ವಿಕಲಚೇತನರ ಪೋಷಕರು ಮತ್ತು ವಿಕಲಚೇತನರ ಪುನವ೯ಸತಿ ಕಾಯ೯ಕತ೯ರಿಗೆ ಹಮ್ಮಿಕೊಂಡಿದ್ದ ಸಮುದಾಯ ಆಧಾರಿತ ಪುನವ೯ಸತಿ 10 ಹೆಜ್ಜೆಗಳ ಮಾಹಿತಿ ಕಾಯಾ೯ಗಾರ…

ಮುದಗಲ್ಲ ವರದಿ..
ವಿಕಲಚೇತನರ ಪೋಷಕರು ಮತ್ತು ವಿಕಲಚೇತನರ ಪುನವ೯ಸತಿ ಕಾಯ೯ಕತ೯ರಿಗೆ ಹಮ್ಮಿಕೊಂಡಿದ್ದ ಸಮುದಾಯ ಆಧಾರಿತ ಪುನವ೯ಸತಿ 10 ಹೆಜ್ಜೆಗಳ ಮಾಹಿತಿ ಕಾಯಾ೯ಗಾರ…
ಮುದಗಲ್ಲ :-ಸಮೀಪದ ಬನ್ನಿಗೋಳ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯತ. ತಾಲೂಕ ಪಂಚಾಯತ ಲಿಂಗಸುಗೂರು ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರಾಯಚೂರು ಇವರುಗಳ ಸಹಯೋಗದಲ್ಲಿ ಬನ್ನಿಗೋಳ. ಹೂನೂರು ಮತ್ತು ನಾಗಲಾಪೂರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ವಿಕಲಚೇತನರು.
ವಿಕಲಚೇತನರ ಪೋಷಕರು ಮತ್ತು ವಿಕಲಚೇತನರ ಪುನವ೯ಸತಿ ಕಾಯ೯ಕತ೯ರಿಗೆ ಹಮ್ಮಿಕೊಂಡಿದ್ದ ಸಮುದಾಯ ಆಧಾರಿತ ಪುನವ೯ಸತಿ 10 ಹೆಜ್ಜೆಗಳ ಮಾಹಿತಿ ಕಾಯಾ೯ಗಾರವನ್ನು ಹಮ್ಮಿಕೊಳ್ಳಲಾಯಿತು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಮ್ಮ ವಹಿಸಿಕೊಂಡು ಕಾಯ೯ಕ್ರಮವನ್ನು ಉದ್ಘಾಟಿಸಿದರು.
ಶ್ರೀ ವೀರುಪಾಕ್ಷಯ್ಯ ಕಾಳಾಪೂರ ಗ್ರಾಮೀಣ ಪುನವ೯ಸತಿ ಕಾಯ೯ಕತ೯ರು ಕಾಳಾಪೂರರವರು ಕಾಯ೯ಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಯ೯ಕ್ರಮದಲ್ಲಿ ವಿಕಲಚೇತನರ ಹಕ್ಕುಗಳ 2016 ರ ಕಾಯ್ದೆಯ ಉಪನ್ಯಾಸಕರಾಗಿ ಶ್ರೀ ಸುರೇಶ ಭಂಡಾರಿ ರಾಜ್ಯಾಧ್ಯಕ್ಷರು ಆರ್ ಪಿ ಡಿ ಟಾಸ್ಕ್ ಪೋಸ೯. ವಿಕಲಚೇತನರ ಸಬಲೀಕರಣ ಇಲಾಖೆಯ ಯೋಜನೆಗಳ ಮಾಹಿತಿದಾರರಾಗಿ ಶ್ರೀ ನಾಗರಾಜ ಜಾವೂರ ವಿವಿದೋದ್ದೇಶ ಪುನವ೯ಸತಿ ಕಾಯ೯ಕತ೯ರು ಲಿಂಗಸುಗೂರು. ಬನ್ನಿಗೋಳ ಗ್ರಾಮ ಪಂಚಾಯಿತಿ ಪುನವ೯ಸತಿ ಕಾಯ೯ಕತ೯ರಾದ ಶ್ರೀ ಹುಸೇನಬಾಷಾ ಬನ್ನಿಗೋಳ. ಪಂಚಾಯಿತಿ ಸಿಬ್ಬಂದಿ ಶ್ರೀ ನಂದಪ್ಪ ಮರಳಿ. ಕಾಯ೯ಕ್ರಮದ ನಿರೂಪಕರಾಗಿ ಶ್ರೀ ಅಮರೇಶ ಐದಭಾವಿ ಗ್ರಾಮೀಣ ಪುನವ೯ಸತಿ ಕಾಯ೯ಕತ೯ರು ದೇವರಭೂಪೂರ.   ಬನ್ನಿಗೋಳ.ಹೂನೂರು.ನಾಗಲಾಪೂರ ಸೇರಿದಂತೆ ತಾಲೂಕಿನ ಗ್ರಾಮೀಣ ಪುನವ೯ಸತಿ ಕಾಯ೯ಕತ೯ರು. ವಿಕಲಚೇತನರು ಹಾಗೂ ವಿಕಲಚೇತನರ ಆರೈಕೆದಾರರು ಭಾಗವಹಿಸಿದ್ದರು.
 ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!