You are currently viewing FLASH NEWS : ಕೋಲಾರ, ಬೀದರ್ ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ..!! : ಬೆದರಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!!

FLASH NEWS : ಕೋಲಾರ, ಬೀದರ್ ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ..!! : ಬೆದರಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!!

FLASH NEWS : ಕೋಲಾರ, ಬೀದರ್ ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ..!! : ಬೆದರಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ: 

ಕೋಲಾರ : ಕೋಲಾರ, ಬೀದರ್ ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಾಂಬ್ ಬೆದರಿಕೆ ಹಾಕಿದ್ದು ಕೇವಲ 13 ವರ್ಷದ ಬಾಲಕಿ ಎಂದು ಸ್ಪೋಟಕ ಮಾಹಿತಿ ತಿಳಿದು ಬಂದಿದೆ.

ಈ ಬಾಂಬ್ ಬೆದರಿಕೆಗೆ ಕಾರಣ : 

ಲೈಂಗಿಕ ದೌರ್ಜನ್ಯದಿಂದ ನೊಂದ 13 ವರ್ಷದ ಬಾಲಕಿ ಅಧಿಕಾರಿಗಳ ಗಮನ ಸೆಳೆಯುವ ಸಲುವಾಗಿ ಈ ಬಾಂಬ್ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. ಲೈಂಗಿಕ ದೌರ್ಜನ್ಯದಿಂದ ನೊಂದ 13 ವರ್ಷದ ಬಾಲಕಿ ತಮಿಳುನಾಡಿನಿಂದ ಇ-ಮೇಲ್ ಮಾಡಿ ಕೋಲಾರ, ಬೀದರ್ ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ ಹಾಕಿದ್ದಾಳೆ ಎಂದು ವರದಿಯಾಗಿದೆ.

ಬೆದರಿಕೆ ಇ-ಮೇಲ್ ನಲ್ಲಿ ಏನಿದೆ?

“ನನ್ನ ಹೆಸರು ಆರ್ನಾ ಅಶ್ವಿನ್‌ ಶೇಖರ್‌ (13). ಚೆನ್ನೈನ ಮೈಲಾಪುರ. ಬೀದರ್‌ ಮತ್ತು ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐದು ಆರ್‌ಡಿಎಕ್ಸ್‌ ಐಇಡಿಗಳನ್ನು ಇಡಲಾಗಿದೆ. ಮಧ್ಯಾಹ್ನ ಎರಡು ಗಂಟೆಯೊಳಗೆ ಜಿಲ್ಲಾಧಿಕಾರಿ ಹಾಗೂ ಅಲ್ಲಿನ ಸಿಬ್ಬಂದಿಯನ್ನು ತೆರವುಗೊಳಿಸಬೇಕು” ಎಂದು ಇಮೇಲ್‌ ಮಾಡಿದ್ದಳು ಎನ್ನಲಾಗಿದೆ. 

Prajavikshane

Chandru R Bhanapaur

Leave a Reply

error: Content is protected !!