ಮಸ್ಕಿ ವರದಿ…
ಕಾಂತಾರ ಚಾಪ್ಟರ್ 1 ಸಿನಿಮಾ ನೋಡಲು ತೆರಳಿದ್ದ ಇಬ್ಬರು ಯುವಕರ ದುರಂತ ಸಾವು…

ಮಸ್ಕಿ :-ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಹೊರವಲಯದಲ್ಲಿ, ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಲು ತೆರಳಿದ್ದ ವೆಂಕಟೇಶ (34) ಮತ್ತು ಯಲ್ಲಾಲಿಂಗ (28) ಎಂಬ ಇಬ್ಬರು ಯುವಕರು ನಾಲೆಯಲ್ಲಿ ಈಜಲು ಹೋಗಿ ದುರಂತವಾಗಿ ಸಾವನ್ನಪ್ಪಿದ್ದಾರೆ.

ಮಧ್ಯಾಹ್ನದ ಶೋಗೆ ಟಿಕೆಟ್ ಸಿಗದಿದ್ದರಿಂದ ಸಂಜೆ ಸಿನಿಮಾ ನೋಡಲು ಯೋಜಿಸಿದ್ದರು. ಈಜಲು ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಬಗ್ಗೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ:- ಮಂಜುನಾಥ ಕುಂಬಾರ