನ್ನುತ್ತಾರೆ ಸಾರ್ವಜನಿಕರು.

ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!