-
ನೂತನ ರೈಲು ಮಾರ್ಗ ಅನುಷ್ಠಾನದಲ್ಲಿ ಬಿಜೆಪಿಯದ್ದೇ ಸಿಂಹಪಾಲು-ಶಿವಕುಮಾರ ನಾಗಳಾಪುರ ಮಠ
-
ಕುಕನೂರು.ಹೈದರಾಬಾದ್ ನಿಜಾಮರ ಕಾಲದಿಂದಲೂ ಗಿಣಿಗೇರ-ಮಹಿಬೂಬ ನಗರ ಹಾಗೂ ಗದಗ-ವಾಡಿ ರೈಲು ಮಾರ್ಗದ ಕಾಮಗಾರಿ ಕುಂಟುತ್ತ ಸಾಗಿದ್ದು ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಮೇಲೆ ಕಾಮಗಾರಿಗಳಿಗೆ ವೇಗ ದೊರೆತದ್ದು ಮಾತ್ರವಲ್ಲ ಲೋಕಾರ್ಪಣೆ ಸಹ ಜರುಗಿದ್ದು ಇದರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯವೆ ಪ್ರಮುಖವಾಗಿದೆ ಎಂದು ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷ ಶಿವಕುಮಾರ ನಾಗಲಾಪುರಮಠ ಹೇಳಿದರು.
-
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ ನಾಗಲಾಪುರ ಮಠ ಮಾತನಾಡುತ್ತ ಇತ್ತೀಚಿಗೆ ಪಟ್ಟಣದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರಿಂದ ರೈಲ್ವೆ ಪ್ರಾಚ್ಯಾವಲೋಚನೆ ಸಭೆ ಜರುಗಿದ್ದು ಈ ಸಭೆಯಲ್ಲಿ ರಾಯರೆಡ್ಡಿ ಅವರು ಗದಗ-ವಾಡಿ ಹಾಗೂ ಗಿಣಿಗೇರಾ- ಮಹಬೂಬ ನಗರ ರೈಲ್ವೆ ಮಾರ್ಗ ನಿರ್ಮಾಣದಲ್ಲಿ ಕೇವಲ ಕಾಂಗ್ರೆಸ್ ಶಾಸಕ ಹಾಗೂ ಸಂಸದರ ಪ್ರಯತ್ನವಿದ್ದು ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮ ಪ್ರಮುಖವಾಗಿದೆ ಎಂದು ಹೇಳಿರುವುದು ಹಾಸ್ಯಸ್ಪದವಾಗಿದ್ದು ವಾಸ್ತವವಾಗಿ ಇತಿಹಾಸವನ್ನು ಮೆಲಕು ಹಾಕಿದರೆ ಈ ಕಾಮಗಾರಿಗಳಲ್ಲಿ ಕಾಂಗ್ರೆಸ್ ಕೊಡುಗೆ ಅತ್ಯಂತ ಕಡಿಮೆಯಾಗಿದ್ದು ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೋದಿ ಅವರ ದಿಟ್ಟ ನಿರ್ಧಾರ ಜೊತೆಗೆ ನೆನೆಗುದಿಗೆ ಬಿದ್ದಿದ್ದ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಹಾಗೂ ಅತ್ಯಂತ ವೇಗವಾಗಿ ಹೆದ್ದಾರಿ ಮತ್ತು ರೈಲ್ವೆ ನಿರ್ಮಾಣ ಸಂಪೂರ್ಣವಾಗಬೇಕು ಎಂಬ ಆದೇಶದ ಹಿನ್ನೆಲೆಯಲ್ಲಿ ಹಾಗೂ ಮೋದಿಯವರು ಬಿಡುಗಡೆಗೊಳಿಸಿದ ಅನುದಾನದಿಂದ ಈ ರೈಲು ಮಾರ್ಗಗಳು ಇಂದು ಗಿಣಿಗೇರ ಮೆಹಬೂಬ ನಗರ ರೈಲ್ವೆ ಮಾರ್ಗ ದಲ್ಲಿ ಗಿಣಿಗೇರಾದಿಂದ ಸಿಂಧನೂರು ವರೆಗೆ ಹಾಗೂ ಗದಗ ವಾಡಿ ರೈಲು ಮಾರ್ಗ ತಳಕಲ್ ಜಂಕ್ಷನ್ ನಿಂದ ಕುಷ್ಟಗಿ ಪಟ್ಟಣದವರಿಗೆ ರೈಲು ಪ್ರಾರಂಭವಾಗಿದ್ದು ಇದಕ್ಕೆಲ್ಲ ಕೊಪ್ಪಳದ ಲೋಕಸಭಾ ಸದರಾಗಿದ್ದ ಶಿವರಾಮೇಗೌಡ ಹಾಗೂ ಸಂಗಣ್ಣ ಕರಡಿ ಅವರ ಪರಿಶ್ರಮ ಅತ್ಯಮೋಘವಾಗಿದ್ದು ಇವನ್ನೆಲ್ಲಾ ಮರೆಮಾಚಿ ರಾಯರೆಡ್ಡಿ ಅವರು ನಾನೇ ಮಾಡಿದ್ದು ಎಂದು ಹೇಳುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
-
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳು ಸಂಪೂರ್ಣಗೊಂಡಿದ್ದು ಬಾಕಿ ಏನಾದರೂ ಇದ್ದರೆ ಹೇಳಿ ಎಂದು ಪ್ರತಿ ಸಭೆಗಳಲ್ಲಿ ಶಾಸಕರು ಹೇಳಿಕೊಳ್ಳುತ್ತಿದ್ದು, ತಾಲೂಕು ಕೇಂದ್ರವಾಗಿರುವ ಕುಕನೂರು ಪಟ್ಟಣದಲ್ಲಿಯೇ ಸರ್ಕಾರಿ ಪದವಿ ಕಾಲೇಜು ಇಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದ್ದು ಇಂತಹ ಅಭಿವೃದ್ಧಿ ಕಡೆ ಶಾಸಕರು ಗಮನಹರಿಸಲಿ ಎಂದು ಹೇಳಿದರು ಜೊತೆಗೆ ಕುಕನೂರು ಪಟ್ಟಣದಲ್ಲಿ ಕ್ರೀಡಾ ಪ್ರೇಮಿಗಳಿಗೆ ಸುಸಜ್ಜಿತ ಕ್ರೀಡಾಂಗಣ ವಿಲ್ಲ, ಸಾರ್ವಜನಿಕರ ಕೆಲಸ ಕಾರ್ಯಗಳು ಮಾಡಿಕೊಡುವ ಆಡಳಿತ ಸೌಧವಿಲ್ಲದೆ ಒಂದೊಂದು ಕಾರ್ಯಾಲಯಗಳು ಒಂದೊಂದು ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಇಂತಹ ಸಮಸ್ಯೆ ಸಾರ್ವಜನಿಕರ ಎದುರಿಗಿದ್ದು ಇದರ ಕಡೆ ಗಮನಹರಿಸಿ ಆಡಳಿತ ಸೌಧ ಹಾಗೂ ಕ್ರೀಡಾಂಗಣವನ್ನೂ ತ್ವರಿತಗತಿಯಲ್ಲಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ನಾವು ಎತ್ತರದ ಪ್ರದೇಶದಲ್ಲಿದ್ದೇವೆ ಇದು ಸಾಧ್ಯವಿಲ್ಲದ ಮಾತು ಎಂದು ಹಿಂದೆ ಹೇಳಿದ್ದ ರಾಯರೆಡ್ಡಿ ಅವರು ಅವರ ಅಧಿಕಾರದ ನಂತರದ ದಿನಗಳಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಪ್ರಯತ್ನದಿಂದ ಕೆರೆ ಜೀವನೋದ್ಧಾರ ಹಾಗೂ ಕೆರೆ ತುಂಬಿಸುವ ಕಾರ್ಯ ಜರುಗಿದ್ದು ಇದನ್ನು ಸಹ ತಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸ ಎಂದು ಹೇಳಿದರು.
ಪ್ರಮುಖರಾದ ಮಂಜುನಾಥ ನಾಡಗೌಡ ಮಾತನಾಡುತ್ತಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು 1994-95 ರಲ್ಲಿ ಯಲಬುರ್ಗಾ ಮುಖಾಂತರ ರೈಲು ಮಾರ್ಗದ ಕನಸು ಕಂಡಿದ್ದು ಅದನ್ನು ನನಸು ಮಾಡುವ ಸಂಕಲ್ಪ ಮಾಡಿರುವುದು ಶ್ಲಾಘನೀಯ ವಿಷಯ ಆದರೆ ಅವರ ಕನಸು ಎಂದು ನನಸಾಗಿದ್ದು ಕ್ಷೇತ್ರದ ಜನತೆಗೆ ಅನುಕೂಲಕರ ವಾತಾವರಣ ನಿರ್ಮಿಸಿದ್ದು ಎಷ್ಟು ನಿಜವೋ ಈ ಕಾಮಗಾರಿ ಲೋಕಾರ್ಪಣೆ ಗೊಳ್ಳುವ ತನಕ ಮೋದಿ ಅವರ ಕೊಡುಗೆ ಕೂಡ ಅಷ್ಟೇ ನಿಜವಾಗಿದೆ ಆದರೆ ಬಸವರಾಜ ರಾಯರೆಡ್ಡಿ 2014ರಿಂದ 2025 ರವರೆಗಿನ ಅಭಿವೃದ್ಧಿಯನ್ನು ಮಾತ್ರ ಎಲ್ಲೋ ಪ್ರಸ್ತಾವನೆ ಮಾಡದೆ ಇರುವುದು ಮಾತ್ರ ಯೋಚನೆ. ನರೇಂದ್ರ ಮೋದಿ ಕೇಂದ್ರ ಸರ್ಕಾರದ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಹಿಂದಿನ ಯುಪಿಎ ಸರ್ಕಾರದ ಅಪೂರ್ಣಗೊಂಡ ಯೋಜನೆಗಳಿಗೆ ಚಾಲನೆ ದೊರಕಿದ್ದು ಗಿಣಿಗೇರಾ-ಮೈಬೂಬ್ ನಗರ ರೈಲು ಮಾರ್ಗದ ಮೂರು ಹಂತ ಹಾಗೂ ಗದಗ-ವಾಡಿ ರೈಲು ಮಾರ್ಗ ಮೊದಲ ಹಂತ ಚಾಲನೆ ದೊರಕಿದ್ದು ಇಂದು ಕೆಲ ಹಂತದ ಕಾಮಗಾರಿ ಲೋಕಾರ್ಪಣೆಗೊಂಡಿರುವುದು ಸತ್ಯಾಂಶವಾಗಿದೆ. ಜೊತೆಗೆ ರಾಜ್ಯದಲ್ಲಿ ವಿದ್ಯುತ್ ರೈಲ್ವೆ ಲೈನ್ ಕೇವಲ 16 ಕಿಲೋಮೀಟರ ಇದ್ದಿದ್ದು ಮೋದಿ ಅಧಿಕಾರಕ್ಕೆ ಬಂದ ನಂತರ 1800 ಕಿಲೋಮೀಟರ್ ವಿಸ್ತೃತಗೊಂಡಿರುತ್ತದೆ ಎಂದರು.
ಈ ವೇಳೆಯಲ್ಲಿ ಭಾರತೀಯ ಜನತಾ ಪಕ್ಷದ ಪ್ರಮುಖರಾದ ಮಾರುತಿ ಗಾವರಾಳ, ಶರಣಪ್ಪ ಬಣ್ಣದಬಾವಿ, ಕರಬಸಯ್ಯ ಬಿನ್ನಾಳ, ಅಮರೇಶ ಹುಬ್ಬಳ್ಳಿ, ಲಕ್ಷ್ಮಣ ಕಾಳಿ, ಕನಕಪ್ಪ ಬ್ಯಾಡರ, ಇನ್ನಿತರರು ಪಾಲ್ಗೊಂಡಿದ್ದರು.