ನಾಥುರಾಂ ಗೋಡ್ಸೆ ಬಂದರೆ ಮಾತ್ರ ಹಿಂದುಗಳ ರಕ್ಷಣೆ ಸಾಧ್ಯ: ಸೋಮಶೇಖರ ರೆಡ್ಡಿ

ಬಳ್ಳಾರಿ, ಡಿ.4: ನಾವೇನು ಅಹಿಂಸೆ ಎನ್ನುವುದಕ್ಕೆ ಮಹಾತ್ಮಾ ಗಾಂಧಿ ಅಲ್ಲ, ನಾಥುರಾಂ ಗೋಡ್ಸೆ ಬಂದರೆ ಮಾತ್ರ ಹಿಂದುಗಳ ರಕ್ಷಣೆ ಸಾಧ್ಯ ಎಂದು ನಗರದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು.
ಅವರು ಇಂದು ನಗರದಲ್ಲಿ ನಡೆದ ಬಾಂಗ್ಲಾದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಬಂದ್ ಕಾರ್ಯಕ್ರಮದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಗಡಗಿ ಚೆನ್ನಪ್ಪ ಸರ್ಕಲ್ ನಲ್ಲಿ ಮಾತನಾಡುತಿದ್ದರು. ಯುವಕರ ರಕ್ತ ಕುದಿಯುತ್ತಿದೆ. ಯಾವಾಗ ಅದು ಸ್ಪೋಟಗೊಳ್ಳುತ್ತೆ ಆಗ ಬಾಂಗ್ಲ ರಕ್ತದಲ್ಲಿ ಕೊಚ್ಚಿ ಹೋಗಲಿದೆ. ಬಾಂಗ್ಲಾ ದೇಶದಲ್ಲಿನ ದೌರ್ಜನ್ಯ ನೋಡಿ ಸುಮ್ಮನೆ ಕುಳಿತುಕೊಳ್ಳಲು ನಾವೇನು ಬಳೆ ತೊಟ್ಟಿಲ್ಲ. ಕೇಂದ್ರ ಸರ್ಕಾರ ಸುಮ್ಮನೆ ಕೂತರೂ ಹಿಂದುಗಳೆಲ್ಲ ಹೋಗಿ ಸರಿಯಾದ ಪಾಠ ಕಲಿಸಬೇಕು. ಹಿಂದುಗಳು ನಾವು ಜನಸಂಖ್ಯೆ ನಿಯಂತ್ರ ಬೇಡ, ಆರು ಜನ ಮಕ್ಕಳನ್ನು ಹೆರುವ ಮೂಲಕ ನಮ್ಮ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕು ಎಂದರು. ಪಾಕಿಸ್ಥಾನ ಕಳ್ಳ ನೋಟು ಮುದ್ರಿಸಿ ನಮ್ಮ ಮೇಲೆ ಭಯತ್ಪದನೆಗೆ ಮುಂದಾಗಿತ್ತು. ಆ ಕಳ್ಳ ನೋಟನ್ನು ಪ್ರಧಾನಿ ನರೇಂದ್ರ ಮೋದಿ ಬಂದ್ ಮಾಡಿದ್ದರಿಂದ ಇಂದು ಪಾಕ್ ಒಂದೊತ್ತು ಊಟಕ್ಕೂ ಪರದಾಡುತ್ತಿದೆಂದರು. ಬಾಂಗ್ಲಾದೇಶದಲ್ಲಿ ಹಿಂದುಗಳು ಮೇಲೆ ನಿರಂತರವಾಗಿ ದಾಳಿಯಾಗ್ತಿದೆ. ಅಲ್ಲಿನ ಸರ್ಕಾರವೇ ದಾಳಿ ಮಾಡುತ್ತಿದೆ. ಇದರಿಂದಾಗಿ ಹಿಂದುಗಳು ನೆಮ್ಮದಿಯಿಂದ ಇರಲಾಗದ ಸ್ಥಿತಿ ನಿರ್ಮಾಣವಾಗಿದೆ.
ಬಂಧಿಸಿರುವ ಇಸ್ಕಾನ್ ಸ್ವಾಮೀಜಿ ಪರ ವಾದಕ್ಕೆ ಮುಂದಾದ ವಕೀಲರ ಮೇಲೆ ಹಲ್ಲೆಯಾಗಿದೆ. ಇದ್ಯಾವುದು ಸರಿಯಾದ ಕ್ರಮವಲ್ಲ ಕೂಡಲೇ ಈ ಹಲ್ಲೆ ನಿಲ್ಲಬೇಕು. ನಮ್ಮ ದೇಶದಲ್ಲಿ ಯಾವತ್ತೂ ಹಿಂದುಗಳು ಒಂದೇ ವಿಶ್ವದಾದ್ಯಂತ ಎಲ್ಲೇ ಹಿಂದುಗಳ ಮೇಲೆ ದಾಳಿಯಾದ್ರೂ ಸುಮ್ಮನಿರಲ್ಲೆ. ನಾವೆಲ್ಲ ಬಾಂಗ್ಲಾದ ಮೇಲೆ ದಂಡೆತ್ತಿ ಹೋಗಲು ರೆಡಿ ಆಗಿ ಎಂದಾಗ ಎದುರಿಗೆ ಇದ್ದ ಜನರೆಲ್ಲ ಕೈ ಎತ್ತಿ ಸಮ್ಮತಿ ಸೂಚಿಸಿದರು. ನಾವೆಲ್ಲ ಹಿಂದು ಒಂದು ಎಂಬುದನ್ನು ತೋರಿಸಬೇಕಿದೆ ಎಂದರು.

Prajavikshane

Chandru R Bhanapaur

Leave a Reply

error: Content is protected !!